ಪುಟ:ವೈಶಾಖ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ವೈಶಾಖ ಮೊದಲ ರಾತ್ರಿ ಅವರು ಎಷ್ಟೇ ಸರಸಸಲ್ಲಾಪಗಳಿಂದ ಮೃದುವಾಗಿ ಮುದ್ದಿಸಿ ಪ್ರಯತ್ನಪಟ್ಟರೂ ತಾನು ಮಾತ್ರ ಮುದುಡಿಕೊಂಡೇ ಇದ್ದದ್ದು! ಅವರೂ ಸೋತು ಕೊನೆಗೆ ಮೈನೀಡಿ ನಿದ್ದೆಹೋದರು... ಮಗುವಿನಂತೆ ಮಲಗಿದ್ದ ಅವರನ್ನು ದಿಟ್ಟಿಸುತ್ತಿದ್ದಂತೆ, ತನ್ನನ್ನ ಬಲಾತ್ಕರಿಸದ ಅವರ ಸಂಸ್ಕೃತಿ ತನ್ನ ಮನವನ್ನು ಸೆಳೆಯಿತು. ಇಲ್ಲಿಯ ತನಕ ತನ್ನನ್ನು ಆವರಿಸಿದ್ದ ಭಯ, ನಾಚಿಕೆಗಳು ಕರಗುತ್ತಾ ಬಂದು, ಅವರ ಬಗ್ಗೆ ಅನುಕಂಪ ಮೂಡಿತು. ತನಗೆ ಅರಿವಿಲ್ಲದೆಯೇ ಅವರ ತಲೆಗೂದಲ್ಲನು ನೇವರಿಸಿದಳು. ಅಷ್ಟು ಧೈರ್ಯ ಮಾಡಿದ್ದು ಸಿಡಿಲು ಮಲ್ಲಿಕಾರ್ಜುನ ಬೆಟ್ಟವನ್ನೇರಿದಷ್ಟು, ದಣಿವಾಗಿ ಬೆವತು ಹೋದಳು. ಆದರೂ ಅವರು ಎಚ್ಚರಗೊಳ್ಳಲಿಲ್ಲ. ಇನ್ನು ಮುಂದೆ ಸಾಹಸಕ್ಕಿಳಿಯದೆ ಮೌನವಾಗಿ ಮಲಗಿದಳು. ಏನೊ ತಪ್ಪು ಮಾಡಿದವಳಂತೆ ನರಳುತ್ತ ಹೊರಳಾಡಿದಳು. ಮೊದಲ ಕೋಳಿ ಹೋಲಗೇರಿಯಲ್ಲಿ ಕೂಗಿದಾಗ ಅವರಿಗೆ ಎಚ್ಚರವಾಯಿತು. ಎಚ್ಚರಾದೊಡನೆಯೆ ತನ್ನ ಹೊರಳಾಟದಿಂದ ತನಗಿನ್ನೂ ನಿದ್ದೆ ಬಂದಿಲ್ಲವೆಂದು ಗುರುತಿಸಿ ತನ್ನನ್ನು ಮೆಲ್ಲನೆ ತಬ್ಬಿ ಗಲ್ಲ ಹಿಡಿದು ತಿರುಗಿಸಿ, “ಇನ್ನೂ ನಿದ್ರೆ ಬರಲಿಲ್ಲವೆ?' ಎಂದು ಕೇಳಿದರು. ಹಾಗೆ ಕೇಳುವಾಗ ಪ್ರೀತಿಯ ರಸವನ್ನೆ ತಮ್ಮ ಮಾತಿನ ಮೂಲಕ ಹರಿಸಿದ್ದರು. ತಾನು ಸಂಕೋಚ ಮರೆತು ನಕ್ಕಿರಬೇಕು. ಅವರು ಬಾಗಿ ಮುತ್ತಿಟ್ಟರು. ತಾನು ಅಡ್ಡಿ ಮಾಡಲಿಲ್ಲ. ಮುಂದೆ ಎಲ್ಲ ಸಲೀಸು-ನೆನದೊಡನೆಯೇ ನಾಚಿ ಹಿಡಿಯಾದಳು... ಮೊದಲ ರಾತ್ರಿಯೇ ಅವರು ತನ್ನನ್ನು ಉದ್ದಕ್ಕೂ ಅಪರಿಮಿತ ಒಲುಮೆಯಿಂದಲೆ ನಡೆಸಿಕೊಂಡಿದ್ದರು. ಅವರ ಸಂಗಡ ಇದ್ದಾಗ ಬದುಕು ಕೇವಲ ಒಂದು ಹುಡುಗಾಟವೆಂದೇ ತನಗೆ ತೋರಿತ್ತು. ತನ್ನ ಇಡೀ ಬದುಕು ಒಂದು ಸುಂದರ ಹಗಲು, ಇಲ್ಲಿ ಇರುಳು ಇಣುಕಲೂ ಶಕ್ಯವಿಲ್ಲ- ಎಂದ ಭಾವನೆ ತನ್ನನ್ನು ಆವರಿಸಿತ್ತು... ಹಟಾತ್ತನೆ ಲಕ್ಷಮ್ಮನವರು ಪ್ರತ್ಯಕ್ಷವಾದರು, ರುಕ್ಕಿಣಿಯ ಆಲೋಚನೆಯನ್ನು ಭಂಗಗೊಳಿಸುತ್ತ... ಈ ದಿನ ಆಕೆಯ ಮಾತಿನ ಧಾಟಿಯೆ ಬೇರೆ! “ರುಕ್ಕು, ಕೊಂಚ ಸೀಮೆ ಅಕ್ಕಿ ಇದ್ದರೆ ಕೊಡ್ತೀಯ?... ರಾತ್ರಿ ಮೂರು ನಾಲ್ಕು ಬಾರಿ ಪ್ರವೃತ್ತಿ ಆಯ್ತು, ಈ ಮುತ್ತಿನ ಮಣಿ ಪಾಯಸ ಕಾಯಿಸಿ ಕುಡಿದ್ರೆ ಎಷ್ಟೋ ಶಮನ... ಊರಿನಲ್ಲಿ ಯಾವ ಅಂಗಡೀಲಿ ವಿಚಾರಿಸಿದರೂ ಇಲ್ಲ ಅಂತಾರೆ. ಆ ಲಬ್ಬೆ ಸಾಬಿ ಇಟ್ಟಿದ್ದ. ಈಗ ಅವನೂ ಕೈಯಾಡಿಸಿಬಿಟ್ಟ. ಸಂತೆ