ಪುಟ:ವೈಶಾಖ.pdf/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೦ ವೈಶಾಖ ಇಂತಾ ಇರುವೆನೂವೆ ಒಂದು ಭಾರಿ ಸರ್ಪವ ಕೊಲ್ಲಬೌದು ಅಂತ ನಂಗೆ ತಿಳಿದೇ ಇರನಿಲ್ಲ, ಅಂಡ್ಕಂಡ ಲಕ್ಕ... ಲಕ್ಕ ಇಂಗೆ ಸ್ವಾಡ್ತಾ ಇರೋನೂವೆ, ಅವನ ಪಕ್ಕದಾಗಿದ್ದ ಬೊಡ್ಡ, ಅದೂ ಒಂದು ಮರದ ಬೊಡ್ಡೆ ಕಾಲೆತ್ತಿ ಚೋರ್‌ ಅನ್ನಿಸ್ತಿದ್ದದ್ದು, ಆಗಲೆ ವೋಗಿ ಆ ಕಟ್ಟಿರುವೆ-ಸಪ್ಪ ಕದ್ರಾವ ಕ್ವಾಡ್ರ ನಿಂತದೆ! ಭಯಕೊ ಯೇನೊ ದೂರದಿಂದ್ಧ ವಸಿ ವೊತ್ತು ಬುಟ್ಟುಬುಟ್ಟು ಮೆತ್‌ಮೆತ್ತಗೆ ಬೊಗಳ್ತಾನೂ ಅದೆ.... ಲಕ್ಕನ ವೊಟ್ಟೆ ನಾತ್ರಿಂದ ಅಸಿದಿದ್ದದ್ದು, ಈಗ ತಡೀನಾಗ್ಗೆ ಚುರುಗಟ್ಟಕ್ಕೆ ಮುಟ್ಟಗತ್ತು. ಚಿಕ್ಕೊಂಡು ನೋಡೋನೂವೆ ಅವನ ಚೋರೀಲೆ ವಸಿ ದೂರಕೆ ಪಾಪಾಸುಗಳ್ಳಿ ಗಿಡ ಕಣ್ಣಿಗೆ ಬಿಟ್ಟು, ಅದರ ಮ್ಯಲೆ ಕೆಪ್ಪಟೆ ಕೆಂಪಿನಿ ಹಣ್ಣು ರಸ ತುಂಬ್ಬಂಡು ವಾಲಾಡ್ತಿದೊ. ಆ ಹಣ್ಣ ಬುಡುಸಿ ತಿನ್ತಾ ತಿನ್ತಾ ಲಕ್ಕ ಮುಂದುಮುಂದೆ ವೊಂಟ, ಅವ್ರು ಕಾಲು ಕಿತ್ತಿದ್ದ ಕಂಡು ಬೊಡ್ಡನೂವೆ ಆ ಸತ್ತ ಹಾವಿದ್ದ ಜಾಗ ಬುಟ್ಟು ಲಕ್ಕನ ಇಂದ್ಗುಟ್ಟೇನೆ ಪುನಾ ಬಾಲ ಅಲ್ಲಾಡುಸತ ಬಂತು. ಆಗ್ಲೆ ಬಾಣದಲ್ಲಿ ಸ್ವಾಮಿ ಸುಮಾರು ಏಡಾಳುದ್ದ ಮ್ಯಾಕ್ಕೇರಿದ್ದ. ಲಕ್ಕ ಇಂಗೇ ವೋಯ್ತಾ ಇರೋನೂವ, ಎತ್ತೆತ್ತಗೊ ಸ್ವಾತ್ತ ಆನೆ ಆಕ್ಷ ಲದ್ದಿ ತುಣುದುಬುಟ್ಟ, ಲದ್ದಿ ಬಿಸಿಯಾಗಿತ್ತು. ಎಲ್ಲೊ ಈಗ್ಗೆ ವಸಿ ವೊತ್ನಲ್ಲೆ ಆಕಿರಬೇಕು. ಅಂಗಾರ ಅತ್ರ ಇಲ್ಲಿ ಎಲ್ಲೋ ಆನೆ ಇರಬೈದು, ಅಂದುಕೊತ್ತ ನಿಂತ್ಕಂಡು ಗಾಳಿ ಯಾವ ಕಡಿಂದ ಬೀಸ್ತಿದೇಂತ ಲೆಕ್ಕ ಆಗ್ಲ. ಗಾಳಿ ಮೆಳೆ ಕಡಿಂದ ಅವ್ರ ಮೊಕ್ಕಿದಿರಾಗಿ ಬೀಸ್ತಾ ಇತ್ತು. ಆನೆ ಏಟು ದೂರದಲ್ಲಿದ್ದದು ನ್ಯಾಡಾನಾಂತ ಮೆಳೆ ಸಂದೀಲಿ ದ್ರುಸ್ಟಿ ಆಯಿಸ್ಲ, ಅಲ್ಲಿ ಒಂದಾನೆ ಅಲ್ಲ, ಆನೆಗೊಳ ಒಂದು ಭಾಗಿ ಇಂಡೇ ನೆರುದಿತ್ತು... ಗಾಳಿ ಆನೆಗೊಳ ಕಡಿಂದ ಬೀಸ್ತ ಇರೋನೂವೆ ಸದ್ಯಕ್ಕೆ ಬದುಕ್ಕಂಡೆ ಅಂತ ಬೆವರೋರಸ್ಕಂಡ ಲಕ್ಕ, ಯೇನಾರ ಅಮ್ಮಿದ್ದ ಕಡಿಂದ ಆನೆಗಳಿದ್ದ ಜಾಕ್ಕೆ ಗಾಳಿ ಬೀಸಿದ್ರೆ, ಅವೈ ವಾಸಣ ಬಿದ್ದು ಅಟ್ಟಿಸಿಕೊಂಬಂದು ಅವನ್ನ ಸಿಗುದು ಆಕೋವು!... ಲಕ್ಕ ಕಾಡುಕುರುಬರಿಂದ ಈ ಗುಟ್ಟ ಅರಿತಿದ್ದ. ಆದ್ರಿಂದ ತುಸ ಧೈಯ್ ಬಂದು, ಒಂದ್ಬಲ ಆ ಗುಂಪ ಕಣ್ಣುಂಬ ನ್ಯಾಡಿಬುಟ್ಟು ವೊಂಡೋಗಾನಾಂತ ನಿಂತ. ಒಂದು ಗಳಿಗೆ ಕಣ್ಣ ಮುಟ್ಟ ನ್ಯಾಡಿ, ಆ ಜಾಗದಿಂದ ಆದಷ್ಟು ಬ್ಯಾಗ ವಾಟ ವೋಡೀಬೇಕು, ಇಲ್ಲದಿದ್ರೆ ಪ್ರಾಣಕೇ ಅಪಾಯಾಂತ ತೊಳ್ಳೆ ವಳುಗೆಲ್ಲ ನಡುಕ ಅರಿದಾಯ್ತು. ಆದರೂವೆ ಕಣ್ಣ ಮುಂದೆ ನಡೀತಿದ್ದ ಚೋಜಿಗ ಕ್ವಾಡ್ತಾ