ಪುಟ:ವೈಶಾಖ.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ತನ್ನ ಅಯ್ಯಂಗೆ ಬಂದ ಅವಸ್ತೆ ಕೇಳಿ ಲಕ್ಕನ ಕಣ್ಣು ಒದ್ದೆಯಾಯ್ತು. ಎಣ್ಣೆ ತೆಗೆದು ಮುಂದುಕೊಂಟ ದ್ಯಾವಾಜಮ್ಮ, “ನನ್ನ ತಂಗಿ ಸಿವುನಿ ಎಂಗಿದ್ದಾಳು?” ಕೇಳ, “ಅವಳೇನಾಗಿದ್ದಾಳು?” ಅವಳೆ. “ಮೊಗ-?” “ಅದರ ಪಾಡಿಗೆ- ಅದೂ ಅದೆ” ಅಂದೋಳು ದ್ಯಾವಾಜಮ ನಿಲ್ಲನೇ ಇಲ್ಲ. ಸರಪರ ವೊಂಟೋದ್ಲು. ಲಕ್ಕಂಗೆ ಯೋಚೆಗೆ ಇಟ್ಟುಕತ್ತು, ಅಲ್ಲೀಗಂಟ ತನ್ನ ಕುಟ್ಟೆ ಚೆನ್ನಾಗಿ ಮಾತಾಡಿದೋಳು, ತನ್ನ ತಂಗಿ ಸಿವುನಿ ಇಸ್ಯ ಕೇಳಿದೇಟಿಗೆ, ಮೊಕ ಗಂಟು ಅಕ್ಕಂಡಳಲ್ಲ ಯಾಕೆ?... ಇವಳು ಅಣ್ಣೆಲೆ, ಸಿವುನಿ ಇನ್ನೂ ಚಿಗುರಿಲೆ, ಎಲ್ಲಿ ಆ ಎಣ್ಣು ತನ್ನದ ಅರೇದ ಸೋಕ್ಕಿನಲ್ಲಿ ಈ ಮುದುಕಿಗೆ ಏನಾರ ಅಂದು ಬೇಜಾರು ಮಾಡದ್ರೋ, ಯಾನು ಕತೆಯೊ?.... ಇಂಗೆ ಲಕ್ಕನ ಮನಸು ತನ್ನ ತಂಗಿ ಸುತ್ತ ಸುತ್ತುತ್ತಾ ಇದ್ದಾಗ, ಅವಳ ಒಂದು ಸಲ ಕ್ವಾಡಿಕೊಂಡು ಬರಬೇಕು ಅನ್ನಿಸ್ತು. ವೊಗಾನು ತಗಂಡು ಮುದ್ದಾಡಿ ಬರಬೇಕು, ಅನೊ ಆಸೆಯೂ ಬಲವಾಗಿ ತುಲ್ಕಿತು. ಆದರೆ, ಊರಿನ ಉತ್ತತ್ತಗರ ಕಾಟಕೆ ಎದುರಿ, ವೋಗೋದೊ ಬ್ಯಾಡವೊ ಅಂತ ಅವನ ಚಿತ್ತ ಏಡು ಜಿನ ಜೀಕ ಆಡ್ಡು, ಮೂರನೆ ಜಿನ, “ಬಂದದ್ದು ಬರಲಿ, ಸಿವುನಿಯ ಈ ಜಿನ ನ್ಯಾಡಿಕಂಡೇ ಬತ್ತೀನಿ” ಅಂತ ತೀರ್ಮಾನ ಮಡ್ಡ, ಸಕುನಿ ಕೊಪ್ಪಲ ಕಾಕನ ಅಂಗಡೀಲಿ ವೊಗೀಗೆ ಒಂದು ಗಿಲಕಿ, ಸಿವುನಿಗೆ ನಾಕಾಣೆ ಬಿಸ್ಕತ್ತು ಕಟ್ಟಿಸಿಕಂಡ ಬೆಟ್ಟದ ಸಾಲಿನ ಇಂದುಗಡಿಂದ ಎದ್ದು, ಭೂಮಿ ಮ್ಯಾಲೆ ಕತ್ತಲು ಪಟ್ಟಾಗಿ ಕವುಚಿಗತ್ತ ಬತ್ತಾ ಇದ್ದಂಗೆ, ಲಕ್ಕ ತಾನೂ ಕಲ್ಲಕುಣಿಕೆ ಕಂಬಳಿ ಕವುಚಿಕಂಡು ಊರ ದಿಕ್ಕೆ ವೊಂಟ, ತಂಗೀನೂ ವೊಗಾನೂ ಕ್ವಾಡ್ತೀನಿ ಅನ್ನೋ ಸಂಬ್ರಮ್ಮ ನೃತಜ್ವತೆಗೇಯ ಯಾರಾರೂ ಕಂಡರೆ ಏನು ಗತಿ ಅನ್ನೊ ಭಯವೊವೆ ವಳವಳುಗೇ ತಮಟೆ ಬಾರಿಸ್ತಿತ್ತು... ಲಕ್ಕ ಕೆರೆ ಓಣೀಲಿ, ಜೀವಾವ ಏಡು ಕೈಲೂ ಇಡುಕಂಡೇ ಬತ್ತಿದ್ದ. ದೂರದಲ್ಲಿ ಮನುಸಾರೊ ಮಾತಾಡೊ ಸಬ್ದ ಕೇಳಿ ಓಣಿ ಬೇಲಿ ಇಂದುಕೆ ಚಿಗಿದು, ಆ ಬೇಲಿ ವತ್ತಿನಲ್ಲೆ ಮೆತ್ತಮೆತ್ತಗೆ ಬಂದುಆ ಮನುಸರು ಮಾತಾಡೋದು ಕೇಳೊ ವೋಟು ದೂರದಲ್ಲಿ ನಿಂತ. ಬೇಲಿ ಉಣ್ಣಿಮೆಳೆ ಇಂದುಕಿದ್ದುದ್ರಿಂದ ಆ ಮನುಸರೆ ಇನ್ನು ಕಾಣೋವಂಗಿರನಿಲ್ಲ. ಆ ಕೆರೆ ಓಣೀಲಿ ಲಕ್ಕೆ ನಿಂತಿರೋ ಚೋರೀಕೆ ಉದ್ದಕೆ ಅಳ್ಳ,