ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭ-ವಿನ ಪ್ರಣ್ಯ ೧೪. ದುಶ್ಯಾಸನನು ಆಕೆಯ ಹೆರಳನ್ನು ಬಿಚ್ಚಿ ಅವಮಾನಗೊಳಿಸಲು, ಆ ತಮ್ಮ ತೆ: ಜಸ್ವಿನಿಯಾದ ಹೆಂಡತಿಯು ಕೌರವ ಕುಲಕ್ಷಯದ ಬಗ್ಗೆ ಮಾಡಿದ ಪ್ರತಿಜ್ಞೆಯನ್ನು ಅಜಾತಶತ್ರುವೆನಿಸುವ ಧರ್ಮರಾಜನೇ ಮಾದಲಾದ ಆಕೆಯ ಪತಿಗಳು ಪೂರ್ಣವ ಡಿದರು. ಆದರೆ ಈಗ ಅಂಥ ಪ್ರಸಂಗವೆಲ್ಲಿದೆ? ತಿರುಗಿ ಕೇಳಿದರೆ, ನನ್ನ ಮೇಲೆ ಅನುಗ್ರಹವಿಟ್ಟು, ತಾವು ಭೋಸಲೆ ಕುಲವನ್ನು ಉಳಿಸಿ, ಮಹಾರಾಷ್ಟ್ರ ರಾಜ್ಯವ ನ್ನು ರಕ್ಷಿಸಿದರೆ ಮಾತ್ರ ಪಾಂಡವ ಪತ್ನಿಯಾದ ಬ್ರೌಪತಿಯ ಸಾಮ್ಯವನ್ನು ಈ ಪ್ರ ಸಂಗದಲ್ಲಿ ತಾವು ಕೊಟ್ಟದ್ದು ಯೋಗ್ಯವಾಗುವದು! ಹೆಂಡತಿಯ ಈ ಮಾತುಗಳನ್ನು ಕೇಳಿ ಗಜಿರಾಯನ ಸಂತಾಪವು ಹೆಚ್ಚಿ ತು, ಆತನು ಕೊಧಾಂಧನಾಗಿ ಹೆಂಡತಿಯನ್ನು ಕುರಿತು ದುಷ್ಟೆ, ಜಾರಿಣಿ, ನೀಚ ಖಂಡ್ಯಾನನ್ನು ಪ್ರೀತಿಸುವ ಅಧಮಾಧವಳೇ, ನಿನಗೆ ಪತಿಯ ಸಾದ್ಯ ಶ್ಯವೇಕೆ? ನನ್ನ ಈ ಕೈ ಖಡ್ಗದಿಂದ ನಿನ್ನನ್ನು ನುಚ್ಚು ನುಚ್ಚಾಗಿ ಕಡಿದು ಹಾಕು ವದು ಯೋಗ್ಯವು. ” ಎಂದು ನುಡಿದು ಖಡ್ಡವೆ ರಾಜಕುವರಳ ಮೇಲೆ ದುಮುಕಿ ದನು. ಆದರೆ ಧೀರಳಾದ ರಾಜಕುವರಳು ನಿಂತಲ್ಲಿಂದ ಅತ್ತಿ, ಉಲುಕದೆ, ಆ ವಮಾನದ ಸಂತಾಪದಿಂದ ತನ್ನ ಅಂತಃಕರಣವು ದಗ್ಧವಾಗುತ್ತಿದ್ದರೂ , ಶಾಂತ ಯ ಗಾಂಭೀರ್ಯದಿಂದ ಮುಗುಳ ನಗೆ ನಗುತ್ತ-ಪ್ರಾಣಪ್ರಿಯಾ, ಪತಿದೇವಾ, ಆ ಷ್ಟು ಕೋಪವೇಕೆ? ಶಿವರಾಯನ ಮಗಳಿಗೆ, ಗಣೋಜಿರಾವ ಶಿರ್ಕೆಯ ಹೆಂಡತಿಗೆ, ಸ್ವತಃ ರಾಜಕುವರಳಿಗೆ ಈ ಆರೋಪವು ಒಪ್ಪುವದೇ? ಹಾಜರ್ ! ಹಾಯ? ನನ್ನ ಪ್ರಿಯಬಂಧುವಾದ, ಹಾಗು ಆಬಾಸಾಹೇಬರ ಏಕನಿಷ್ಠ ಸೇವಕನಾದ, ಸ್ವಾಮಿ ಭಕ್ತಖಂಡೋಜಿಯ ಮೇಲೆ ಇಂಥ ಆರೋಪವೆ! ಏನೂ ಚಿಂತೆಯಿಲ್ಲ; ಶಿರ್ಕೆ ಕುಲಭೂಷಣಾ, ಹ್ಯಾಗಿದ್ದರೂ ಪತಿದೇವನು ನನಗೆ ಪೂಜ್ಯನೇ ಸರಿ; ಆದರೆ ಆತನು ಈ ರಾಜಕುವರಳ ಮೇಲೆ ಮಾಡಿದ ಆರೋಪದಿಂದ ಆಕೆಯು ಗಣೋಜಿರಾಯರ ನ್ನು ಮುಟ್ಟಲಿಕ್ಕೆ ಅನಧಿಕಾರಿಯಾದಳು! ಸೀತಾಮಾತೆಯು ಆಗ್ನಿ ಮುಖದಿಂದ. ತನ್ನ ಪರಿಶುದ್ದ ಪಾತಿವ್ರತ್ಯವನ್ನು ಶ್ರೀ ರಾಮ ನಿಗೆ ತೋರಿಸಿ ಪತಿ ಯ ಪರಿಗ್ರಹ ಕೈ ಯೋಗ್ಯಳಾದಂತೆ, ಈಗ ನಾನು ತಮ್ಮ ಪರಿಗ್ರಹಕ್ಕೆ ಯೋಗ್ಯಳಾಗಬೇಕು, ಇಲ್ಲ ದಿದ್ದರೆ ನನ್ನ ಪರಿಶುದ್ಧಾಚರಣೆಯನ್ನು ನಂಬಿ ದೇಶದ್ರೋಹಿಗಳ ಸಹವಾಸಕ್ಕೆ ಹೇಸಿ ನಿಮ್ಮ ದೃಷ್ಟಿ ಯಿಂದ ಮಲಿನವಾಗಿರುವ ಈ ದೇಹವನ್ನು ನಿಮ್ಮೊಡನೆ ಯುದ್ಧ ಮಾಡಿ ರಣಭೂಮಿಯಲ್ಲಿ ಕೆಡವಬೇಕು . ಇವುಗಳಲ್ಲಿ ಸದ್ಯಕ್ಕೆ ಮಹಾರಾಷ್ಟ್ರದ ಮೇಲೆ ಬಂದಿರುವ ವಿಪತ್ತನ್ನು ಮನಸ್ಸಿನಲ್ಲಿ ತಂದರೆ, ರಣಾಂಗಣದಲ್ಲಿ ದೇಹವಿಡುವದೇ