ಪುಟ:ವೈಶಾಖ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೫೩ ಎಂದು ಗುಡುಗಿದರಂತೆ! ಅಂದಿನಿಂದ ಅವರು ಬದುಕಿರುವವರೆಗೂ ಆ ಪೋಲಿಗಳ ಪುಂಡಾಟಿಕೆ ಊರಿನಲ್ಲಿ ಕೊಂಚ ತಣ್ಣಗಾಗಿತ್ತು... ರುದ್ರನ ಮಾವ ಗಂಗಪ್ಪನಾಗಲಿ, ಸ್ವಯಂ ನಂಜೇಗೌಡನೆ ಆಗಲಿ, ಬಹಿರಂಗವಾಗಿ ಅವರ ಪೋಲಿ ಆಟವನ್ನು ವಹಿಸಿ ಬರುವಂತಿರಲಿಲ್ಲ. ಆದ್ದರಿಂದ ಅವರೆಲ್ಲರೂ ಪೆಟ್ಟು ತಿಂದ ನಾಗರಹಾವಿನಂತೆ ತನ್ನವರ ವಿರುದ್ಧ ಒಳಗೊಳಗೇ ವಿಷ ಕಾರಲು ಉದ್ಯಕ್ಷರಾದರು... ಪರಿವಾರದ ಸಣ್ಣ ತಮ್ಮ ತೋಟದಲ್ಲಿ ಆದೂ ಇದೂ ಕೂಲಿ ಮಾಡುತ್ತಿದ್ದ ಹೆಣ್ಣು, ಹೆಸರಿಗೆ ತಕ್ಕಂತೆ ಅವಳ ಶರೀರದ ರಚನೆ ಸಣ್ಣದಾಗಿದ್ದರೂ ಅವಳ ಎದೆಯ ಭಾಗ ತುಂಬಿ ಬೆಳೆದು, ಅವಳು ನಡೆಯುವಾಗ-ಅವಳು ರವಿಕೆ ತೋಡುತ್ತಿರಲಿಲ್ಲವಾಗಿ-ಅತ್ತಿಂದಿತ್ತ ಕುಂಬಳ ಕಾಯಿಗಳಂತೆ ಉರುಳಾಡಿ, ಎಂಥವರೂ ಒಮ್ಮೆ ಅತ್ತ ಕಣ್ಣು ಹಾಯಿಸುವಂತೆ ಮಾಡುತ್ತಿತ್ತು. ಈ ಸನ್ನಿವೇಶವನ್ನೇ ಉಪಯೋಗಿಸಿ ಗಂಗಪ್ಪನೂ ನಂಜೇಗೌಡನೂ ಆ ಪೋಲಿ ಪಟಾಲಮ್ಮಿನ ಜೊತೆಗೂಡಿ ತನ್ನ ಯಜಮಾನರಿಗೂ ಆ ಹೆಣ್ಣಿಗೂ ಸಂಬಂಧ ಕಲ್ಪಸಿ ಕತೆ ಕಟ್ಟಿದ್ದರು. ಅದನ್ನು ಊರಿನಲ್ಲಿ ಒಳಗಿಂದೊಳಗೆ ನಾಲಿಗೆಯಿಂದ ನಾಲಿಗೆಗೆ ದಾಟಿಸುವ ಹೀನ ಕಾರ್ಯಕ್ಕೂ ಇಳಿದರು. ಊರಿನ ಹಲವರು ಈ ಮಸಲತ್ತಿಗೆ ಮಾರುಹೋಗುದಿದ್ದರೂ ಕೆಲವರಾದರೂ ಅಂತರಂಗದಲ್ಲಿ ಅದಕ್ಕೆ ಆಸ್ಪದವಿತ್ತು ನಂಬಿದ್ದುಂಟು... ಇದಕ್ಕೆ ಬಹಳ ಹಿಂದೆಯೇ ಗಂಡನನ್ನು ಕಳೆದುಕೊಂಡು ತನ್ನ ಒಬ್ಬಳೇ ಮಗಳು ಸರಿಸಿಯೊಡನೆ ತೇರನ್ನೆ ನಂಬಿ, ನಮ್ಮ ಮನೆಗೇ ಬಂದು ಠಿಕಾಣಿ ಹೂಡಿದ್ದ ಸುಶೀಲತೆಗೆ ಈಗ ಜ್ವರ ಬಿಟ್ಟು ಅವಳು ಸಂಪೂರ್ಣ ಗುಣ ಹೊಂದಿದ್ದಳು. ಗಂಡನ ಮನೆಯವರು ಸುಶೀಲತೆಗೆ ಕೊಡುತ್ತಿದ್ದ ಕಿರುಕುಳವನ್ನು ಕೇಳಿ ವ್ಯಾಕುಲಗೊಂಡು, ಮಾವನವರು ತಾವೇ ತೆರಳಿ ಅವಳನ್ನು ಇಲ್ಲಿಗೆ ಕರೆದತಂದಿದ್ದರು. ತನಗಿಂತ ನಾಲೈದು ವರ್ಷವಷ್ಟೇ ಹಿರಿಯವಳಾದ ಸುಶೀಲತೆಗೆ ಅವಳ ಗಂಡನ ಮನೆಯವರು ಗಂಡ ಸತ್ತೊಡನೆಯೆ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿದ್ದುದಂತೂ ಮಾವನವರಿಗೆ ಕಣ್ಣೀರು ತಂದಿತ್ತು... ಮೊದಮೊದಲಿಗೆ ಕತ್ತಲೆಯ ಬೋನಿಗೆ ಬಿದ್ದ ಹುಲಿಯಂತೆ, ಸುಶೀಲ ಯಾವ ಸಣ್ಣ ವಿಷಯಕ್ಕೂ ತನ್ನನ್ನೆ ಕೇಳಿ ಅನುಸರಿಸಿ ನಡೆಯುತ್ತಿದ್ದಳು, ಕಾಲ ಕಳೆದಂತೆ ಕೊಂಚಕೊಂಚವಾಗಿ ಅವಳ ಚರ್ಯೆ ಬದಲಿಸುತ್ತ ಹೋಯಿತ್ತು... “ನಾನಿರುವಾಗ ನೀನ್ಯಾಕೆ ವೃಥಾ ಅಡಿಗೆ ಮಾಡಬೇಕು?... ನನಗೆ ಅಡಿಗೆ ಮಾಡಲಿಕ್ಕೆ ಬಲು ಇಷ್ಟ. ಹೇಗೂ ಸಕೇಶಿಯಾದ ನೀನು ಮಾಡುವ ಅಡಿಗೆಯನ್ನು