ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೩ “ಊರ ದೊಡ್ಡ ದೊಡ್ಡ ಕುಳಗಳ ಮ್ಯಾಲೆ ಕೆಡಿಕಾಬ್ಯಾಡ. ಅದ್ರಿಂದ ಲೇಸಾಗಕ್ಕಿಲ್ಲ. ಅವು ಒಂದು ಮೊಳ ಕೇಮೆ ಯೇಳಿದ್ರೆ, ನಾಕು ಮೊಳ ಮಾಡ್ಕೊಂಡು”- ಇದು ಅಯ್ಯನ ವರಾತ. “ಮಾಡಬಾರದ್ದ ಮಾಡೊಂದ್ರೆ ಎಂಗೆತಾನೆ ಮಾಡಕ್ಕಾದಾತು?”-ಇದು ಲಕ್ಕನ ತಕರಾರು. “ಒಂದೇಟು ಕೇಮೆ ಮಾಡಿಕ್ವಟ್ಟರೆ, ನಿನ್ನ ಮಾನಕ್ಕೆ ಮುಕ್ಕಾದಾತ?” - ಇದು ಅಯ್ಯನ ದಬಾವಣೆ. “ಅವ್ರ ಕುಟ್ಟೆ ವಾಗ್ವಾದ ಮಾಡಾದು ಒಂದೆ, ಅರೆಕಲ್ಲು ಬಂಡೆಗೆ ತಲೆ ಚೆಚ್ಚಿಕಳಾದು ಒಂದೆ!... ಈ ಗೌಡನೋ ಮಾ ಪಾತಕ, ಗಂಗಪ್ಪಂಗೆ ದಡೂತಿ ಇಸಮೂ ಅಲ್ಲ -ಸೆಣಕಲು ಸಿಳ್ಳೆಕ್ಯಾತೆ. ಆದ್ರೆ ಗುಳ್ಳೆ ಲಕ್ಕನಂತ ಕುಯುಕ್ತಿ, ತನ್ನ ಕಿತಾಪಂದ ಊರೆ ಅತ್ತಿ ಬೇಡ್ತಿ, ತಾನು ಮತ್ರ ಕಾಣ್ಣ ಪಾಯಿ ತರ ನಟನೆ ಮಾಡಿ, ಅಯ್ಯಯ್ಯೋ ಇದ್ಯಾವ ಮನೆಹಾಳನಪ್ಪ ಈ ಕೆಲುಸ ಮಾಡೋನೂಂತ ತಾನೇ ಮಟಾಮೊದ್ದು ಚರಿಗೇಲಿ ನೀರು ತಕೊಂಡು ಬೆಂಕಿ ಉರಿ ಅರಿಸಕ್ಕೆ ಬತ್ತಾನೆ!... ವಸಿ ಜಿನದಿಂದ ರುದ್ರನ್ನ ಸಾಸ್ತಿಗಳ ತ್ವಾಟಕ್ಕೆ ಕೆಡುವಿದೋನ್ ಇವೆ, ಈಗ ಸಂಬಾವಿತ್ನಂಗೆ ಅವಟ್ಟಿಗೂ ತ್ವಾಟಕೂ ಓಡಾಡ್ತ ಮತ್ತೆ ಮಣ್ಣ ಮಾಡ್ತಿರಾನು ಇವೆ!...” ಒಂದು ಕಾಲನ್ನು ನೆಲದ ಮೇಲಿಟ್ಟು ಇನ್ನೊಂದನ್ನು ಮಠದ ಮುಂದಿಟ್ಟು ಮೆಟ್ಟಿಲ ಮೇಲಿಟ್ಟು ಸಾವಧಾನವಾಗಿ ಬೀಡಿ ಕತ್ತಿಸಿ ಎಳೀತಿದ್ದ ನಂಜೇಗೌಡ, ಕೊನೆಯ ದಂ ಎಳೆದು ಬೀಡಿಯ ತುಂಡನ್ನು ಬಿಸುಟು, “ಯಾಕ್ಲ ಲಕ್ಕ, ನನ್ನ ಮಾತ್ತೆ ಏನೊಂದೂ ಜವಾಬು ಕ್ವಡದೆ, ಅದೇನೋ ಯೋಚ್ಛೆ ಮಾಡ್ತ ನಿಂತೆ?” ಕೇಳಿದ. ಲಕ್ಕೆ ಪರಮ ಪ್ರಯಾಸದಿಂದ ಹಲ್ಲು ಕಚ್ಚಿ, “ಆಗ್ಲಿ ಗೌಡ್ರೆ.” ಎಂದು ಹೆಜ್ಜೆ ತೆಗೀತರುವಾಗ, ನಂಜೇಗೌಡನಿಗೆ ಲಕ್ಕನ ಒಪ್ಪಿಗೆಯಿಂದ ಬಲು ಮೋಜಾಯಿತು. ಮತ್ತೊಮ್ಮೆ ಅವನ ಬೆನ್ನುತಟ್ಟಿ, “ಲಕ್ಕೆ, ನಿನ್ನ ಗುಣವ ಯಾವತ್ತೂ ನಾ ಮೆಚ್ಚಿಗಂಡಿನ್ನಿ...ನಿನ್ನ ಜಪಾತಿ ಜನ, ನಿಮ್ಮ ಹೊಲಗೇರೀಲೆ ಯಾಕೆ, ನಮ್ಮ ಇಡೀ ಊರಲ್ಲೆಲ್ಲ ತಡಕಾಡಿದ್ರೂ ಸಿಕ್ಕಕ್ಕಿಲ್ಲ” ಎಂದು ಬ್ರಾಹ್ಮಣರ ತೋಟಗಳತ್ತ ನಡೆದ. ಲಕ್ಕನೂವೆ ಮಠ ಬಿಟ್ಟು, ಮಠದ ಮುಂದಿನ ಬೀದಿಗೆ ಕಾಲಿಟ್ಟ ನಂಜೇಗೌಡ ಬಲೇಗೆ ನಾ ಬಿದ್ದೋದೆ, ಅನ್ನೋ ತೊಳಲಾಟ ಅಮ್ಮ ಎದೆಯೊಳ್ ತಮಟೆ ಬಾರಿಸಕ್ಕೆ ಮುಟ್ಟಿಕಂಡಿತ್ತು.