ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*Fo ಸದ್ಯಾಧಚಂದ್ರಿಕೆ ಸೂರ್ಯೋಜಿಯನೂತಿಗೆ ಒಪ್ಪಿಕೊಂದು, ಆತನನ್ನು ಸವಿನೂತುಗಳಿಂದಪ್ರೋತ್ಸಾಹಿಸಿ, ತನ್ನ ಬಿಡಾರಕ್ಕೆ ತೆರಳಿದನು. ಇತ್ತ ಸೂರ್ಯೋಜಿಯು ಗಡವನ್ನು ಹತ್ತಿದನು.' ದುರ್ಗದೊಳಗಿನ ತನ್ನ ಸೈನ್ಯವನ್ನು ಕಡಿಮೆ ಮೂಡಿ, ತನ್ನ ಕಾರ್ಯವು ಸುಲಭವಾಗುವಂ ತ ಮಾಡುವದು ಆ ಸ್ವಾಮಿದ್ರೋಹಿಯ ಉದ್ದೇಶವಾಗಿತ್ತು, ಆತನು ದುರ್ಗರಕ್ಷಕನಾ ದ್ದರಿಂದ ಸೈನಿಕರು ಆತನ ಅಪ್ಪಣೆಯನ್ನು ಪಾಲಿಸಲೇ ಬೇಕಾಗಿತ್ತು. ಆತನು ಮದ್ರ ಟರ ಸೈನ್ಯದ ದೊಡ್ಡ ಭಾಗವನ್ನು ಒಂದು ನೆನಹೇಳಿ ಕೋಟೆಯ ಕೆಳಗೆ ಕಳಿಸಿದನು, ತನಗೆ ಅನುಕೂಲವಾದ ಜನರನ್ನು ಕಾವಲಿನಲ್ಲಿಡುವ ಉದ್ದೇಶದಿಂದ ಆತನು ದುರ್ಗ ದ ಆಯಾ ನಿಟ್ಟಿನ ಕಾವಲಿನ ಜನರ ಅದಲು ಬದಲು ಮಡಿದನು. ಇಷ್ಟೆಲ್ಲ ಕೆಲಸ ಮೂಡುವಾಗ ಅವನ ಮೋರೆಯ ಕಪ್ಪಿಟ್ಟತ, ಆತನ ಮನಸ್ಸಿನಲ್ಲಿ ಉತ್ಸಾಹವಿ ದಿಲ್ಲ. ಅಂದಿನರಾತ್ರಿಯೆಲ್ಲ ದುರ್ಗದ ವ್ಯವಸ್ಥೆಯನ್ನು ತನಗೆ ಅನುಕೂಲವಾಗು ನಂತ ಮಾಡಿಕೊಳ್ಳುವದರಲ್ಲಿಯೇ ಸಾರ್ಯ ಜೆಯು ಕಳೆದನು, ಏಸೂಬಾಯಿಯ ವರ, ಹಾಗು ಬಾಲಶಿವರಾಯನ ಅಂಗರಕ್ಷನಾದ 'ಜೋತಾಜಿಗೆ ಸೂರ್ಯಾಜಿಯ ಈ ಕೃತಿಯ ಸಂಶಯವು ಬಂದಿತು; ಆದರೆ ಆ ಸ್ವಾಮಿನಿಷ್ಠನು ತನ್ನ ಒಡೆಯರ ಅಂಗರಕ್ಷ ಣದ ಕಾರ್ಯದಲ್ಲಿ ಆಸಕ್ತನಾಗಿರಬೇಕದ್ದರಿಂದ, ಸೂರ್ಯಜಿಯ ಕೃಷ್ಣ ಕಾರಸ್ಥಾ ನವನ್ನು ಸಂಪೂರ್ಣವಾಗಿ ಕಂಡುಹಿಡಿಯಲಿಕ್ಕೆ ಆತನಿಗೆ ಆಸ್ಪದವು ದೊರೆಯಲಿಲ್ಲ. ಕಾಲಕ್ಕನುಸರಿಸಿ ಯೂರಿಗಾದರೂ ಬುದಿಯು ಉತ್ಪನ್ನವಾಗುವದಷ್ಟೆ? ಇತ್ಯ ಸೂರ್ಯೋಜಿಯು ಬೆಳತನ ಈ ಕಣ್ಣಿಗೆ ಕಣ್ಣು ಹಳ್ಳದೆ ಎಲ್ಲ ಸಿದ್ಧತೆಯನ್ನು ಮಾಡಿಕೊ ತಿರಲು, ಅತ್ತ ಮೊಗಲರು ಅಂದಿನರಾತ್ರಿ ಕಣ್ಣಿಗೆ ಕಣ್ಣು ಹಚ್ಚದೆ, ತಮ್ಮ ಎಲ್ಲ ಸಿದ್ಧತೆಯನ್ನು ಕೂಡಿಕೊಂಡರು. ಈ ಯೂನಿವಸುದ್ದಿಯನ್ನೂ ಏನೂಬಾಯಿಯವರು ಅರಿಯರು. ಅವರು ನಿತ್ಯಕ್ರಮದಂತೆ ಆ ದಿನರಾತ್ರಿ ಕೃಷ್ಣಾಜಿಪ್ರಭುವಿನ ಕೈಯಿಂದ ಮುದ್ಗಲ ಪುರಾಣದೊಳಗಿನ ಯುದ್ಧ ಕಾಂಡವನ್ನು ತಮ್ಮ ಪರಿವಾರಕ್ಕೊಸ್ಕರಹೇಳಿ ಸಿ, ದುರ್ಗದ ನಾಲಕಡೆಯ ಭದ್ರತೆಯನ್ನು ವಿಚಾರಿಸಿ, ತಾವು ನೋಡುವದನ್ನು ಕಣ್ಣು ಮುಟ್ಟಿ ನೋಡಿ, ಪ್ರತಾಪರಾವ ಗುಜರನ ಹೆಂಡತಿಯ ಸಂಗಡ ಸ್ವಲ್ಪ ವಿಶ್ರಾಂ ತಿಯನ್ನು ಹೊಂದುವದಕ್ಕಾಗಿ ಪವಡಿಸಿದರು. ಕಾಲಚಕ್ರವನ್ನು ತಡೆಯುವವರು ಯೂರು? ಅಂದಿನ ದುಷ್ಟ ರಾತ್ರಿಯು ಕ್ರಮಿ ಸಿಗಿ ಬೆಳ್ಳಗೆ ಬೆಳಗಾಯಿತು. ಏಸೂಬಾಯಿಯವರು ಬಾಲಶಿವರಾಯನೊಡನೆ ಉಷಃಕಾಲದಲ್ಲಿಯೇ ಎದ್ದು, ನಿತ್ಯಕಮದಂತ ಶಿವಪ್ರಭುವಿನ ಸಮಧಿಯದರ್ಶನ ಕ್ಕಾಗಿ ಹೊರಟು ಹೋಗಿದ್ದರು. ಇತ್ತ ಗುಹೆಯ ಬಾಗಿಲಲ್ಲಿ ಸೂರ್ಯಾಜಿಯು