ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶಿವಪ್ರಭುವಿನ ಪುಣ್ಯ. ೯೬ ಬಿಳಿಯ ಪಲವನ್ನುಟ್ಟುಕೊಂಡು ಜಿರಿಟೋಪಿನಮೇಲೆ ತಲೆಗೊಂದು ಶಲ್ಲೆಯನ್ನು ಸುತ್ತಿದ್ದಳು. ಆಕೆಯ ಟೊಂಕಕ್ಕೆ ಸುತ್ತಿದ್ದ ಸೆಲ್ಲೆಯ ಕೆಳಮಗ್ಗಲಿಗೆ ಒಂದು ಮಗ್ಗಲು ಪಿಸ್ತೂಲವೂ, ಮತ್ತೊಂದು ಮಗ್ಗಲು ಬಿಚ್ಚುಗತ್ತಿಯ, ಒಪ್ಪುತ್ತಿದ್ದವು. ಆಕೆಯು ರಾಯಗಡದ ಶ್ರೀ ಗೋದಾಶಿಖರದಿಂದ ಭವಾನೀಶಿಖರದಕಡೆಗೆ, ಭವಾನೀಶಿಖರ ದಿಂದ ಟಕಮಕಶಿಖರದಕಡೆಗೆ, ಅದರಂತೆ ಟಕಮಕಶಿಖರದಿಂದ ಹಿ ರ ಕ ಣಿ ಶಿಖರದ ಕಡೆಗೆ ವೇಗದಿಂದ ಸಾಗಿಹೋಗಿ, ಗಡದ ಸುತ್ತುಮುತ್ತು ಬಹು ದೂರದ ವರೆಗೆ ನೋಡಹತ್ತಿದಳು. ಹೀಗೆ ನೋಡುತ್ತ ನೋಡುತ್ತ ಆ ದುರ್ಗದ ಸ್ವಾಮಿನಿಯು ನಗಾರಖಾನೆಯನ್ನು ಹತ್ತಿದಳು. ಅಲ್ಲಿಂದ ಆಕೆಯ ಸುತ್ತಲಿನ ೧೦-೧೨ ಮೈಲಿನೊಳಗಿನ ಪ್ರದೇ ಶವನ್ನು ಮೊದಲು ನೋ (ಡಿದಳು. ಕೋಟೆಯ ಎದುರಿನಿಂದ ಹಾಗು ಸುತ್ತು ಮುತ್ತಲಿಂದ ಅನೇಕ ಹಾದಿಗಳು ಗುಡ್ಡದೊಳಗಿನಿಂದ ಕೊಟೆಯವರೆಗೆ ಬಂದಿರು ಇವೆ. ಆ ಹಾದಿಗಳಿಗೆ ಸಂಬಂಧಿಸಿ ಆ ಪರ್ವತದ ಮೇಲೆ ರಾತ್ರಿ ಗುರುತಿನ ಹಲವು ದೀಪಗಳನ್ನು ಹಚ್ಚುವ ಪದ್ದತಿಯಿ.ತ, ' ಆ ರಣದೇವತೆಯು ಅಲ್ಲಿಯದೊಂದು ದೀಪವನ್ನು ಎತ್ತಿ ಕೈಯಲ್ಲಿ ಹಿಡಕೊಂಡು, ಅದನ್ನು ಕೆಲವೊಂದು ಸಂಜ್ಞೆಯಿಂದ ಅಲ್ಲಾಡಿಸಿದಳು. ಕೂಡಲೆ ಎದುರಿನ ತಿಖರದ ಮೇಲೆ ಒಂದು ದೀಪವು ಹತ್ತಿತು. ಆ ಮೇಲೆ 'ಎರಡನೆಯ ದೀಪವು ಹತ್ತಿತು ತರುವಾಯ ಮೂರನೆಯ ದೀಪವು ಹತ್ತಿ ತು, ಅಷ್ಟರಲ್ಲಿ ಮಗ್ಗಲಿನ ಶಿಖರಗಳಲ್ಲಿ ಒಂದರಹಿಂದೊಂದು ದಿನಗಳು ಹತ್ತಿದವು. ಬರಬರುತ್ತ ನಾಲ್ಲೂಕಡೆಗೆ ದೀಪಗಳು ಹತ್ತಿದವು. ಹೀಗೆ ಸುತ್ತು ಮುತ್ತು ಸಹ ಸಾವಧಿ ದೀಪಗಳಿಂದ ಆ ಪರ್ವತಶಿಖರಗಳು ಪ್ರಕಾಶಿಸತೊಡಗಿದವ. ಈ ಮೋ ಜನ್ನು ನೋಡುವಾಗ ಆ ರಣದೇವತೆಯು ಗಂಭೀರವಾದ ಮುಖಿಯಲ್ಲಿ ಮುಗು ಳುನಗೆಯ ತಳುಕು ತೋರಿತು ! ಅಷ್ಟರಲ್ಲಿ ಆಕೆಯು ಪಿಸ್ತೂಲಿನ ಒಂದು ಬಾರು ಮಾಡಿದಳು. ಕೂಡಲೆ ಧಡಲ್ ಧಡಲ್ ಎಂದು ಪ್ರತಿಯೊಂದು ಸಂದಿಗೊಂದಿಯೊ ಳಗಿಂದಸಪ್ಪಳಗಳು ಆಗಹತ್ತಿ, ಅವುಗಳಿಂದ ಪರ್ವತವು ಗದಗದಿಸಿಹೋಯಿತು, ಇದ ನೆಲ್ಲ ನೋಡಿ ಏಸೂಬಾಯಿಯು “ ಈ ಕಡೆಯ ವ್ಯವಸ್ಥೆಯು ನೆಟ್ಟಗಿರುತ್ತದೆ, ” ಎಂದು ತನ್ನೊಳಗೆ ನುಡಿಯುತ್ತ, ಎರಡನೆಯ ಮಗ್ಗಲಿಗೆ ಹೊರಟಳು. ಆಕೆಯು ಕುಶಾವರ್ತದ ಕೆರೆಯ ಕಡೆಗೆ ಹೋಗಿ, ಆ ಕೆರೆಯಲ್ಲಿ ಕೈ-ಕಾಲ-ಮೋರೆಗಳನ್ನು ತೊಳೆದುಕೊಂಡು, ಆ ಮೇಲೆ ಗೋದಾಶಿಖರದ ಮೇಲಿರುವ ಮಹಾದೇವನ ದರ್ಶ ನ ಮಾಡಿಕೊಂಡಳು. ಆಗ ಆಕೆಯು ಕೈ ಜೋಡಿಸಿ ಶಂಕರನನ್ನು ಕುರಿತು