ಪುಟ:ಶಾಸನ ಪದ್ಯಮ೦ಜರಿ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ 269 ವೀರ, ಮೇಳದಾಳ್ = ನರ್ಮ ಸಚಿವ, 87, ಬಲಿವ= ಔದ್ಧತ್ಯವನ್ನು ತೋರಿಸುವ ಮಲೆವ= ಪ್ರತಿಭಟಿಸುವ ಕೆಲೆವ=ಗರ್ಜಿಸುವ, ಅದಟಲೆವ = ಆಕ್ರಮಿಸುವ, ಪಳಂ ಸಲೆವ= ಹೊಡೆವ. ಎಲ್ವು = ಎಲುಬು, ಇಸುವೆಸ= ಸೇವಾವೃತ್ತಿ. ಬೆಸಸು= ಆಜ್ಞಾಪಿಸು. 88, ಏರ್ವಲ = ? ಆಯುಧಗಳ ಬಲ, ಬೇಳೊಲ = ಯಜ್ಞಭೂಮಿ. 9. ಕವಿ ಇತ್ಯಾದಿ, ಯುದ್ದ ಭೇದ, ಎನ್ನ೦ = ಎಂಥವನು ? ಇಂದ್ರಾರಿಯನ್ನ೦= ಇಂದ್ರಜಿತುವಿನಂಥವನು. 90. ತೀರಿಕೆ, ಬಿಂಡಿವಾಳ, ಕರ್ಕಡೆ; ಆಯುಧಗಳು. ಕರವಾಳ = ಕತ್ತಿ, ಆಟಿಡುವ? ಒದಳ = ಗರ್ಜಿಸು. ತುಂಬು = ತಡೆ, 91. ಸೋಯಲ್ = ಓಡಿಸಲು, ಮೌಲ್ಯಭಾವ = ಪ್ರೇಮ, 92. ಟೆಸ್ಸರ = ? ಮೋಸ, ಮರಳೊಡಂ= ಮೋಹಪಟ್ಟರೂ, ಮರಲ್ಗೊಡಂ=ಹಿಮ್ಮೆಟ್ಟಿದರೂ. 93. ಶ್ರೀಪಾ ಲಂಕಾರ, ಗಾತ್ರತ್ರ= ಕವಚ, 94. ವದಾನ್ಯತೆ = ಔದಾಯ್ಯ. _95. ಮಸಗಿ = ರೇಗಿ, ತುತ್ತು = ಕಬಳಿಸು. 96. ಎಲಿಲ್ವ = ಜೋಲುವ. ತವವ = ಕ್ಷೀಣವಾಗುವ, ಏ = ಗಾಯ, 97, ಅದ್ಯಯ = ಅಸಮಾನವಾದ ಅಕ್ಷರ = ವ್ಯತ್ಯಾಸವನ್ನು ಹೊಂದದವನು. 99. ಅಚಳ = ಈಶ್ವರ. 100-101. ತ್ರಿಪದಿಗಳು. 102. ಅಳಿಪಂ= ದುರಾಶೆಯನ್ನು. 103. ಅಣಾಡಿದರ=ವಿಶೇಷ ರಾದರು. 104. ಕಬಿತ್ತು = ಕೋಪಿಸಿ, ಆರ್ಪು – ಔದಾಯ್ಯ. 105. ಅಳುಕಿ, ಬಳುಕಿ, ಹೊಸಗನ್ನಡ, ಕಡಂಗಲ್ = ಉತ್ಸಾಹವನ್ನು ಹೊಂದಲು ಎಡವಿಲ್= ವಿರೋಧಿಸಲು. ಒಟ್ಟಯ್ಕಲ್ = ಜಯಿಸಲು. ಪಳಂಚಲ್ = ಹೊಡೆಯಲು. ಪೊಳೆ ಪು= ತೇಜಸ್ಸು, ಪ್ರತಾಪ. ನೆವರೆ = ಸಮರ್ಥರಾಗುವರೆ ? 306ಆಳು ಕಿಸಲ್, ಹೊಸಗನ್ನಡ, ಚಾಳಿಸು=ಅಲ್ಲಾಡಿಸು, ಅಡಗಿಸು, ಅಳಿಸು = ಹೆದ ರಿಸು. 107. ಕಡುಪು = ದರ್ಪ, ತಾತ್ಪರ-ನಿನ್ನನ್ನು ಇದಿರಿಸಲು ಶಿವನಿಗೊಬ್ಬನಿಗೇ ಸಾಧ್ಯ. 108, ಬಿದಿ = ಬ್ರಹ್ಮ, 109, ಪೋಲೈ=ಸಮನಾಗಲಿ. ಬೆಸೆಯದಿರ್= ಗರ್ವಿಸಬೇಡ. ಎಂಬ = ಎನ್ನುತ್ತೀಯೋ, ಸಿಂಧೂದ್ಭವಂ= ಭೀಷ್ಮ, ನಿಂದಾಸ್ತುತಿ. 112. ಉರ್ಚಿ ದೊಡೆ = ಎಳೆದರೆ, 115, ಅಲಗು = ಆಯುಧ, ಅಣಿಯರಂ= ಹೆಚ್ಚಾಗಿ, 116, ಆರ್ತು= ? ಸಂಪೂರ್ಣವಾಗಿ, ಅರ್ತಿ, ಅರ್ಥ, ಅ = ಆಶೆ. ನೆಟ್ಟೆರೆದ ? ನೆಟ್ಟನೆ ಯಾಚಿಸಿದ, 117. ಪುದು = ಭಾಗಿಯಾಗುವುದು. ಪದುಳಂ= ಸುರಕ್ಷಿತವಾಗಿ, 118. ನೆಹವು =ಪೂರ್ತಿ. 119. ಬೆಳವ = ಬೆಳಗುವ, 120. ಅಂಕದ = ಪ್ರಸಿದ್ಧವಾದ, ರಸಾ - ಭೂವಿ), ಎಲ್ಲಿತ್ತು = ಎಲ್ಲಿಯದು, 121. ಮಡಗು=ಬಚ್ಚಿಡು, ಪಡಲ್ವಡಿನ= ನಾಶಮಾಡುವ, ಕೆಯ್ದು =ಅಯುಧ, ದಾಂಗುಡಿ ವಿಡೆ = ಹಬ್ಬಲು, ಕ್ಷಣ = ಸಂತೋಷ. 123. ಉರ್ವರೆ = ಭೂಮಿ, ಪ್ರತಿಪನ್ನ ಮಂದರ=ಮಂದರಧೀರ, 125. ಒಡಿಲು = ಪ್ರೀತಿಸಿ, ಎಡರ್ = ಬಡತನ,