ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ... ೧೪೭ ರಾಯನು ಅತ್ಯಂತ ಸಂತಾಪದಿಂ ಯುಕ್ತನಾಗಿ,-“ ಎಲೈ ಮಿತ್ರನಾದ ಮಾಂಡವ್ಯನೇ, ಶಕುಂತಲೆಯ ವಿಯೋಗದುಃಖವಂ ಹೇಗೆ ಸೈರಿಸಲಿ ! ಸ್ವಪ್ನದಲ್ಲಿ ಯಾದರೂ ಆ ಶಕುಂತಲೆಯ ಅಂಗಸಂಗವಾಗುವುದೋ ಎಂದರೆ ಸರ್ವಥಾ ನಿದ್ರೆಯು ಬಾರದೆ ಇರುವುದಿ೦ದ ಆ ಸುಖವನ್ನನುಭವಿಸುವುದಕ್ಕೆ ಇಲ್ಲವಾದುದು. ಚಿತ್ರ ದಲ್ಲಿ ಬರೆದಿರ.ವ ಭಾವನಂ ಚೆನ್ನಾಗಿ ನೋಡಿ ಈ ಸಂತಾಪವಂ ಸೈರಿಸಬಹುದೆಂದರೆ ಕಣ್ಣೀರುಗಳು ಸ್ಥಳವನ್ನೀಯವ ಎಂದು ನುಡಿಯುತ್ತಿರಲು ; ಸಾನುಮತಿಯು-- ಈ ರಾಯನು ಇಷ್ಟು ಅನುರಾಗಯುಕ್ತನಾಗಿ ದುಃಖಪಾತ್ರನಾಗಿರುವುದರಿಂದ ಈ ಶಕುಂತಲೆಗೆ ಇವನು ಮೊದಲು ತಿರಸ್ಕಾರ ಮಾಡಿದ ಸಂತಾಪವು ಪೋದುದು ಎಂದು ತನ್ನ ಮನದಲ್ಲಿ ಆಲೋಚಿಸುತ್ತಿರಲು; ಅಷ್ಟ ಅಲ್ಲೇ ಚಿತ್ರದ ಪೆಟ್ಟಿಗೆಯಂ ತರುವುದಕ್ಕೆ ಪೋಗಿರ್ದ ಚತುರಿಕೆ ಯೆಂಬ ಸಖಿಯು ಬಂದು ಆ ದುಷ್ಯಂತರಾಯಂಗೆ ನಮಸ್ಕಾರವಂ ಗೆಯ್ದು - ಎಲೈ ಸ್ವಾಮಿಯೇ, ನಾನು ಚಿತ್ರದ ಪೆಟ್ಟಿಗೆಯನ್ನು ತೆಗೆದುಕೊಂಡು ಇಲ್ಲಿಗೆ ಬರು ತಿರ್ದೆನು ಎಂದು ನುಡಿದು ಸುಮ್ಮನಾಗಲು; ರಾಯನು-- ಎಲೈ ಚತುರಿಕೆಯೇ, ಆಮೇಲೆ ಏನು ಕಾರ್ಯವು ನಡೆ ದುದು ಪೇಳು?” ಎನ್ನಲು; : ಸಖಿಯು ಭಯಯುಕ್ತಳಾಗಿ, ಎಲೈ ಸ್ವಾಮಿಯೇ, ನಿನ್ನ ಪಟ್ಟದ ಮಹಿಷಿ ಯಾದ ವಸುಮತೀದೇವಿಯು ತರಳಿಕೆ ಎಂಬ ಸಖಿಯಿಂದೊಡಗೂಡಿ ಬರುತ ನನ್ನನ್ನು ಕರೆದು ಈ ಚಿತ್ರದ ಪೆಟ್ಟಿಗೆಯಂ ನಾನೇ ತೆಗೆದುಕೊಂಡು ಪೋಗುವೆನೆಂದಾ ಪೆಟ್ಟಿಗೆಯನ್ನು ಎನ್ನ ಕೆಯ್ದಿಂದ ಬಲಾತ್ಕಾರವಾಗಿ ತೆಗೆದುಕೊಂಡಳು” ಎಂದು ನುಡಿಯಲು, ವಿದೂಷಕನು ಎಲೆ ಚತುರಿಕೆ, ನೀನು ಅದೃಷ್ಟದಿಂ ಬಿಡಿಸಿಕೊಂಡು ರಾಯನ ಸನ್ನಿಧಿಗೆ ಬಂದು ಸೇರಿದೆ. ಇಲ್ಲವಾದಲ್ಲಿ ನಿನಗೆ ತಕ್ಕ ಶಿಕ್ಷೆಯು ನಡೆಯು ತಿರ್ದುದು ” ಎನಲು ; ಚತುರಿಕೆಯು- ಅಯ್ಯೋ ಮಾಂಡವ್ಯನೇ, ಕೈಯಿಂದ ಚಿತ್ರದ ಪೆಟ್ಟಿಗೆಯಂ ತೆಗೆದುಕೊಂಡು ಎನ್ನ೦ ಸಿಡಿಯುವುದಕ್ಕೆ ಉತ್ಸವಂ ಮಾಡುವಷ್ಟಲ್ಲೇ, ನಾನು ಪಲಾಯನವಂ ಗೆಯ್ಯಲವರು ಎನ್ನ ನ್ನನುಸರಿಸಿ ಬರುವುದಲ್ಲೇ ವಸುಮತೀ ದೇವಿಯ ವರ ಸೀರೆಯ ಸೆಲಗು ಗಿಡದ ಕೊಂಬೆಗೆ ತಗಲಿಕೊಳ್ಳಲು, ಅದಂ ತರಳಿಕೆಯು ಬಿಡಿ ಸುವಷ್ಟಲ್ಲಿ ಇಲ್ಲಿಗೆ ಓಡಿ ಬಂದೆನು” ಎಂದು ನುಡಿಯಲು ;