ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಸಿಸ :ಒಂದ”. - - - - - -- -- - - - - - - - - - ಮಾಡಿ, ಈ ಅನಂದಭವನದಲ್ಲಿ (ಮಹಾರಾಷ್ಟ್ರದಲ್ಲಿ ಅಲ್ಲಲ್ಲಿ ಹರಡಿರುವರು ಸಮರ್ಥತ ಈ ಸಚ್ಚಿಷ್ಯರು ಜನರಲ್ಲಿ ಭಗವಚ್ಛಕ್ತಿಯನ್ನು ಹೆಚ್ಚಿಸಿದರು. ಹರಿಕಥಾ ಶ್ರವಣದಲ್ಲಿ ಅವರಿಗೆ ಲೌಕಿಕ ಪರಿಸ್ಥಿತಿಯ 3 ಗೊತ್ತಾಗುವಂತೆ ಮಾಡಿದರು. ಅಲ್ಲಲ್ಲಿ ದೇವರ ಮ ಇರ್ತಿಗಳನ್ನು ಸ್ಥಾಪಿಸಿ, ಉತ್ಸವಗಳನ್ನು ಮಾಡಹತ್ತಿದರು - ಈ ಬಗೆಯಾಗಿ ಜನರ ಗುರುತು ಮಾಡಿಕೊಂಡು, ಜರ್ನಲ್ಲಿ ಜಾಗೃತಿಯನ್ನುಂಟು ಮಾಡಿ, ಅವರಿಗೆ ಸ್ವಹಿತದ ಜ್ಞಾನವನ್ನು ಮಾಡಿ ಕೊಟ್ಟರು. ಅಲ್ಲಲ್ಲಿ ಮಾರುತಿ ಯ ದೇವಾಲಯಗಳನ್ನು ಸ್ಥಾಪಿಸಿ, ಜನರ ಶಕ್ತಿಯನ್ನು ಬೆಳೆಸುವದಕ್ಕಾಗಿ ಅಲ್ಲಲ್ಲಿ *ಗರಡಿಯ ಮನೆಗಳನ್ನು ಮಾಡಿದರು. ಈ ಮೇರೆಗೆ ಸಮರ್ಥರು ಎಲ್ಲರ ಚಿಂತೆ -ಯನ್ನು ವಹಿಸಿ, ಎಲ್ಲರನ್ನು ಬುದ್ದಿವಂತರಾಗಮಾಡುವ ಅವಾಡವ್ಯ ಪ್ರಯತ್ನ ವನ್ನು ಮಾಡಿದರು. ರಾಜಾರಾಮಾ, ಸಮರ್ಥರು ಮಾಡಿರುವ ಈ ಘನತರವಾದ ಈ ದ್ಯೋಗದ ಫಲವು ನಿನಗೆ ಸಿಗಲಿಕ್ಕಿಲ್ಲೆಂದು ತಿಳಿಯಬೇಡ, ನೀನು ಮುಂದಕ್ಕೆ ಸಾಗಿ ವಿಜಾಪುರ, ನಾಸಿಕ, ಕೊಲ್ಲಾಪುರ, ಸೊಲ್ಲಾಪೂರ, ಖಾನವೇಶ, ತಂಜಾವರ ಮೊದಲಾದ ಬೇಕಾದ ಸ್ಥಳಗಳಿಗೆ ಹೋಗು, ಅಲ್ಲಿ ರಾಮದಾಸರ ಮಹಾಂತರು ನಿನ್ನನ್ನು ಕಾಣಬಹುದು, ನಿನ್ನ ಸಲುವಾಗಿ ಅವರು ಭೂಮಿಯನ್ನು ಗೇದು ಹದ ಮಾಡಿಇಟ್ಟಿರುವರು, ಉತ್ತರದಲ್ಲಿ ಬ ದ ರೀ ಕೇ ದಾರ-ಬ ದ ರೀ ನಾರಾ ಯಣ, ದಕ್ಷಿಣದಲ್ಲಿ ರಾಮೇಶ್ವರ, ಪೂರ್ವದಲ್ಲಿ ಜಗನ್ನಾಥ, ಪಶ್ಚಿಮದಲ್ಲಿ ದ್ವಾರಕಾ ಹೀಗೆ ವಿಸ್ತಾರವಾದ ಚತುಮಿಯಲ್ಲಿ ಸಮರ್ಥರು ತಮ್ಮ ಕಾರ್ಯಕಾರಿಮಂಡಲಿಯ ನ್ನು ವಿಸ್ಮರಿಸುವರು. ಬಹಳಹೇಳುವದೇನು ? ನಿನ್ನ ಶತ್ರುವಾದ ಔರಂಗಜೇ ಬನ ನರ್ವಸ್ಥಾನಕ್ಕೂ ಮಹಾಂತರು ಕೈ ಹಾಕಿರುವರು. ಔರಂಗಾಬಾದ, ವರ ಹಾಡ, ಬೇದರ, ವಿಜಾಪುರ, ಹೈದರಾಬಾದ, ಅಹಮ್ಮದನಗರ ಮೊದಲಾದ ಮು ಸಲ್ಮಾನರ ಸೈಮವೂ ಹೆಚ್ಚಾಗಿರುವಲ್ಲಿ ಸಹ ಮಹಾಂತರು ನಿಮ್ಮ ಸಲುವಾಗಿ ಭೂಮಿಯನ್ನು ಸ್ಥಿರವಾಗಿ ಇಟ್ಟಿರುವರು. ಒಟ್ಟಿಗೆ, ಕ್ಷತ್ರಿಯರಾದ ನೀವು ಅಟಕ ದಿಂದ ರಾಮೇಶ್ವ ರದ ವರೆಗೆ ಬೇಕಾದಲ್ಲಿ ಹೋದರೂ ನಾವು ನಿಮ್ಮ ಕಾರ್ಯಕ್ಕೆ ಅನುಕೂಲಮಾಡಿ ಇಟ್ಟಿರುವೆವು! | ರಾಜಾರಾವಾ, ಇಂಥ ಮಹಾತ್ಮರಾದ ಮಹಾಂತರ ಗುರುತು ನನಗೆ ಹಾಗೆ ಆಗಬೇಕೆಂದು ನೀನು ಕೇಳುವಿಯೇನು? ಅವರೇನು ಮಹೇಂದ್ರನ ಐರಾವತನೇ ' ಮರೆಯತಕ್ಕವರಲ್ಲ. ಸಾಮರ್ಥ್ಯವಂತರೂ, ಬುದ್ಧಿವಂತರೂ, ದಯ.೦ ತರೂ ಆದ ಈ ಮಹಾಂತರು ಸ್ವಾರ್ಥರಹಿತರೂ, ವಿತರಾಗಿಗಳೂ, ನಿಸ್ಪೃಹರೂ