ಪುಟ:ಶತಕ ಸಂಪುಟ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೦

ಶತಕ ಸಂಪುಟ


ಸುಳಿದಾ ಹೊಮ್ಮಿಗವೈದೆ ಸೀತೆಯ ಖಳಂ ಕೊಂಡೋಡಿ ತಾನಾಳ್ದನೇ
ಇಳಿದಂಭೋಧಿಯ ಬಾಳ್ದನೇ ತಮಸನಂದಾಮ್ನಾಯಮಂ ಕದ್ದೊಡಂ
ತಲೆಯಂ ಕಟ್ಟರೆ ಕಂಚಿವಾಳದೊಳು ತಾಂ ಶೂದ್ರೀಕವೀರಾಖ್ಯನಂ
ಕಳವೇಂ ಕೊಲ್ಲದೆ ಕಾಯ್ವುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೪೭ ‖

ಪಿಡಿಯಲ್ ಹೊಮ್ಮಿಗವೆಂದು ಪೋದ ರಘುಜಂ ಭೂಪುತ್ರಿ ಸನ್ಯಾಸಿಯೆಂ-
ದಡಿಯಿಟ್ಟಳ್ ದಶಕಂಠನೊಯ್ದಿವಳನಂದಾಯುಷ್ಯಮಂ ನೀಗಿದಂ
ಕೊಡಬೇಡೆಂದೆನೆ ಶುಕ್ರ ರಾಜ್ಯವನಿತಂ ಪೋಗಾಡಿವಂ ರಾಕ್ಷಸಂ
ಕಡು ಮೋಹಂ ಕೆಡಿಕುಂ ದಲೈ ಹರಹರಾ ಶ್ರೀಚೆನ್ನಸೋಮೇಶ್ವರಾ ‖ ೪೮ ‖

ಖಳ ವೇದಂಗಳನೊಯ್ದನುರ್ವಿತಳಮಂ ತಾಂ ಚಾಪೆವೋಲ್ ಸುತ್ತಿದಂ
ಚಲದಿಂ ಪೋರಿದರೆಲ್ಲರಂ ಗೆಲಿದು ಬಂದಾ ಪೆಣ್ಣ ಕೊಂಡೋಡಿದಂ
ತಲೆಯೊಳ್ ಕಾದಿದರೂರ್ಗಳಂ ಪಡೆದರೆಲ್ಲಾ ಗೆಲ್ದು ತಾವಾಳ್ದರೇಂ
ಬಲುಗರ್ವಂ ಕೊಲದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೪೯ ‖

ಸುರೆಯಂ ಸೇವಿಸಿದಾತ ಬಲ್ಲನೆ ಮಹಾಯೋಗೀಂದ್ರರೆಂಬುದಂ
ದೊರೆಯೊಳ್ ತೇಜವನಾಂತವಂ ಬಡವರಂ ತಾಂ ನೋಳ್ಪನೇ ಕಂಗಳಿಂ
ಪಿರಿಯರ್‌ ಮಾನವರೆಂದು ಕಾಣ್ಬನೆ ಮಹಾದುರ್ಮಾರ್ಗಿಯೆಂತಾದೊಡಂ
ದುರುಳಂ ಬಲ್ಲನೆ ಬಾಳ್ವರಂ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೫೦ ‖

ಪಿಡಿಯಲ್ ಸಿಂಗವ ಮತ್ಸರ ಕವಿವುದಾ ದುರ್ಗಂಧಮೇ ಗಾಳಿಯೊಳ್
ತೊಡೆಯಲ್ ನಾರದೆ ನಾಯ ಬಾಲ ಸೆಡೆಯಂ ಕಟ್ಟಲ್ಕೆ ಚಂದಪ್ಪುದೇ
ಸುಡುಚೇಳಂ ತೆಗೆಯಲ್ಕೆ ಸುಮ್ಮನಿಹುದೇನೇನೆಂದೊಡೆಯೆಷ್ಟಾದೊಡಂ
ಬಿಡ ತನ್ನಂಗವ ನೀಚ ತಾಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೧ ‖

ಬಡಿಗೋಲಂ ಸಮಮಾಡಬಕ್ಕು ಧರೆಯೊಳ್ ಕೂಪಂಗಳಂ ತೋಡಬ
ಕ್ಕಿಡಿದುಕ್ಕಂ ಮೃದುಮಾಡಬಕ್ಕು ಮಳಲೊಳ್ ತೈಲಂಗಳಂ ತೋರಬ
ಕ್ಕಡವೀ ಸಿಂಗವ ತಿದ್ದಬಕ್ಕು ಕರೆಯಲ್ಬಕ್ಕುಗ್ರದ ವ್ಯಾಘ್ರಮಂ