________________
ಸಮಗ್ರ ಕಾದಂಬರಿಗಳು ೫೧ ದಿನದವರೆಗೂ ಕಾಯಬೇಕು ಅಂದುಬಿಟ್ಟ (ಹಸಿ ಸುಳ್ಳು! ಅಂದುಕೊಂಡಳು ರುಕ್ಕಿಣಿ), ನನಗೆ ಏನಾರೂ ಬೇಕದರೆ ಈ ಊರಿನಲ್ಲಿ ಬೇರೆ ಯಾರ ಮನೆಗೂ ಹೋಗಲ್ಲ. ನಿಮ್ಮ ಮನೆ ಒಂದಕ್ಕೆ ತಾನೆ ನಾನು ಬರೋದು?” (ಇದು ಮಾತ್ರ ನಿಜ. ಯಾಕೆಂದರೆ, ಬೇರೆ ಯಾರ ಮನೆಗೆ ಹೋದರೂ ಈಕೆಗೆ ಏನು ಹುಟ್ಟಲ್ಲ. ಈಸುಕೊಂಡದ್ದನ್ನು ಹಿಂದಕ್ಕೆ ಕೊಟ್ಟರೆ ತಾನೆ ಯಾರಾದರೂ ಮತ್ತೆ ಕೊಡ್ತಾರೆ!... ತನ್ನ ಮನೆಗೆ ಬಂದಾಗಲೆ ರುಕ್ಕಿಣಿ ಮುದುಕಿ-ಏನೊ ಹೋಗಲಿ ಎಂದು' ಕಿಂಚಿತ್ತೂ ಗೊಣಗದೆ ಕೊಸರಾಡದೆ ಈಕೆ ಕೇಳಿದ ಸಣ್ಣದು ಪುಟ್ಟದು ಕೊಡುತ್ತಿದ್ದದ್ದು!)... ಲಕ್ಷಮ್ಮನವರು ಸೀಮೆ ಅಕ್ಕಿಯನ್ನು ಸೆರಗಿನ ತುದಿಗೆ ಗಂಟುಹಾಕಿ ನಡುಮೆನಗೆ ನಡೆದು, “ಏನಮ್ಮ ಸುಶೀಲ, ಈಗ ಹೇಗಿದ್ದೀಯ?... ಇನ್ನೂ ಜ್ವರ ಇದೆಯೇನು?” ಎಂದು ಕೇಳಿದರು. “ಜ್ವರ ಈಗ ಬಿಟ್ಟಿದೆ. ಆದರೆ ಇನ್ನೂ ನಿತ್ರಾಣ, ಇನ್ನೊಂದೆರಡು ದಿನ ಅಷ್ಟೆ, ಆಮೇಲೆ ಎಲ್ಲ ಸರಿಯೋಗುತ್ತ” ಎಂದು ಸುಶೀಲ ಇನ್ನೂ ಬಳಲಿದ ದನಿಯಲ್ಲೇ ಉತ್ತರಿಸಿದಳು. ಲಕ್ಷಮ್ಮನವರು “ಸರಿಯಮ್ಮ ಬತ್ತೇನೆ. ನೀನು ಬೇಗ ಎದ್ದು ಓಡಾಡಿದರೆ, ರುಕ್ಕಿಣಿಗೂ ಎಷ್ಟೋ ಸಹಾಯವಾಗುತ್ತೆ” ಎಂದು ಉಪಚಾರದ ಮಾತನ್ನಾಡಿ ಹೋಗುತ್ತಿರುವಂತೆ ರುಕ್ಕಿಣಿಯು- ಏನು ಜನ! ತಮಗೆ ಬೇಕಾದಾಗ ಒಂದು ಥರ, ಬೇಡವಾದಾಗ ಇನ್ನೊಂದು ಥರ ಆಡುತ್ತೆ ಈ ಹೆಂಗಸು. ಈ ಗಳಿಗೆಗೆ ಮೋಡ, ಇನ್ನೊಂದು ಗಳಿಗೆಗೆ ಬಿಸಿಲುಎಂದು ಬೇಸರಪಡುತ್ತ, ಹೆಚ್ಚಿದ ಮದರಂಗದ ಕಾಯಿಗಳನ್ನು ಪಲ್ಯ ಮಾಡಲೆಂದು ತೆಗೆದಿಟ್ಟು, ಒಲೆಯ ಮೇಲೆ ಹಿತ್ತಾಳೆ ಬೋಸಿಯಲ್ಲಿ ಕುದಿಯುವ ನೀರಿಗೆ ಸುರಿದಳು. ಅಷ್ಟರಲ್ಲಿ ದೇವರ ಕೋಣೆಯಿಂದ ಗಂಟೆ ಬಾರಿಸಿದ ಸದ್ದು ಕೇಳಿ ಬಂದು, ತನ್ನ ಸೀರೆಯ ಸೆರಗಿಗೆ ಕೈಗಳನ್ನು ಒತ್ತಿಕೊಳ್ಳುತ್ತ ಅಲ್ಲಿಗೆ ಧಾವಿಸಿದಳು. ಶಾಸ್ತ್ರಗಳು ಮಂತ್ರ ಹೇಳುತ್ತ ಮಂಗಳಾರತಿ ಮಾಡಿ, ಆರ್ಥ್ಯ ಬಿಟ್ಟು, ಕೈಯಲ್ಲಿ ಹಿಡಿದಿದ್ದ ಹೂಗಳನ್ನು ದೇವರುಗಳಿಗೆ ಅರ್ಪಿಸಿ, ಬಳಿಕೆ ಮಂಗಳಾರತಿಯನ್ನು ತಂಗಿ ಸುಶೀಲೆಗೂ ಅನಂತರ ಸೊಸೆ ರುಕ್ಕಿಣಿಗೂ ಕೊಟ್ಟು, ತಾವೂ ತೆಗೆದುಕೊಂಡು ಭಕ್ತಿಯಿಂದ ತಮ್ಮನ್ನೆ ಮೂರು ಸಲ ಸುತ್ತು ಹಾಕಿ, ಪ್ರದಕ್ಷಿಣ ನಮಸ್ಕಾರಂ ಸಮರ್ಪಯಾಮಿ ಎಂದು ಉಚ್ಚರಿಸುತ್ತ ನೆಲದ ಮೇಲೆ ದೀರ್ಘದಂಡ ಪ್ರಣಾಮ ಮಾಡಿದರು. ಅನಂತರ ಉಪಾಹಾರ, ಉಪ್ಪಿಟ್ಟಿಗೆ ಮೊಸರು ಕಲೆಸಿ ಸೇವಿಸಿ, ಐದಾರು ಬೂದು ಬಾಳೆಹಣ್ಣುಗಳನ್ನು ಮೆದ್ದು, ಒಂದು ಬೆಳ್ಳಿಯ ಉದ್ದನೆ ಲೋಟ ಭರ್ತಿಯಾಗಿ ಹಾಲು ಕುಡಿದು, ತೋಟಕ್ಕೆ ಹೋರಟ ಶಾಸ್ತಿಗಳನ್ನೆ ನಿಟ್ಟಿಸುತ್ತಿದ್ದ,