________________
ಸಮಗ್ರ ಕಾದಂಬರಿಗಳು ೮೧ ಕೆಲಸಗಳನ್ನೂ ಮಾಡುತ್ತಾಳೆ. ನಮ್ರತೆಯಿಂದ ಮಾಡುತ್ತಾಳೆ. ಹೊಳೆಯಲ್ಲಿ ಬಟ್ಟೆ ಒಗೆದು ತರುವುದರಿಂದ ಹಿಡಿದು ಮುಸುರೆ ಪಾತ್ರೆ ತಿಕ್ಕುವುದು, ಕಸ ಗುಡಿಸುವುದು, ಅಡಿಗೆ ಮಾಡುವುದು, ಹಾಲು ಕರೆಯುವುದು, ಮಗುವನ್ನು ನೋಡಿಕೊಳ್ಳವವರೆಗೆ ಇಂತಿಷ್ಟೂ ಗೊಣಗದೇ ಪ್ರೀತಿಯಿಂದಲೇ ಮಾಡುತ್ತಾಳೆ. ಆದರೆ ಸಂಜೆಯ ವೇಳೆ ಒಮ್ಮೊಮ್ಮೆ ತನಗೂ ಬೇಸರವಾಗುತ್ತದೆ, ರಾಮಮಂದಿರದಲ್ಲಿ ನಡೆಯುವ ಸಂಗೀತವನ್ನೊ ಹರಿಕತೆಯನ್ನೂ ಕೇಳುವ ಆಸೆ ತನಗೂ ಆಗುತ್ತದೆ ಎಂದು ಹಟ ಹಿಡಿದು, ಸಾತುವಿನ ವಿರೋಧವನ್ನು ಉಲ್ಲಂಘಿಸಿ, ಅಲ್ಲಿಗೆ ನಡೆದುಬಿಡುತ್ತಾಳೆ. ಸಾವಿತ್ರಮ್ಮ ಕುಪಿತಳಾಗಿ ಏನಾದರೂ ಬೈದರೆ, “ನಿಮಗೆ ಅಷ್ಟು ಹಿಂಸೆಯಾದರೆ ನನ್ನ ದರುಮನಹಳ್ಳಿಗೇ ವಾಪಸ್ಸು ಕಳಿಸಿಬಿಡಿ. ನಮ್ಮ ಮಾವಯ್ಯ ಬಂದು ನನ್ನನ್ನು ಕರೆದೊಯ್ಯುವವರೆಗೆ ನೀವೇನೂ ಕಾಯಬೇಕಾಗಿದಿಲ್ಲ” ಎಂಬ ನಿಷ್ಠುರದ ನುಡಿ ಸಾವಿತ್ರಮ್ಮನನ್ನು ತಣ್ಣಗೆ ಮಾಡುತ್ತದೆ. ರುಕ್ಕಿಣಿಯ ಬೆನ್ನಿನ ಹಿಂದೆ ಅವರಿವರ ಸಂಗಡ ಹೀಯಾಳಿಸಿ ಸಮಾಧಾನಪಟ್ಟುಕೊಳ್ಳುವುದು ಒಂದೇ ಅವಳಿಗೀಗ ಉಳಿದಿರುವ ದಾರಿ!... “ಏನು ಗಯ್ಯಾಳಿಯಾಗಿಬಿಟ್ಟಿದ್ದಾಳೆ ರೀ-ಅದೇನು ಬಾಯಿ! ಏನು ಕಥೆ... ಹಿಂದೆ ಹೀಗಿರಲಿಲ್ಲಮ್ಮ, ಆ ವೀಣೆ ಶ್ಯಾಮ ಊರಿಗೆ ಬಂದ ನೋಡಿ, ಇವಳು ಹೀಗೆ ಬದಲಾಗಿಬಿಟ್ಟಿದ್ದಾಳೆ, ಬಟ್ಟೆ ಒಗೆಯಲಿಕ್ಕೆ ಹೊಳೆಗೆ ಹೋಗುವಾಗ ಅವನ ಮನೆಗೂ ಹೋಗ್ತಾಳಂತೆ. ಅಲ್ಲಿ ಏನೇನು ನಡೆಯುತ್ತೊ” ಎಂದು ಕಣ್ಣು ತೇಲಿಸುತ್ತಿದ್ದಳಂತೆ! ನೆರೆಮನೆ ಗಿರಿಜಮ್ಮನವರೇ ತಾವೂ ಒಮ್ಮೆ ಹೊಳೆಯ ದಡಕ್ಕೆ ಬಟ್ಟೆ ಒಗೆಯಲು ಬಂದಾಗ, ಆ ಕಡೆ ಈ ಕಡೆ ನೋಡಿ, ಯಾರೂ ಹತ್ತಿರದಲ್ಲಿಲ್ಲ, ಯಾರ ಕಿವಿಗೂ ತಮ್ಮ ಮಾತು ಬೀಳುವ ಸಂಭವವಿಲ್ಲ ಇನ್ನುವುದನ್ನು ಖಾತರಿಪಡಿಸಿದ ನಂತರ, ಗೋಪ್ಯವಾಗಿ ಅಂದಿದ್ದರು: “ಸಾತು ಗುಣ ನನಗೂ ಒಪ್ಪಲಿಲ್ಲಮ್ಮ ಮೂರು ದಿನದ ಹಿಂದೆ ನಮ್ಮ ಮನೆಗೆ ಬಂದು, ಸ್ವಲ್ಪ ದಿನ ತಾನು ಹುಟ್ಟಿ ಬೆಳೆದಿರುವ ಊರಿನಲ್ಲಿ ಇದ್ದು ಹೋಗಲಿಕ್ಕೆ ಬಂದಿರುವ ಶ್ಯಾಮನಿಗೂ ನಿನಗೂ-ಹೂ, ಹೋಗಲಿ ಬಿಡು. ಬೇಸರಪಟ್ಟುಕೊ ಬೇಡ. ಅವಳದ್ದು-ಹಾರುವ ಹಕ್ಕಿಗೆ ಹಾದರ ಕಟ್ಟುವ ಜಾತಿ!” ಎಂದು ಹೇಳಿ ತನ್ನ ಮನಸ್ಸನ್ನು ಕಲಕಿದ್ದಳು... ಒಂದು ಬುಧವಾರ ಶಾಲೆಯಿಂದ ಇಳಿಹೊತ್ತಿನಲ್ಲಿ ಹಿಂದಿರುಗುತ್ತಿದ್ದ ಜಾನಕಿ ಇಂದೇಕೊ ಸುಮಾರು ಹನ್ನೆರಡು ಗಂಟೆಯ ಸಮಯಕ್ಕೆ ಹಿಂದಿರುಗಿದ್ದು