________________
ಸಮಗ್ರ ಕಾದಂಬರಿಗಳು ೩೬೯ ಇಲ್ಲದಿರುವಾಗ, ನಮ್ಮ ಹುಡುಗ ಇದನ್ನ ಕಪ್ಪುಕಲ್ಲು ನೋಡಲಿಕ್ಕೆ ಅಂದವಾಗಿದೆ ಅಂತ ಆಟವಾಡಲು ತೆಕ್ಕೊಂಡು ಹೋಗಿ, ಅಲ್ಲೆಲ್ಲೋ ಕಳೆದುಬಿಟ್ಟು ಬಂದಿದ್ದಾನೆ... ನಾನು ಅವನು ಆಟ ಆಡ್ತಿದ್ದ ಜಾಗದಲ್ಲೆಲ್ಲ ತಲಾಷುಮಾಡಿದೆ. ಎಲ್ಲೂ ಸಿಗಲಿಲ್ಲ.... ಆವೊತ್ತಿನಿಂದ ನಿಮಗೆ ಮುಖ ತೋರಿಸಲೂ ನನಗೆ ಸಂಕೋಚವಾಗಿತ್ತು.... ಅಯ್ಯೋ, ಸತ್ಯವನ್ನ ಎಷ್ಟು ದಿನ ಮುಚ್ಚಲು ಸಾಧ್ಯ?.... ಯಾವತ್ತಿದ್ದರೂ ಹೇಳಲೇಬೇಕು-ಅದಕ್ಕೇ ಈ ದಿನ ಹೇಳೇಬೀಡೋಣಾಂತ ಧೈರ್ಯ ಮಾಡಿ ಬಂದೆ” ಎಂದುಬಿಟ್ಟ. ಅವನ ಉದ್ಧಟತನಕ್ಕೆ ಶಾಸ್ತ್ರಿಗಳಿಗೆ ಆರಂಭದಲ್ಲಿ ಹುಚ್ಚುಕೊಪ ಬಂದಿತು. ಆದರೆ ಕ್ರಮೇಣ ಅದನ್ನೂ ಅಡಗಿಸಿಕೊಂಡರು. ಇಂಥ ದುಷ್ಟರಿಗೆ ಒಂದು ವಸ್ತುವನ್ನು ಕೊಟ್ಟು, ಅದನ್ನು ಹಿಂದಕ್ಕೆ ಪಡೆಯುವೆನೆಂದು ನಾನು ಭಾವಸಿದ್ದೇನನ್ನ ಮೊದಲು ಅವಿವೇಕ!- ಎಂದು ಸಮಾಧನ ತಂದುಕೊಳ್ಳಲು ಯತ್ನಿಸಿದರು. “ಹೋಗಲಿ, ಬಿಡು. ಯಾರೂ ಏನನ್ನೂ ಶಾಸ್ವಾತವಾಗಿ ಇಟ್ಟುಕೊಳ್ಳಲು ಆಗಲ್ಲ.... ಎಲ್ಲರೂ ಒಂದು ದಿನ ಹೋಗಲೇಬೇಕಲ್ಲ!” ಎಂಬ ಕಹಿ ಬೆರೆತತ್ತೋಪದೇಶದಲ್ಲಿ ಅವರ ಕೋಪ ಹಿಂಗಿತು. ೩೯ ಒಂದು ಸಂದೆ ನಂಜೇಗೌಡ ವೊಲದಲ್ಲಿ ಅನ್ನ ಆಳುಗಳು 'ಗುದ್ದ'ತೋಡ ಇದ್ದರು. ಆಗಲೆ ಕೆಲಸದಿಮದ ಗುಡ್ಡಿಗೆ ಇಂದಿರುಗಿದ್ದ ಲಕ್ಕ ಅಟ್ಟೇಲಿ ಯಾರು ಸತ್ತರು?- ಅಂತಾ ಚಿಂತಿಸ್ತಾ ಕುಂತ. ವಸಿ ವೊತ್ತು ಇಂಗೆ ಕಳೀತು. ನಾಕುಜನ ವೊತ್ತ ಚಟ್ಟದ ಮ್ಯಾಲೆ ಒಂದು ಎಣ ಬಂತು. ಚಟ್ಟದ ಮುಂದೆ ನಂಜೇಗೌಡ್ರ ಅವರ ಸಂಬಂಧಿಕ ಗಂಡಸ್ರು ಇದ್ದರು. ಅದರ ಇಂಚೋರಿ ನೆಂಟ್ರ ಎಂಗಸ್ತು ಕಣ್ಣಿರ ಕಚ್ಚಿ, ಬಾಯ್ದೆ ಬಟ್ಟೆ ತುರುಕಿ, ಬತ್ತಾ ಇದ್ದರು. ಗುದ್ದ ಸಮೀಪಿಸ್ತಲೆ ಚಟ್ಟಾವ ಇಳುಕಿದು, ಅಮ್ಯಾಕೆ ಸಿವಾಚಾರದೋರು ಎಣಕ್ಕೆ ಮಾಡೊ ಪತ್,ತಿಮ್ಯಾರೆ ಕ್ರಿಯಾದಿಗಳ ನಡಸಿ, ಎಣವ ಗುಡ್ಡದೋಳೀಕೆ ಇಳಿಸಿದ್ದು, ಅನಂತ್ರ ಕಡದು ತಂದಿದ್ದ ಗಬ್ಬದ ಬಳೆಯ ಗುದ್ದಕಿಟ್ಟು ಮಣ್ಣು ಮುಚ್ಚಿದರು. ಎಣದ ತಲೆದಿಸ್ಥೆ ಗುದ್ದದ ಅಂಚಲ್ಲೆ ಒಂದು ಕಲ್ಲು, ಕಾಲು ದಿಗ್ಗೆ ಒಂದು ಕಲ್ಲು ನೆಟ್ಟರು. ಆ ಎಂಗಸ್ನ ಎಣ ನಂಜೇಗೌಡ ಎಡತೀದು ಅಂತಃ ನಂಜೇಗೌಡ ತಾನು ವೊದಿದ್ದ ವಲ್ಲಿಯಿಂದ ಕಣ್ಣೀರವರುಸ್ತ ನಿಂತಿದ್ದಾಗ್ಗೆ-ಲಕ್ಕಂಗೆ ತಿಳಿದುವೋಗಿತ್ತು. ಎಲ್ಲರೂ ಸೋಕ ಮಾಡ್ತ ವೊಂಬೋದಮ್ಯಲೂವೆ ಲಕ್ಕ ತೆವರಿ ಮ್ಯಾಲೆ