ಶಂಕರಕಥಾಸಾರ ೪೧ ನವಮವಲ್ಲ ರೀ ಗತ್ಯಾ ಗೋಕರ್ಣತೀರ್ಥ೦ ಗುರುರಗತನಯಾಧೀಶಮಾರಾಧ್ಯ ತಸ್ಮಾತ್ ಗಾರ್ಯ ಮೂಕಾಂಬಿಕಾಯಾಃ ಪದಯುಗನಥ ಸಂಜೀವ ಭೂದೇವಪುತ್ರಮ್ | ಲಜ್ಜಾ ಬಗ್ರಹಾರಂ ತದನು ಪುರಿ ಯುತಶೃಂಗಗಿರಾಂ ಸ್ವಶಿಷ್ಯತಿ ವಾಕ್ಷೀಠಸ್ಥಂ ಸುರೇಶಂ ವಿದಧದಘಹೃತೀ ವಾಕ್ಷದಾಬೈ ಸಿಷೇವೇ || Kತ ನಂತರ ಆಚಾರರು ತೀರ್ಥಯಾತ್ರೆಗಳಂ ಮಾಡುತ್ತಾ ಗೋಕರ್ಣ * ಅ NR ಕ್ಷೇತ್ರಕ್ಕೆ ಬಂದು ಗೋಕರ್ಣೇಶ್ವರನನ್ನು ಪೂಜಿಸಿ ವಾದಿಗಳನು. es= ಜಯಿಸುತ್ತಾ ಮೂಕಾಂಬಿಕೆಯ ದರ್ಶನಾರ್ಥವಾಗಿ ತೆರಳಿದರು ದಾರಿಯಲ್ಲಿ ವಿಪ್ರದಂಪತಿಗಳೋರ್ವರು ಮೃತನಾಗಿರುವ ತಮ್ಮ ಏಕಮಾತ್ರ ಪುತ್ರನನ್ನು ತೊಡೆಯಮೇಲಿಟ್ಟು ಕೊಂಡು ಪ್ರಲಾಪಿಸುತ್ತಿರುವು ದನ್ನು ಆಚಾರರು ನೋಡಿ ಬಹಳ ವ್ಯಸನಾಕ್ರಾಂತರಾಗುತ್ತಿರಲು ಆಕಾಶವಾಣಿಯು ( ಸಂರಕ್ಷಿಸುವುದಕ್ಕೆ ಶಕ್ತಿ ಇರುವ ಮನುಷ್ಯನಿಗೆ ದುಃಖಕ್ಕಿಂತಲೂ ದಯೆಯೇ ಶ್ರೇಷ್ಟವು” ಎಂದಿತು. ಅದನ್ನು ಆಚಾರರು ಕೇಳಿ ( ತ್ರಿಜಗದ್ರಕ್ಷಣ ಸಾಮರ್ಥ್ಯವುಳ್ಳವರಿಗೆ ಅದು ಸತ್ಯವು ” ಎನ್ನಲು ಆ ಮೃತಪುತ್ರನು ನಿದ್ರೆಯಿಂದ ಎದ್ದವನಂತೆ ಎದ್ದನು. ಅನಂತರ ಆಚಾರರು ಅವರಿಂದ ಸ್ತುತಿಸಲ್ಪಟ್ಟವರಾಗಿ, ಮೂಕಾಂಬಾದೇವಾ ಲಯಕ್ಕೆ ಹೋಗಿ ದೇವಿಯನ್ನು ಆರಾಧಿಸಿ ಶ್ರೀ ಚಕ್ರವಂ ಸ್ಥಾಪಿಸಿ ಅನಂತರ ಶ್ರೀ ಬಲಿ ಸಂಜ್ಞಕವಾದ ಅಗ್ರಹಾರಕ್ಕೆ ಸಶಿಷ್ಯರಾಗಿ ಬಂದರು. ಅಲ್ಲಿಗೆ ದಿವಾಕರನೆಂಬ ಬ್ರಾಹ್ಮಣನು ಮೂಕನಾದ ತನ್ನ ಮಗನನ್ನು ಕರೆದು ಕೂಂಡುಬಂದು ಆಚಾರರಿಗೆ ವಂದಿಸಿ ( ಸ್ವಾಮೀ! ನನ್ನ ಮಗನು ಜನ್ಮಾರಭ್ಯದಿಂದ ಮೂಕನಹಾಗೆ ಇದಾನೆ. ಎಪ್ರತ್ವಕ್ಕೆ ಭಂಗಬರುವುದೆಂದು ಸಕಾಲದಲ್ಲಿಯೇ ಉಪನಯನ ಮಾಡಿದೆನು. ಹುಡುಗರು ಆಟಕ್ಕೋಸ್ಕರ ಗದ್ದಲಮಡಿಕೊಂಡು ಹೋದರೂ, ನನ್ನ ಮಗನು ಹೋಗುವುದಿಲ್ಲ. ಹುಡುಗರು ಮೂರ್ಖನಾದ ಇವನನ್ನು ನೋಡಿ ಹೊಡೆ ದರೂ ಇವನು ಕೋಪವನ್ನು ಹೊಂದುವುದಿಲ್ಲ. ಯಾವಾಗಲಾದರೂ ತನ್ನ ಮನಸ್ಸು ಬಂದಾಗ ಊಟಮಾಡುವನೇ ಹೊರ್ತು ನಿತ್ಯವೂ ಊಟಮಾಡುವುದಿಲ್ಲ. ಸೈಜ್ಞಾನಿ ಹಾರಮಾಡುತ್ತಾನೆ; ಯಾವಮಾತನ್ನೂ ಆಡುವುದಿಲ್ಲ” ಎನ್ನಲು ಆಚಾರರು «« ನೀನು
ಪುಟ:ಶಂಕರ ಕಥಾಸಾರ.djvu/೫೭
ಗೋಚರ