________________
೨೬ ವೈಶಾಖ “ಇಲ್ಲ. ಕೆಲವು ದಿನ ಫಲಿಸಲಿಲ್ಲ. ಯಾಕೆಂದರೆ, ರುದ್ರ ತೋಟಕ್ಕೆ ಕಾಲಿಡುವ ಹೊತ್ತನ್ನೇ ಅನುಸರಿಸಿ ಈ ತಂತ್ರ ಹೂಡಿದ್ದರೂ, ಕೇಶವಯ್ಯನ ಲೆಕ್ಕಾಚಾರ ತಪ್ಪಿ, ರುದ್ರ ನಾಲ್ಕು ದಿನ ಪೂರ್ಣವಾಗಿ ಬಚಾವಾದನಂತೆ...” “ಹೇಗೆ?” “ಹಾವಿದ್ದ ಮರವನ್ನು ಬಿಟ್ಟು ರುದ್ರ ಬೇರೆ ಮರವನ್ನು ಹತ್ತಿದ್ದ. ಹಾವಿನ ವಿಷಯ ಅವನಿಗೇನು ಗೊತ್ತು. ಅಂತೂ ಹಾಗಾಗುತ್ತಿತ್ತು. ಐದನೆ ದಿನ ರುದ್ರ ಎಂದಿನಂತೆ ಯಾವ ಭಯವೂ ಇಲ್ಲದೆ ಪಶ್ಚಿಮದ ಬೇಲಿ ಕಿಂಡಿಯಿಂದ ಪ್ರವೇಶಿಸಿ, ಮಟಮಟ ಮಧ್ಯಾಹ್ನ ಆಳುಕಾಳು ಯಾರೂ ಇಲ್ಲದೇ ಇರೋದನ್ನ ಖಾತ್ರಿ ಮಾಡಿಕೊಂಡು, ಸರಸರನೆ ಒಂದು ತೆಂಗಿನ ಮರವನ್ನೇರಲು ಆರಂಭಿಸಿದ. ತುದಿಯನ್ನು ಸಮೀಪಿಸಿದ ಹಾಗೆ ಭರ್ಜರಿ ನಾಗರಹಾವೊಂದು ಹೆಡೆ ಬಿಚ್ಚಿ ಭುಸ್ ಭುಸ್ ಮೊರೀತ ಭಯಂಕರವಾಗಿ ಹೆಡೆಯಾಡೊದನ್ನ ಕಂಡು, ಥರಥರ ನಡುಗಿದನಂತೆ ರುದ್ರ, ಕಿಟಾರನೆ ಕಿರುಚಿದನಂತೆ. ಇನ್ನೇನು ಮರದಿಂದ ಬಿದ್ದೇ ಹೋಗಬೇಕು-ಹೇಗೋ ಮರವನ್ನು ತಬ್ಬಿ ಹಿಡಿದನಂತೆ... ಅಲ್ಲೆ ಸಮೀಪದ ಮಲ್ಲೆಗೆ ಹೊದರಿನ ಹಿಂದ ಅವಿತಿದ್ದ ಕೇಶವಯ್ಯ ತನ್ನ ಆಳುಮಗನ ಜೊತೆ ಕಾಣಿಸಿಕೊಳ್ಳುತ್ತ. - “ಓಹೊ ರುದ್ರನೊ....? ನಾನು ಯಾರೋ ಅಂತಿದ್ದೆ!” ಎನ್ನುತ್ತಲೆ, ಮೇಲೆ ಹತ್ತಲೂ ಅಗದೆ, ಇಳಿಯಲೂ ಆಗದೆ, ರುದ್ರ ಕಂಗಾಲಾದನಂತೆ. ಕೇಶವಯ್ಯನೆ ಸಾಂತ್ವನಗಳಿಸುವ ಸ್ವರದಲ್ಲಿ “ಬಾಪ್ಪ ರುದ್ರ, ಬಾ, ಇಳಿದು ಬಾ... ನಾನೇನು ನಿನಗೆ ತೊಂದರೆ ಮಾಡುಲ್ಲ. ಬಾ- ನನ್ನಾಳಿನ ಕೈಲಿ, ನನ್ನ ಕೈಲಿ ಮಚ್ಚುಗಳಿದೂವೆ, ನಾವೇನು ನಿನ್ನನ್ನ ಹೊಡೆಯಲ್ಲ, ಬಡಿಯುಲ್ಲ, ಪಂಚಾಯಿತಿ ಕಟ್ಟೆ ಹತ್ತಿಸುಲ್ಲ... ನಿಶ್ಚಿಂತೆಯಿಂದ ಇಳಿದು ಬಾ... ಸದ್ಯ ಆ ಘಟಸರ್ಪ ಏನಾದರೂ ಕೆಳಗಿಳಿದು ಬಂದು ಕಚ್ಚಿದರೆ ಏನು ಗತಿ...? ಒಂದು ಕ್ಷಣವೂ ಕೂಡ ನೀನು ಅಲ್ಲೇ ಉಳಿದಿರೋದು ಕ್ಷೇಮವಲ್ಲ...”- ಹೀಗೆ ಹೇಳಿರೋವಾಗ ರುದ್ರ ಮತ್ತೊಮ್ಮೆ ಕತ್ತೆತ್ತಿ ಮೇಲೆ ನೋಡಿದನಂತೆ... ಸರ್ಪ ಭೀಕರವಾಗಿ ಹೆಡೆಯಾಡಿಸುತ್ತ, ಮೊರೆಯುತ್ತಲೇ ಇತ್ತಂತೆ...! ರುದ್ರ ಚಿಂತಿಸಿರಬೇಕು: “ಕೆಳಗೆ ನೋಡಿದ್ರೆ ಕೇಶವಯ್ಯ, ನೆತ್ತಿಯ ಮೇಲೆ ಸರ್ಪ... ಕೇಶವಯ್ಯನೂ ಅವನ ಆಳೂ ಹೊಡೆದರೆ ಏನು ಮಹಾ-ಒಂದು ಹತ್ತಿಪ್ಪಂತ್ತು ಏಟು..! ಸರ್ಪ ಕಡಿದರೆ ಸಾವೇ ಖಾತರಿ”- ಹೀಗೆ ಲೆಖ್ಯ ಹಾಕಿ