ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೬೧ ತರುಣಿಯ ಮಂಡೆ ಬೋಳಿಸಿ ವಿರೂಪಗೊಳಿಸಲು ನಾನೆಂದೂ ಒಪ್ಪಲಾರೆ, ಎಂದು ಖಚಿತವಾಗಿ ನುಡಿದಿದ್ದರು.... “ನಿಮಗೆ ಬಹಿಷ್ಕಾರ ಹಾಕಬೇಕಾಗುತ್ತದೆ” ಎಂದು ಬ್ರಾಹ್ಮಣ ಮುಖಂಡರು ಗುಡುಗಿದ್ದರು. ಎಲ್ಲರಿಗಿನ್ನ ಅತಿಯಾಗಿ ಆರ್ಭಟಿಸಿವನು ಇದೇ ಕೇಶವಯ್ಯ!ಎಂಥ ವಿಪರ್ಯಾಸ! “ಬಹಿಷ್ಕಾರ ಹಾಕ್ತಿರೇನ್ನಯ್ಯ- ಹೋಗಿ ಹಾಕ್ಕೊಳಿ, ದೃಢವಾಗಿ ಹೇಳಿ, ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಹಾಕುತ್ತ, ಹೊರಜಗುಲಿಯಿಂದ ಮಾವಯ್ಯ ಮನೆಯೊಳಗೆ ಬಂದಾಗ, ಸುಶೀಲ ಸುಮ್ಮನಿರಲಿಲ್ಲ. ಆ"ಆಚಾರ, ಬಹು ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ. ಅದಕ್ಕೆ ವಿರೋಧವಾಗಿ ಹೋಗಬಾರದು, ಕಿಟ್ಟಣ್ಣ. ಅದರಲ್ಲೂ ಈ ಸಣ್ಣ ವಿಷಯಕ್ಕೆ ಇಡೀ ಸಮಾಜವನ್ನೇ ಮೈಮೇಲೆ ಹಾಕಿಕೊಳ್ಳುವುದರಲ್ಲಿ ಯಾವು ಜಾಣತನವಿದೆ?ನೀನೇ ಹೇಳು...” ಹೀಗೆ ಇನ್ನೂ ಏನೇನೂ ಗಳಹುವುದರಲ್ಲಿದ್ದಳು ಸುಶೀಲತೆ. “ಸುಶೀ, ನೀನು ಮಾತಾಡಬಾರದು, ಸುಮ್ಮನಿರು.... ನೀನು-ಬಾಲ ಕಳೆದುಕೊಂಡಿರುವ ನರಿ” ಎಂದು ಕಠಿಣವಾಗೇ ಹೇಳಿದರು. ಈ ಮಾವಯ್ಯನ ಈ ಚುಚ್ಚು ಮಾತು ಅತ್ತೆಯ ಬಾಯಿ ಮುಚ್ಚಿಸಿತ್ತು... ಆದರೆ ಸಕೇಶಿಯಾಗಿ ರುಕ್ಕಿಣಿ ಉಳಿದದ್ದು ಕೆಲವು ಕಾಲ, ಅವಳೊಬ್ಬಳಿಗೆ ಅಲ್ಲದೆ ಕೃಷ್ಣಶಾಸ್ತಿಗಳಿಗೂ ಬ್ರಾಹ್ಮಣ ಸಮುದಾಯ ಅನೇಕ ಬಗೆಯಲ್ಲಿ ಕಿರುಕುಳ ಕೊಟ್ಟಿತ್ತು. ಆ ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಏನು ಸಂಭವಿಸಿದರೂ ಈ ಮನೆಯವರಿಗೆ ಅಂಥ ಸಮಾರಂಭಗಳಿಗೆ ಪ್ರವೇಶವಿರಲಿಲ್ಲ. ಹಾಗೆಯೇ ಈ ಮನೆಯಲ್ಲಿ ಯಾವ ಶುಭ ಅಶುಭಕ್ಕೂ ತಾವು ಭಾಗಿಯಾಗಬಾರದೆಂದು ಅವರೆಲ್ಲರೂ ನಿಶ್ಚಯಿಸಿದ್ದರು. ಇದರ ಬಿಸಿ ವ್ಯಾಪಕವಾಗಿ ರುಕ್ಕಿಣಿಗೆ ತಟ್ಟಿತೇ ವಿನಹ ಶಾಸ್ತಿಗಳಿಗಲ್ಲ. ಅವರು ಎಂದಿನಂತೆ ನಿರ್ಲಿಪ್ತವಾಗಿ ತಮ್ಮ ತೋಟ ತುಡಿಕೆ ದೇವರ ಪೂಜೆಗಳಲ್ಲಿ ನಿರತವಾಗಿ ಏನೂ ಅಂಟದಂತೆ ಇದ್ದುಬಿಟ್ಟರು. ರುಕ್ಕಿಣಿಯಾದರೊ ಮನೆಯ ಹೊರಗೆ, ಒಳಗೆ ಹಿಂಸೆ ಅತಿಯಾಯಿತು. ಹೊರಗಿನವರ ಹಿಂಸೆಯನ್ನು ಅವಳು ಹೇಗೊ ಸಹಿಸಬಲ್ಲವಳಾಗಿದ್ದಳು. ಹಾಗೆ ಸಹಿಸಿಕೊಳ್ಳಲು ಆಗಾಗ ರುಕ್ಕಿಣಿಯ ಮನೆಗೆ ಬಂದು, ತಮ್ಮ ಮನೆಗೂ ಕರೆದೊಯ್ದು ವೆಂಕಣ್ಣಜೋಯಿಸರ ಹಿರಿಯ ಮಗಳು ನಾಗಲಕ್ಷ್ಮಿಯು ನೀಡುತ್ತಿದ್ದ ಸಹಾನುಭೂತಿ ಉಪಚಾರಗಳು ತುಂಬ ಸಹಾಯಕವಾಗಿದ್ದುವು. ಆದರೆ ಸುಶೀಲತೆಯ ಒಳಗಿನ ಕಾಟ ಮಾತ್ರ ಸಹಿಸಲು ದುಸ್ಸಾಧ್ಯವಾಗಿತ್ತು...