ಪುಟ:ವೈಶಾಖ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೫೯ ಮಗ್ನಳಾಗಿದ್ದಳು. ಹೆಣ್ಣಾಳುಗಳು ಬಂದೊಡನೆಯೆ ಮಂಕರಿಗಳಲ್ಲಿ ಬಟ್ಟಲು, ಲವಂಗದ ಚುರು, ಅಷ್ಟಭಾಗದ ಚೂರು- ಈ ರೀತಿ ಕತ್ತರಿಸಿ, ಚಾಪೆಗಳ ಮೇಲೆ ಒಣಹಾಕುವುದರಲ್ಲಿ ರುಕ್ಕಿಣಿಯು ತಾನೂ ಅವರಿಗೆ ಜೊತೆಯಾಗಿದ್ದಳು. ಅಷ್ಟರಲ್ಲಿ ಅಟ್ಟದಿಂದ ಇಳಿದು ಬಂದು ಸುಶೀಲ, “ಇಲ್ಲೆ ಶ್ಯಾನುಭೋಗರ ಮೆನ ಹತ್ತಿರ ಕೊಂಚ ಹೋಗಿ ಬತ್ತೇನೆ...ನೆನಪಿರಲಿ ರುಕ್ಕಿಣಿ-ಒಣಗಿಸುವಾಗ ಬಟ್ಟಲಾದರೆ ಎರಡು ಬಿಸಿಲು, ಚೂರಾದರೆ ಒಂದು ಬಿಸಿಲೇ ಸಾಕು” ಎಂದು ರುಕ್ಕಿಣಿಗಿಂತಲೂ (ಎಲ್ಲ ವಿಚಾರಗಳಂತೆ!) ಅಡಿಕೆ ಪಾಕು ಮಾಡುವುದರಲ್ಲಿಯೂ ಕೂಡ ತನ್ನ ಅನುಭವವೇ ಹಿರಿದೆಂಬುದನ್ನು ಹೆಣ್ಣಾಳುಗಳೆಲ್ಲರ ಮುಂದೆಯೂ ಸಾರುವಂತೆ ಹೇಳಿ ಹೋದಳು. ಅಪರೂಪಕ್ಕೆ ಗಂಟುಬೀಳುತ್ತಿದ್ದ ಸರಸಿ ಈ ದಿನವೂ ದುಂಬಾಲು ಬಿದ್ದು ರುಕ್ಕಿಣಿಯ ಸಂಗಡ ತೋಟಕ್ಕೆ ಬಂದಿದ್ದಳು. ತೋಟದಲ್ಲಿ ಕೃಷ್ಣಶಾಸ್ತ್ರಿಗಳು ಆಳುಗಳನ್ನು ಕೂಡಿಕೊಂಡು ವೀಲೆಯದೆಲೆ ಹಂಬುಗಳನ್ನು ಅಡಿಕೆ ಮರಗಳಿಂದ ಇಳುಕಿ, ಅನಂತರ ಅದನ್ನು ಮಂಡಿಯುದ್ದ ಗುಂಡಿಗಳಲ್ಲಿ ಹೂಳಿ, ಪಾತಿಗಳನ್ನು ಮಾಡಿ, ಗೊಬ್ಬರ ಹಾಕಿ, ಅಲ್ಲಲ್ಲಿ ತೋಡಿದ್ದ ನೆಲ ಬಾವಿಗಳಿಂದ ಮಣ್ಣಿನ ಗಡಿಗೆಗಳಲ್ಲಿ ತಂದು ನೀರುಣಿಸುತ್ತಿದ್ದರು. ಸರಸಿಗೆ ಇದೆಲ್ಲ ಹೊಸದಾಗಿ ಕಂಡು, “ಇದೆಲ್ಲ ಯಾಕೆ?... ಯಾಕೆ ಹೀಗೆ ಮಾಡ್ತಿದಾರು?” -ವಿವರಣೆ ಕೇಳಿದಳು. “ನೋಡ್ತಿದೀಯಲ್ಲ ಸರಸಿ, ಅವರೆಲ್ಲರೂ ವೀಳೆಯದೆಲೆ ಹಂಬುಗಳನ್ನು ಅಡಿಕೆ ಮರಗಳಿಂದ ಕೆಳಕ್ಕೆ ಇಳಿಸ್ತಾ ಇದಾರೆ. ಮೂರು ವರ್ಷಕ್ಕೊಮ್ಮೆ ಹೀಗೆ ಮಾಡ್ತಾರೆ.” “ಯಾಕೆ ಇಳಿಸಬೇಕು?” “ಯಾಕೆ ಅಂದರೆ- ಈ ಹಂಬುಗಳು ಹಳೇದಾಗಿರುತ್ತೆ. ಹೀಗೆ ಮಾಡಿ ಹೊಸ ಹಂಬುಗಳನ್ನು ಬೆಳೆಸ್ತಾರೆ... ಆ ಕಡೆ ನೋಡು, ಬಿದಿರೇಣಿ ಮೇಲೆ ಹತ್ತಿ ಆಳುಗಳು ಹೇಗೆ ಅಡಿಕೆ ಮರಗಳನ್ನು ಬಿಗಿಯಾಗಿ ಹಿಡಿದಿರೋ ಪಲ್ಲಿಗಳನ್ನ ಮತ್ತು ನಾರಿನ ಕಟ್ಟುಗಳನ್ನು ಸಡಿಲಿಸಿ ಇಳಿಸ್ತಾ ಇದಾರೆ!...” “ಏನೋಮ್ಮ ನನಗೊಂದೂ ಅರ್ಥವಾಗಲ್ಲ. ನಾನೂ ಆ ಬಿದಿರೇಣಿ ಮೇಲೆ ಹತ್ತಿ, ಮಾವನ ಹತ್ತಿರ ಹೋಗಬೇಕು. ಹತ್ತಿಸಿಕೊಡ್ತೀಯ, ಅಕ್ಕ?” - ದೊಡ್ಡವರ ಹಾಗೆ ಗಂಭೀರವಾಗಿ ಮಾತಾಡಿತು ಹುಡುಗಿ,