________________
ಸಮಗ್ರ ಕಾದಂಬರಿಗಳು ೩೧ ಮ್ಯಾಲೆ ಕೆಲವು-ಇಂಗೆ ಕುಂತು ನಿಂತು ಪರಸಂಗ ವೊಡೀತಿದ್ರು ಜನ... ಇದ ಕಂಡೇ ಕೇಸವಯ್ಯ ತಮಾಸೆ ಮಾಡ್ತಿದ್ದದ್ದು: 'ನಮ್ಮ ದರುಮನಳೀಲಿ ಸ್ವಾಮಾರದ ಜಿನ ಸೂರ್ಯಪ್ಪ ಮಯ್ಯ ಮುರದೇಳೋದು ತಳಾರ ಅಂದರೆ ತಳಾರ!' ಲಕ್ತ ತೆಂಕಲಾಗಿ ತಿರುಗಿನಾಗ, ವಕ್ಕಲುಗೇರಿ, ಕುಂಬಾರಗೇರಿ, ಪರಿವಾರಗೇರಿ, ಕುರುಬಗೇರಿ, ಇಂತಿಂತಾ ಕೇರಿಗಳೆಲ್ಲ ಇಂದುಕಾಗಿ, ಜೈನಿಗ ಜಿನ್ನಯ್ಯ ತನ್ನಟ್ಟಿ ಜಗುಲೀಲಿ ಕುಂತು ಚೌರಾ ಮಾಡಿಸಿಕೂತ್ತ ಇದ್ದದ್ದು ಕಣ್ಣಿಗೆ ಬಿತ್ತು. ಅಮ್ಮ ಎಡತಿ ಒಗೆಯೋ ಬಟ್ಯ-ಒಂದು, ಏಡು, ಮೂರೂಂತ ತಂದು ತಂದು ರಾಸಿ ಆಕ್ರಾ ಇದ್ರೆ, ಹಿಂದ್ರ ಲೆಕ್ಕ ಚುಕ್ತಾ ಮಾಡುದ್ರೆ ಮಾತ್ರ ವೊಸದಾಗಿ ಒಗಿಯೋ ಅರಿವೆ ಎಂತಿಗಂಡೋಯ್ದಿನಿ, ಅಂದ ಮಡಿವಾಳ ಸೆಟ್ಟಿ, ಕಳೆದ ವಾರವೆ ಆ ಬಾಕೀನೆಲ್ಲ ತೀರುಸಿದ್ಯಲ್ಲೊ ಮಡಿವಾಳ ಸೆಟ್ಟಿ - ಅಂತ ಜಿನ್ನಯ್ಯ ಎಡತಿ... ಈ ತರ ಅವರಿಬ್ಬರೂ ಲಟಾಪಟಿ ನಡೀತಿತ್ತು. ಒಂದು ಮೂಲೆ, ಒಂದು ಎತ್ತ ಕಡೀಕೆಂಡು ಲಾಳ ವೋಡೀತಿದ್ರು... ಇನ್ನೆಲ್ಲ ಕ್ವಾಡ್ ಕ್ವಾಡ್ರ, ಲಕ್ಕ ಬುಂಡಮ್ಮನ ಹಟ್ಟಿ ತಾವಿಕೆ ಬಂದಿದ್ದ. ಆಗ್ಗೆ ಊರ ಹೈಕಳು ಕಾಡಿಗೆ ದನ ಅಟ್ಟಗಂಡೋಗಿದ್ದು, ಒಂದು ಹೈದ ಮಾತ್ರ ಏಳು ಮದ್ದಿನ್ನ ಮಾಡ್ಕಂಡು, ತನ್ನ ದನ ಅಟ್ಟಿಗಂಡೋಯ್ತಿದ್ದೋನು, ತೀರ ಅವಸರಾಗಿ, ತನ್ನ ಚಡ್ಡಿ ಗುಂಡಿ ಬಿಚ್ಚಿ, ಅಟ್ಟಿ ಗ್ವಾಡೇನೆ ನೆನೆಸ್ತಾ ಇತ್ತು. ಬುಂಡಮ್ಮ ಯಾಕೋ ವೊರೀಕೆ ಬಂದೋಳು ಕ್ವಾಪ ಅತ್ತಿ, “ಏನ್ದ, ಈ ನಮ್ಮಟ್ಟಿ ಕಟ್ಟಿದೋನು ನಿಮ್ಮಷ್ಟೊ? ನಿಮ್ಮಜೊ?- ನಿಸೂರಾಗಿ ನಿನ್ನ ಗ್ವಾಡೇ ನಿನ್ನ ಚಿರುಕಿ ತಿರುಗುಪ್ತ ನಿಂತುಬುಟ್ಯಲ್ಲ?”= ಕೈಕೋಲು ಬೀಸ್ತಾ ಅಂದ್ಲು. ಹೈದ ದಿಗಲುಬಿದ್ದು ಉಚ್ಚೆ ಉಯ್ಯೋದ ಅರ್ದಕೇ ತಡುದು, ಕೆಟ್ರೋ ಬದುಕಿದ್ರೂಂತ ಗಂಜಳ ಸುರುಸ್ತಾ ವೋಗೋ ಎತ್ತಿನಂಗೆ ಉದ್ದಕೂ ಉಚ್ಚೆ ಸುರಿಸಿಕೊತ್ತ ದನಗಳ ಇಂದಿಂದೆ ಓಡೋಯ್ತು . ಲಕ್ಕೆ ಆ ಹೈದ ಅವಸ್ತೆ ನೋಡಿ ನಕ್ಕ. “ಅದ್ಯಾಕ್ಲ ಗಂಡೆ, ನಗಾಡ್ತ ನಿಂತೆ?... ಆ ಹೈದ್ರ ವಯಸಾಗಿದ್ದಾಗ ಬೆದುರಿಸಿದೆ, ನೀನೂವೆ ಚಡ್ಡಿ ವಳುಗೇಯ ಇಂಗೇ ಸೊರ ಬುಟ್ಟುಕತ್ತಿದ್ದೆ... ನೀ ನಗಾಡುದು ಅಂಗಿಲ್ಲ, ವಸಿ ಬಾ ವಳೀಕೆ.” ಬುಂಡಮ್ಮ ಕರೆದ್ಲು. ಲಕ್ಕ ನಗ ತಡುದು ಮುದುಕಿಯ ಗಮ್ಮೆ ಇಂಬಾಲಿಸ್ಟ, ವಳೀಕೋಯಿತ್ತೆ. “ಲಕ್ಕ, ನಮ್ಮೆಮ್ಮೆ ಕರೀಗೆ ಅಕ್ರ ಆಗದೆ ಕವ್ವ. ವಸಿ ತಕ್ಕೊಡ್ತೀಯ?”