ಪುಟ:ವೈಶಾಖ.pdf/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೭೩ “ಐ, ವೋಟೂ ನಿಂಗೆ ಸ್ವತ್ತಾಗಲ್ವ?... ಇಲ್ನೋಡು ಲಕ್ಕ- ಈ ನಂಜೇಗೌಡ ಎಡತಿ ಸತ್ತಾಗ ಅವಳ ಮೈಮ್ಯಾಲೆ ಭಾರಿ ಚಿನ್ನದ ನಡುವೆ ಯೇರಿಕಂಡಿತ್ತು. ಅವಳ ಚೆಂದ ನೋಡಿ, ಬ್ಯಾರೆ ಗಂಡಸರು ಅವಳ ಮೇಲೆ ಕಣ್ಣಾಕ್ತಾರೆ ಅಂತ ಸಿಕ್ಷೆ ಕ್ವಿಚೂವೆ, ಅವಳ ಚಿನ್ನದ ವಡುವೇಲಿ ಸುಂಗಾರ ಮಾಡಕ್ಕೆ ಅವಯ್ಯಂಗೆ ಬೋ ಇಸ್ಟವಂತೆ, ಅವಮ್ಮೆ ನಂಗೆ ಸಿಕ್ಕದಾಗ್ನೆಲ್ಲ ನನ್ನ ಕುಟ್ಟೆ ಯೋಳೋಳು. ನೆಲ ಕಚ್ಚೇವಂಗೆ ವೊಡದೂ ಬುಡೋದು. ಆಮ್ಯಾಕೆ ನನ್ನ ಅಣ್ಣತಮ್ಮದೀರೆ ಎದುರಿ, ಅವರೆ ಯೇಳೆ ಇರಲೀಂತ, ಸಣ್ಣಪುಟ್ಟ ಚಿನ್ನದ ವಡುವೆ ಮಾಡಿಸಿಕಡಾದು... ಸಣ್ಣ ಪುಟ್ಟ ಏಟು ವೊಡದ್ರೆ ಏನೂ ಆಡಿರನಿಲ್ಲಅದುಕೆ, ನಾನು ಅವರ ಏಟು ವಡಿಯಕ್ಕೆ ಮುಟ್ಟಿಕಂಡಾಗ್ಲೆಲ್ಲ, 'ದ್ಯಾವರೆ, ಅವರ ಏಟು ಈ ವತ್ತ ಜೋರಾಗೆ ಬೀಳಲೀಂತ ಪಾರ್ತನೆ ಮಾಡ್ತಿದ್ದೆ'-ಅನ್ನಾಳು!” “ಅಂಗಾರೆ ಪುರಾ ವಡವೆ ಇದ್ದರಬೇಕಲ್ವ ಅತ್ತೆ, ಅಯಮ್ಮನತ್ರ?” “ಮಸ್ತಾಗಿತ್ತು. ಸಾಯೋ ವೊತ್ನಲ್ಲಿ, ಗೌರಮ್ಮನ ಮೈಮ್ಯಾಲಿದ್ದ ವಡವೇನೆಲ್ಲ ತಗಿಯಕ್ಕೆ ಸುರು ಮಾಡಿದ್ರು, ಕೈಗೆ ಸಿಕ್ಕಿದ ಚಿನ್ನದ ಪೌಚಿ, ದಪ್ಪಾನೆ ಚಿನ್ನದ ಬಳೆಗಳು, ಕುತ್ತಿಗೆ ಆಕಿದ್ದ ದೊಡ್ಡ ಗುಂಡಿನಸರ, ಚಿನ್ನದ ಕಾಸಿನಸರ, ನಡೀಗೆ ತ್ವಡಿಸಿದ್ದ ಬೆಳ್ಳಿ ಗೆಜ್ಜೆಡಾಬು- ಈ ನಡುವೆ ತರಗೆಯೋವರೂ ಸುಮ್ಮಕಿದ್ದೋಳು, ಕೆಂಪು ಅರಳು ಮೆಟ್ಟಿದ ಕಿವಿ ವಾಲೆ, ಕುತ್ತಿಗೆ ಆಕ್ಷ ಚಿನ್ನದ ದಪ್ಪಾನೆ ಅಡಿಕೆ, ಏಡೂ ಬೆಳ್ಳಿಗೂ ತ್ವಡಿಸಿದ್ದ ಚಿನ್ನದುಂಗರ, ನನ್ನ ಮುಸ್ಟಿ ವೋಟು ಗಾತ್ರದ ಚಿನ್ನದ ಲಿಂಗದಕಾಯಿ, ಇವ್ರ ಮಾತ್ರ ತಗಿಯಕ್ಕೆ ಅವುಳು ಅವಕಾಶ ಕ್ವಲ್ಲ... ಅವುಳು ಸಾಯೋ ವ್ಯಾಲ್ಯಾದಲ್ಲಿ ನಾನೂ ಅಲ್ಲೇ ನಿಂತಿದ್ದಿ- ಅವಳ ಅವುರಟ್ಟಿ ಜಗಲಿ ಮ್ಯಾಲೆ ತಂದು ಮನಗಿಸಿದು, ಅವಳ ಜಗಲಿಗೆ ಇಡುದ ವಸಿವೋತ್ಸಲೆ ಕೈಕಾಲು ಆಡೋದು ನಿಂತಿದ್ದ ಕಂಡು, ನಂಜೇಗೌಡ ಅವಳ ಮೈಮ್ಯಾಗಿನ ವಡವೆ ಬಿಚ್ಚಕ್ಕೆ ಸುರು ಮಾಡ್ಡ ಎಲ್ಲಾ ವಡವೆ ಬಿಟ್ಟೋವರೂ ಆಗ್ಲೆ ಸತ್ತೋದಂಗೆ ಬಿದ್ದಿದ್ದೋಳು, ಗಂಡ ವಾಲೆ ಬಿಚ್ಚಕೆ ಕೈ ಆಕಿದಾಗ, ತಟಕ್ಕೆ ತನ್ನ ಏಡೂ ಕೈಯೆತ್ತಿ ಅಡ್ಡಿ ಮಾಡಿದ್ದಲು. ಗೌಡ ಆಮ್ಯಾಕೆ ಅಪ್ಪರ ಬೆಲೆ ಬಾಳೊ ಅಡಿಕೆ ಕೈಯಿಟ್ಟ, ಕೊಸಾರೆ ಅನ್ನ ಕೈಯ ಭದ್ರಾಗಿ ಇಡುಕಂಡ್ಡು!.... ಏನು ಮಾಡಕ್ಕೂ ಸ್ವತ್ತಾಗ್ಗೆ. ಗೌಡ ವೋಟೋಂದ ಅಲ್ಲೇ ಇದ್ದ ಮಟದ ಸ್ವಾಮಿಗಳ ಕಡೆ ನ್ಯಾಡ. ಸ್ವಾಮಿಗಳು, 'ವೋಗ್ಲಿ, ಬುಟ್ಟುಬುಡು ನಂಜೇಗೌಡ. ಅವಳೆ ಬಂಗಾರದ ಉಚ್ಚ ಇಡಿಸಿಕೋನು ಪ್ರತುಮಾಗಿ ನೀನೆಯ! ಆಗ ಸುಮಾರು ವಡವೆ ಬಿಚ್ಚಿಕಂಡಿದ್ದೀ. ಇನ್ನು ಉಳಿದಿರಾದು ವಾಲೆ, ಅಡಿಕೆ, ಲಿಂಗದ ಕರಡಿಗೆ-ಈಟು ತಾನೆ?... ವಾಲೆಭ್ಯಾಗ್ಯ ಮುತ್ತೈದೆಯೋರೆ