ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xp೬ 'ಸುರಸಗ್ರಂಥಮಾಲಾ ಗುಡ್ಡದ ಕಡೆಗೆ ಹೋಗುವದಕ್ಕಾಗಿ ತನ್ನ ಸೈನ್ಯಕ ಅಪ್ಪಣೆ ಮಾಡಿದನು. ಆತನು ಆ ಗುಡ್ಡದ ದರಿಕಂದರಗಳಲ್ಲಿಯ, ಕಟ್ಟಡವಿಯಲ್ಲಿಯೂ ತನ್ನ ಜನರ ಗು೦ಪು ಗಳ ನ್ನು ಅಲ್ಲಲ್ಲಿ ಅಡಗಿಸಿ ಇಟ್ಟು , ಯಾವದಾದರೂ ಊರ ಮುಸ 'ಶಾನ ಗೌಡನು, ಅಥವಾ ಯಾವನೊಬ್ಬ ಅಧಿಕಾರಿಯು ಸಿಕ್ಕರೆ ತೀರಿತು, ಹದ್ದಿನ ಹಾಗೆ ಅವರ ಮೇಲೆ ಎರಗಿ ಅವರನ್ನು ಸುಲಿದು, ಮುಖ್ಯನನ್ನು ಮತ್ತೊಂದು ಊರ ಸಂತೆಯಲ್ಲಿ ಲಿಲಾವಿಗೆ ಹಚ್ಚುತ್ತಿದ್ದನು ! ಆಗ ಆ ಮುಖ್ಯಸ್ಥನ ಅಷ್ಮರಾಗಲಿ ಅಭಿಮಾನಿಗಳಾಗಲಿ ಸಂತಾಜಿಯು ಹೇಳಿದಷ್ಟು ದುಡ್ಡು ಕೊಟ್ಟು ಆತನ ಸೆರೆಬಿಡಿಸಿ `ಕೊಂಡು ಹೋ ಗು ತ್ತಿ ದ್ದ ರು ! ಔರಂಗಜೇಬನ ಸೈನ್ಯವು ಅಮರ್ಯಾದಿತ ವಿದ್ದದ್ದೇನೋ ನಿಜ; ಆದರೆ ಮರಾಟವೆಂಬ ಹಸಿದ ತೋಳಗಳು ಮುಸಲ್ಮಾನರೆಂಬ ಕುರಿಗಳು ದಡ್ಡಿ ಬಿಟ್ಟು ತಪ್ಪಿಸಿಕೊಂಡು ಬಂದಕೂಡಲೆ, ಅವನ್ನು ಹರಿದು ತಿನ್ನದೆ “ಬಿಡುತ್ತಿದ್ದಿಲ್ಲ ! ಹೀಗೆ ಸಂತಾಜೆಯು ತನ್ನ ಕಾರ್ಯವನ್ನು ಎಡೆಬಿಡದೆ ನಡಿಸುತ್ತಿರಲು, ಬಾದ ಶಹನ ಕಿವಿಗೆ-“ಇಂದು ಇಂಥ ಸರದಾರರನು, ಮರಾಟರು ಸುಲಿದರು, ಇಂದು 'ಇಂಥ ಸರದಾರನ ಗೊತ್ತು ಹತ್ತಲೊಲ್ಲದು, ಇಂದು ಇಂಥ ಮನಸಬದಾರನನ್ನು 'ಕತ್ತೆಯ ಮೇಲೆ ಮೆರಿಸಿದನು ” ಎಂಬಿವೇ ಮೊದಲಾದ ಸಣಪಟ್ಟ ಸುದ್ದಿಗಳು ಮುಟ್ಟಲು ಆತನು ಸಂತಪ್ಪನಾಗುತ್ತಿದ್ದನು. ಅಷ್ಟರಲ್ಲಿ ಸಂತಾಜಿಯ ದೂತರು “ಬಂದು ತನ್ನ ಒಡೆಯನ ಮುಂದೆ_“ಸರದಾರ, ಮೊಗಲರು ನಮ್ಮ ಮೇಲೆ ಸಾಗಿ ಬರಹತ್ತಿದ್ದಾರೆ. ಚಿವುಟಿದಂತೆ ಮಾಡಿ ತಾಸ ಕೊಡುವ ನಮ್ಮ ಶಾಸನ ಮಾಡುವ ದಕ್ಕಾಗಿ ಬಾದಶಹನು ಇ ಸಾಯಿ ಲ ಖಾ ನ ನೆ೦ ಬ ಒಬ್ಬ ಶೂರ ಸರದಾರನನ್ನು ದೊಡ್ಡ ಸೈನ್ಯದೊಡನೆ ಕಳಿಸಿರುವನು - ಸೆನವು ಬೈಲು ಸೀಮೆಯಲ್ಲಿ ಬರ ಹತ್ತಿದೆ ಎಂಬ ಸುದ್ದಿ ಯನ್ನು ಹೇಳಿದನು. ಅದನ್ನು ಕೇಳಿ ಸಂತಾಜಿಗೆ ಬಹಳ ಸಂತೋಷವಾಯಿತು. ಆತನು ತನಗೆ ಸುದ್ದಿಯನ್ನು ಹೇಳಿದವನ ಹಾದಿಯನ್ನು ಸಹ ನೋಡದೆ, ತಟ್ಟನೆ ತನ್ನ ಕುದುರೆಯನ್ನು ಹತ್ತಿಕೊಂಡವನು ಸಹ್ಯಾದ್ರಿಯ ಅದೊಂದು ಭಯಂಕರವಾದ ಪ್ರದೇಶದಲ್ಲಿ ಬಂದು ಇಳಿದನು, ಅದರ ಸುತ್ತುಮುತ್ತು, ಉನ್ನತ ಪರ್ವತಗಳಿದ್ದವು. ಎಡಬಲದಲ್ಲಿ ಭ ಯು ೦ ಕ ರ ಅರಣ್ಯ ಗಳಿ ದ್ದ ವು. ಅಲ್ಲಿ ಮನುಷ್ಯರ ಸುಳುವಿನ ಸುದ್ದಿ ಯಿದ್ದಿಲ್ಲ , ನಡನಡುವೆ ಯಾವನಾದರೊಬ್ಬ ಚಪಲ ಮರಾಟನು ತನ್ನ ಕುದುರೆಯನ್ನು ಹತ್ತಿಕೊಂಡು ಮೇಲಕ್ಕೆ ಹತ್ತಿ ಹೋಗು -ರುವದು ಕಣ್ಣಿಗೆ ಬೀಳುತ್ತಿತ್ತು ,; ಆದರೆ ಅಷ್ಟರಲ್ಲಿ ನಡುವೇ ಆತನು ಕಣ್ಣಿಗೆ