ಪುಟ:ಶಕ್ತಿಮಾಯಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೧೭ ಯಾತ್ರಾರ್ಥಿನಿಯಾದ ವಿಧವೆಯೋ ಎಂಬದು ಕೂಡ ಅವನಿಗೆ ತಿಳಿಯ ದಾಯಿತು. ವಿಧವೆಯಾಗಿದ್ದರೆ ಆಕೆಯ ಕೈಯಲ್ಲಿ ಎರಡುಸುತ್ತಿನ ಬಂಗಾರದ ಬಳೆಗಳೇಕೆ? ಒಂದುವೇಳೆ ಬಾಲವಿಧವೆಯಾಗಿದ್ದರೆ ತಾಯಿ ತಂದೆಗಳು ಮೋಹದಿಂದ ಆಕೆಯನ್ನು ಅಲಂಕಾರಹೀನಳಾಗಮಾಡಿರ ಅಕ್ಕಿಲ್ಲವೆನ್ನಬಹುದು; ಅಥವಾ ಆಕೆಯು ಸಧವಾ-ಲಗ್ನವಾದ ಹೆಣ್ಣು ಮಗಳಾಗಿದ್ದರೆ, ಹೀಗೆ ದೀನವೇಷಧರಿಸಿ ಭಿಕ್ಷುಕರಂತೆ ಕಂಡ ಕಂಡಲ್ಲಿ ಅಲೆಯುತ್ತಿದ್ದಳೇಕೆ? ಆದ್ದರಿಂದ ಆ ರಮಣಿಯು ಕುಮಾರಿ ಯೇ ಇರಲಿಕ್ಕೆ ಬೇಕೆಂದು ಆ ರಾಜಪುತ್ರನು ಭಾವಿಸಿದನು. ಆದರೆ ಯೋವನಪ್ರಾಪ್ತಳಾದ ಹಿಂದೂ ಕನೈಯು ಅವಿವಾಹಿತಳಾಗಿರುವಳೆಂ ಬದು ಆ ಕಾಲದ ಅವನಿಗೆ ಹ್ಯಾಗೆ ಸಮ್ಮತವಾಗಬೇಕು? ಕಡೆಗೆ ಅವನು ಅನುಮಾನಿಸಿದ್ದೇನಂದರೆ-ಇವಳು ಯಾವಳೊಬ್ಬ ಉಚ್ಚ ಕುಲ ಪ್ರಸೂತಳಾದ ಪುರವಾಸಿನಿಯಾದ ವಿಧವೆಯೇ ಇರಲಿಕ್ಕೆ ಬೇಕು, ಇದ ದರಲ್ಲಿ ಸಂದೇಹವಿಲ್ಲ. ಉತ್ತರಕ್ಷಣದಲ್ಲಿ ಆಕೆಯ ಆತ್ಮ ಮರ್ಯಾ ದಾದ್ಯೋತಕ ದೃಢಪದತಾಡನವೂ ತೇಜಗರ್ವಗಳಿಂದ ಮಿಂಚುವ ಓರೆನೋಟವೂ ಅವನಕಣ್ಣಿಗೆ ಕಟ್ಟಲು, ಪ್ರೇಮಪೂರ್ವಕವಾಗಿ ತನ್ನ ನ್ನು ನೋಡಿದ ಅವಳು ನಿಶ್ಚಯವಾಗಿ ಎಧವೆಯಲ್ಲ; ಕುಮಾರಿಯೇ ಸರಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಸಾಗಿದನು. ಮರ್ಮೊ ದ್ವಾಟಿನಮಾಡುವ ಕಟಾಕ್ಷವುಳ್ಳ, ಸುಂದರಿಯರ ಜೀವಿತವೇ ಪರಮರಹಸ್ಯವು! ಆ ರಹಸ್ಯದ ಜ್ಞಾನವು ಯಾವವುರುಷನಿಗೂ ಆಗ ದೆಂದರೆ ಮಿಥ್ಯಾವಾದವಾಗಲಿಕ್ಕಿಲ್ಲ. ಇರಲಿ, ಈ ಪ್ರಕಾರ ಕುಮಾರಗಣೇಶದೇವನು ಮನದಲ್ಲಿ ಯೋಚಿಸು ತ್ರ, ನಡನಡುವೆ ಸಂಧ್ಯಾರಾಗದ ಸೊಬಗನ್ನು ಕಣ್ಣಿನಿಂದ ನೋಡು ನಡೆದಿರಲು, ಅವನ ಕುದುರೆಯು ಗಕ್ಕನೆ ನಿಂತಿತು. ಕಾರಣ ವೇನೆಂದು ನೋಡುವಷ್ಟರಲ್ಲಿ ಯಾವಯುವತಿಯನ್ನು ಇಂದುರ್ಮಾ