________________
೪೪ ವೈಶಾಖ ಕೂಗೇಳಿ, ತನ್ನ ಗುಡ್ಲು ಕಡೀಕೆ ದೌಡು ವೋಡ್ಡ. ಲಕ್ಕ ಗುಡ್ಡು ಸೇರೋ ವ್ಯಾಳ್ಯಕ್ಕೆ, ಅವ್ರು ನೆಂದು ಪಹ್ಯಾಗಿದ್ದ. ವೋಟತ್ತಿಗೆ ಅವನವನೂ ನೆನಕೊಂಬಂದು ಗುಡ್ಡ ವಳಗೆ ತನ್ನ ಸ್ಯಾಲೆ ಇಂಡಿ ನೀರು ಕಡುಸ್ತ ಇದ್ದು. ಆಗ ಉಡುಗ ಲಕ್ಕ ಕೇಳಿದ್ದ. “ಇದ್ಯಾವ ಮಳೆಯವ್ವ ಇದು- ಇದ್ದಕಿದ್ದಂಗೆ ಉಯ್ದುಬುಡ್ತಲ್ಲ?” “ಇದು ಉಯ್ಯೋ ಮಳಯೇಯ- ಗೌರಿ ತಿಂಗಳಲ್ವ- ಉಚ್ಚೆ ತುಳುದು ಉತ್ತರೆ ಬಂದದೆ! ಗೌರಮ್ಮ ಬಾಳಲ್ಲ- ಅದಕೆ ಇದು ಉಯ್ದು ಧರೆ ತಣಿಸಿ ಗೌರಮ್ಮಗೆ ನಡೆಮಡಿ ಆಸ್ತಾ ಅದೆ,” ಸ್ಯಾಲಿಂದ ನೀರು ಕಡುಸ್ತ ಕಡುಸ್ತಾನೆ ಕಲ್ಯಾಣಿ ಇವರಿಸಿದ್ದು. ಬೊಡ್ಡ ಇವರಿಬ್ರ ಜ್ವತೆ ಮಯ್ಯ ನೀರ ಅತ್ತಾಗಿ ಇತ್ತಾಗಿ ವದು ನಿಂತಿತ್ತು. ದ್ಯಾವಾಜಮ್ಮೆ ನಾಕು ಆಡೂ ಇವ್ರ ಗುಡ್ಡ ವಳೀಕೆ ಮಳೆ ಎರಚಲು ತಡೀನಾರದೆ ಬಂದುವಕ್ಕಡೀಕೆ ನಿಂತಿದ್ದೂ, ಅಲ್ಲಿದ್ದೀರಲ್ಲಿ ನೆನೀದೇ ಇದ್ದೋಳು ಅಂದ್ರ ಲಕ್ಕನ ತಂಗಿ ಸವುನಿ...ಆ ಎಣ್ಣು ಯಾರದೋ ಅಟ್ಟಿಗೆ ಕೆಲ್ಸಕ್ಕೋಗಿದ್ದು, ಮಳೆ ಅನಿ ಇಡ್ತಿದ್ದಂಗೆಯೇ ಗುಡ್ಡಿಗೆ ವೋಡಿಬಂದಿತ್ತು. ಆಡು ಅವಳ ಅತ್ರಕ್ಕೆ ಚಿಗಿದಾಗ, ಆ ಎಣ್ಣು, “ತೂ,- ಈ ಅಳಗೇರಿಯೋವು ಯಾಕೆ ಬಂದೆ ನಮ್ಮ ಗುಡ್ಡಿಗೆ, ಇವ್ರ ಸಿಂಡ ನಾ ತಡೀನಾರಿ” ಅಂತಿತ್ತು. “ವೊ- ನಿನ್ನ ಸಾಸ್ಪಾವ ನಾ ನೋಡನಾರಿ, ಸುಮ್ಮಿರೆ ಸಿವು... ನಮ್ಮತ್ರಯಿದ್ದ ಏಡು ಆಡ, ಇಂದ್ರೆ ನೀನೇ ಅಟ್ಟಿಕಂಡು ವೋಯ್ತಿದ್ಯಲ್ಲ? ಆಗ ಅವ್ರ ಸಿಂಡು ನಿಂಗೆ ಸೆಡೀತಿತ್ತೇನೊ?” ಅಂದ್ಲು ಅವ್ವ... ಸಂಧ್ಯಾವಂದನೆ ಮುಗಿದ ಬಳಿಕ, ಬೆಳ್ಳಿಯ ಸಂಪುಟದಿಂದ ದೇವರುಗಳನ್ನು ಒಂದೊಂದಾಗಿ ಅಗಲವಾದ ಬೆಳ್ಳಿಯ ತಟ್ಟಿಗೆ ತೆಗೆದಿಟ್ಟು ಕೃಷ್ಣಶಾಸ್ತ್ರಿಗಳು ಮಂತ್ರ ಪಠಿಸುತ್ತ ರುಕ್ಕಿಣಿಯು ತಂದಿಟ್ಟ ಹಾಲಿನಲ್ಲಿ ಅಭಿಷೇಕ ಮಾಡಿದರು. ಅನಂತರ ಸ್ಪಟಿಕದ ಶಿವಲಿಂಗ, ಬೆಳ್ಳಿಯ ಸುಬ್ರಹ್ಮಣೇಶ್ವರ, ಕಾಶಿಯಿಂದ ಅವರ ಅಜ್ಜ ಸೋಮಯಾಜಿಗಳು ತಂದಿದ ಅಮೃತಶಿಲೆಯ ಅನ್ನಪೂರ್ಣಾ ಮತ್ತು ನರಸಿಂಹ ಸಾಲಿಗ್ರಾಮ ಎಲ್ಲವನ್ನೂ ಪುಟ್ಟ ಚೌಕುಳಿ ಮಡವಸ್ತ್ರದಿಂದ ಒಂದೊಂದಾಗಿ ಒರಿಸಿ, ಮತ್ತೆ ಸಂಪುಟದೊಳಗೆ ಇಟ್ಟರು.