ಪುಟ:ಶಂಕರ ಕಥಾಸಾರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಂಕರಕಥಾಸಾರ

೬೩

ಅದಕ್ಕೆ ದೇಶಿಕರು ಏಕಮೇವಾದ್ವಿತೀಯಂ ಬ್ರಹ್ಮ'ಎಂಬಂತೆ ನಿತ್ಯಸ್ವರೂ
ಪನಾದ ಪರಮಾತ್ಮನು ಓರ್ವನೇ; ಅವನಿಂದಲೇ ತ್ರಿಮೂರ್ತಿಗಳೂ ಹುಟ್ಟುತ್ತಾರೆ. ಮತ್ತು
ಲಯಹೊಂದುತ್ತಾರೆ ಕಲೆಗಳಿಗೆ ವಿಕಲೆಗಳು ಹೇಗೋಹಾಗೆಯೇ ಆ ತ್ರಿಮೂರ್ತಿಗ
ಳಿಂದಲೂ ಉತ್ಪನ್ನರಾದವರಿದಾರೆ; ರುದ್ರನಲ್ಲಿ ಏಕಾದಶರುದ್ರರೆಂದು ಪ್ರಸಿದ್ಧರಾದ
ಹನ್ನೊಂದುಜನ ಅಂಶಭೂತರುಂಟು; ಪರಬ್ರಹ್ಮನಿಗಿರುವ ಶಕ್ತಿಯು ತ್ರಿಮೂರ್ತಿ
ಗಳಿಗೆ ಹೇಗಿಲ್ಲವೋ ಹಾಗೆಯೇ ತ್ರಿಮೂರ್ತಿಗಳಿಗಿರುವ ಶಕ್ತಿಯು, ತದಂಶೀಯರಿಗಿ
ಲ್ಲವು;ಆದ್ದರಿಂದ ನಿಮ್ಮ ಮಲ್ಲಾರಿಗೆ ಅಷ್ಟು ಪ್ರಾಶಸ್ಯವು ಹೇಗೆ ಬಂದೀತು? ಶ್ವವೇ
ಷವನ್ನು ಧರಿಸುವುದು; ನಿತ್ಯಕರ್ಮವನ್ನು ಬಿಡುವುದು; ತ್ರಿಕಾಲದಲ್ಲಿಯೂ ನಾಟ್ಯಾಸ
ಕ್ಯರಾಗಿರುವುದು; ಇತ್ಯಾದಿ ಬ್ರಾಹ್ಮಣ ವಿಘಾತಕಗಾದ ಕರ್ಮಾಚರಣೆಯುಳ್ಳ ನಿಮ್ಮ
ಮುಖಾವಲೋಕನದಿಂದ ಸೂರದರ್ಶನವನ್ನು ಮಾಡಬೇಕು” ಎಂದು ಹೇಳಿ,ನಮಸ್ಕ
ರಿಸಿ ಕ್ಷಮಾಪಣೆಯಂ ಬೇಡಿದ ಅವರಿಗೆಲ್ಲಾ ಪ್ರಾಯಶ್ಚಿತ್ತವಂ ಮಾಡಿಸಿ ಅವರನ್ನೆಲ್ಲಾ
ಶುದ್ಧಾದ್ವೈತಿಗಳಾದ ಬ್ರಾಹ್ಮಣರನ್ನಾಗಿ ಮಾಡಿದರು.
ಅನಂತರ ಆಚಾರ್ಯರು, ಉದಯನಾದಿ ನ್ಯಾಯವಾದಿಗಳನ್ನೂ, ತಪ್ತ ಮುದ್ರಾ
ಧಾರಿಗಳಾದ ವೈಷ್ಣವರನ್ನೂ , ಲಂಗಧಾರಿಗಳಾದ ಶೈವರನ್ನೂ , ವಾಮಾಚಾರಪ್ರವಿಷ್ಟ
ರಾದ ಶಾಕ್ತರನ್ನೂ, ರಕ್ತಗಂಧಾರ್ಚನೆಯನ್ನು ಮಾಡುತ್ತಿದ್ದ ಸೌರರನ್ನೂ, ನರ
ಬಲಿಯಂ ಸಮರ್ಪಿಸುವ ಕಾಪಾಲಿಕರನ್ನೂ, ಉಚ್ಛಿಷ್ಟಭಕ್ಷಕರಾದ ಗಾಣಾಪತ್ಯರನ್ನೂ
ವಾದದಲ್ಲಿ ಸೋಲಿಸಿ, ಸಪ್ರಮಾಣವಾಗಿ ಅನುಭವಿಸಿದರ್ಶನವಂ ತೋರಿಸಿ ಎಲ್ಲರನ್ನೂ
ವಶಪಡಿಸಿಕೊಂಡರು.
ಇಲ್ಲಿಂದ ಆಚಾರ್ಯರು : ಯಮಂಹ ಯಜ್ಯೋಗಚ್ಚತಿ' ಎಂದು ಹೇಳಿ ವಾದ
ಕೈಬಂದ ಕಾಮಕರ್ಮನೇ ಮೊದಲಾದ ಯಮೋಪಾಸಕರನ್ನೂ, ಇಂದ್ರಾದ್ಯಷ್ಟದಿ
ಕ್ಪಾ ಲಕೋಪಾಸಕರನ್ನೂ, ಸಾಂಖ್ಯ ಮತೋದ್ಭವರಾದ ಪ್ರಧಾನವಾದಿಯೇ ಮೊದಲಾ
ದವರನ್ನೂ, ಪಿತೃದೇವತೋಪಾಸಕರಾದ ಶಂಖಪಾದನೇ ಮೊದಲಾದವರನ್ನೂ ಮತ್ತು
ಬೇತಾಳೋಪಾಸಕರನ್ನೂ ಸೋಲಿಸಿ ಪಶ್ಚಿಮದೇಶಕ್ಕೆ ಹೋದರು
ಆಚಾರ್ಯರು ಅಲ್ಲಿ ಶಿಷ್ಯರಿಗೆ ಭಾಷ್ಯಪ್ರವಚನ ಮಾಡಿಸುತ್ತಿದ್ದ ಸಮಯದಲ್ಲಿ
ಹರದತ್ತನೆಂಬುವನು ಬಂದು ಶೈವಸೂತ್ರಭಾಷ್ಯಕರ್ತನೂ, ಸ್ವಗುರುವೂ, ಆದ ನೀಲಕಂ
ಠನನ್ನು ಪ್ರಶಂಸಮಾಡಲು ಆಚಾರ್ಯರು ಆ ನೀಲಕಂಠನನ್ನು ವಾದದಲ್ಲಿ ಸೋಲಿಸಲು