ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೩ ಸೊಂಟದ ಮ್ಯಾಲಿಟ್ಟು, ಇನ್ನೊಂದರಿಂದ ಅನ್ನ ಕೆನ್ನಗೆ ತಿವಿಯೋಳಂಗೆ ನನ್ನೆ ಮಾಡಿ ಕರೆದ್ಲು. ಲಕ್ಕ ತಲೆ ಕೆರೀತ, “ಬ್ಯಾಡಿ ಬುಂಡಮಾರೆ, ನಾ ಆಗ್ಲೆ ರೊಟ್ಟಿ ತಿಂದು ಬಂದಿಮ್ಮಿ....” “ಅಲ್ಲಿ ತಿಂದೆ?” “ಬ್ರಾಂಬರ ಮೂಲೆ ಅಟ್ಟಿ ಕಿಸ್ಸಸಾಸ್ತಿಗಳ ಸೊಸೆ ರುಕ್ಕಿಣವ್ವ ಇಲ್ಲ, ಅವರು ಅಕ್ಕಿರೊಟೀನೂವೆ ಬದ್ದೆಕಾಯಿ ಎಣಗಾಯೂವೆ...” ಮಾತು ಮುಂದರಿಗ್ಗಡದೆ, ಅಲ್ಲಿಗೇ ಕಡ್ವಾಣ ಆಕಿ, ಏಡು ಕಟವಾಯೂವೆ ಇನ್ನು ಮಸ್ತಾಗಿ ಎಲಡಿಕೆ ರಸ ಸುರುಸ್ತ, “ಊ, ಈಗ ನಿಂಗ ನಾನ್ಯಾಕೆ ಬೇಕು?... ಈಗ ಎಂಗಿದ್ರೂ ಆ ಹಾರುತಿ ಅಟ್ಟಿ ಸಿಕ್ಕೋಗದೆ. ನಮ್ಮಟ್ಟಿ ಕಂಡ್ರೆ ಈಗ ಬಿಡಬ್ಯಾಸರ” - ಬುಂಡಮ್ಮ ಸಿಡುಕ್ತಾಗ, ಲಕ್ಕ “ಇಲ್ಲ ಬುಂಡಮ್ಮಾರೆ, ನಿಮ್ಮ ನಾಯೆಂಗೆ ಮರೆಯಕ್ಕಾದಾತು...” ಮಾತು ಮುಗೀಸೆ ಇಲ್ಲ, ಚಾವುಟಿ ಬೀಸಿದಂತೆ, “ಸರಿಕನ ಬುಡು. ಬರೀ ಮಾತಿನ ಕೆಂಪಿ, ನಿನ್ನ ಬಾಯೆಲ್ಲ ಅಪ್ರಂಜಿ.” ಕೊಸರ, ಅಡುಗೆ ಕ್ಲಾಣೆಗೆ ನಡೆದ್ದು, “ಇಲ್ಲ, ಇಲ್ಲ, ತಿಂತೀನಿ, ಒಂದು ಮುರುಕು ತನ್ನಿ... “ವೊರನ್ನಿಂಧೆ ಕೂಗ್ಲ. “ತರಕ್ಕಿಲ್ಲ, ವೋಗೊ. ಅದೇನು ನೀ ಯೋಳಿದಂಗೆ ನಾ ಕ್ಯಾಳಬೇಕು? ನೀಯೇನು ಮಾರಾಜರ ಮೊಮ್ಮಗನ?...” ವಳಗ್ನಿಂಧೆ ಮುದುಕಿ ಅಬ್ಬರಿಸಿದ್ದು. “ನಿಮ್ಮ ದಮ್ಮಯ್ಯಾಂತೀನಿ. ಕ್ವಾಪ ಮಾಡಕಾಬ್ಯಾಡಿ, ತತ್ತನ್ನಿ... “ದಮ್ಮಯ್ಯಾಂದರೂ ಇಲ್ಲ ದತ್ತಯ್ಯಾಂದರೂ ಇಲ್ಲ.” ಕಲ್ಲು ಬೀಸ್ಟಂಗೆ ಮಾತು ವಗುದ್ದು. “ನೀವು ತರದೇವೋದ್ರೆ, ನಾಯಿಲ್ಲಿಂದ ಎದ್ದೇ ವೋಕ್ಕಿಲ್ಲ...” “ಎದ್ದೇ ವೋಗಬ್ಯಾಡ, ಕುಂತಿರು ನಂಗೇನು?... ಯಾರ ಸಂಕಟಕ್ಕೆ ಕುಂದಿದ್ದೀ?- ನೀಯೇನಾರ ನನ್ನೆದೆ ಗುಂಡಿಗೆ ಮ್ಯಾಲೆ ಕುಂತಿದ್ದೀಯ?... ಕುಂತುಗೊ, ಕುಂತುಗೊ, ಮಾರಾಯನಂಗೆ ಕುಂತುಗೊ...” ಅಡುಗೆ ಕ್ಯಾನಿಂದ ಅರೀತಿದ್ದ ಮಾತ್ನಲ್ಲಿ ಹಿಂದ್ರ ಮೊರತ ತಗ್ಗಿ ದಂಗಿತ್ತು... ಲಕ್ಕಂಗೂ ಸ್ವತ್ತು. ಇದು ಮಳೆ ಕರೆಯೊ ಮ್ಯಾಡ ಅಲ್ಲ. ಒಂದು ಚಣ ಗೇರಾಯ್ಲಿ ಅನಂತ್ರ ಅತ್ತಿ ಇಂಜಿದಂಗೆ ಚೆದುರೋಗೊ ವರುಸೇದು ಅಂತಖ್ಯ.