ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ - M www wwwwww ಸ್ವಾರ್ಥಕ್ಕಿಂತ ಮುಂದಕ್ಕೆ ಹೋಗುವದಿಲ್ಲವೋ, ಯೂರಿಗೆ ನ್ಯಾಯಾನ್ಯಾಯ, ಪಾಪ-ಪುಣ್ಯಗಳ ವಿಚಾರವಿರುವದಿಲ್ಲವೋ, ಆ ರಾಜ್ಯಕ್ಕೂ ಆ ರಾಜ್ಯದೊಳಗಿನ ಈ ಪ್ರಕಾರದವ್ಯವಹಾರದ ಜನರಿಗೂ ನನ್ನ ನಮಸ್ಕಾರವು! ಈವರೆಗೆ ನಾವು ನೋಡಿದ ಯತ್ನವು ಅಧರ್ಮದ್ದಾಯಿತು! ಈ ಮೇರೆಗೆ ಏನೂಬಾಯಿಯು ಪಶತಸಪಡುತ್ತ ಮುಂದಿನ ವರ್ಗ ವನ್ನು ಕೃಷ್ಣಾಜಪ್ರಭುವಿಗೆ ತಿಳಿಸುತ್ತಿರಲು, ಪ್ರತಾಪರಾವಗುಜರಸ ಹೆಂಡತಿಗೆ ತನ್ನ ಸಂಗಡ ಬರಬೇಡೆಂದು ಪರಿಪರಿಯಗಿ ಹೇಳುತ್ತಿರಲು, ಬಾಲಶಿವರಾಯನನ್ನು ಬಾರಿ ಬಾರಿಗೆ ತಬ್ಬಿಕೊಂಡು ಮುದ್ದಿಸುತ್ತಿರಲು, ಚಿತ್ತವೃತ್ತಿಯು ಅತ್ಯಂತ ಮೃದು ವಾಗಿದ್ದರೂ ಗಾಂಭೀರ್ಯದಿಂದ ಅದನ್ನು ಹೊರಗೆ ತೋರಗೊಡದೆ ದುರ್ಗದ ನಾ ಕಡೆಗೆ ನೋಡುತ್ತಿರಲು, ಕಾಸಮಖಾನನು ತನಗೊಪ್ಪಿಸಿದ ಕೆಲಸವನ್ನು ಪೂರ್ಣಚೂಡಿಕಾಂಡು ಯತಿಕದಖಾನನ ಬಳಿಗೆ ಬಂದು ಆತನನ್ನು ಕುರಿತು-ಬಾಣ ಸಾಹೇಬ, ಯವತ್ತು, ದುರ್ಗವನ್ನು ಸ್ವಾಧೀನಪಡಿಸಿಕೊಂಡನು. ಆನೆ, ಕುದುರೆ ವಸ್ತ್ರ-ಒಡಿವೆಗಳು, ಭಾಂಡಾರ ಮೊದಲಾದ ಅಶರಾ ಕಾರಖಾನೆಗಳನ್ನು, ಸುಲಿದನು. ಆ ಸಂತ್ಯಾರು ನಮ್ಮನ್ನು ಸುಲಿಯುವನಲ್ಲವೆ? ಖಾನ, ಶಿವಾಜಿಯ ಸಿಂಹಾಸನವನ್ನು ಕೂಡ ನಾವು ಒಡೆದುಬಿಟ್ಟೆವು. ಮರಾಟರು ಸಿಂಹಾಸನದ ಬುಡದಲ್ಲಿ ಎಷ್ಟು ದುಡ್ಡು ಕೊಡಿಸಿಟ್ಟಿರದು! ವಿಜಾಪುರದ ಬಾದಶಾಹಿಯನ್ನೂ, ಅಪಝಲಖಾನ ನಂಥ ಸರದಾರನನ್ನೂ, ಇನ್ನು ಎಷ್ಕಾ ಮುಸಲ್ಮಾನರನ್ನೂ ಸುಲಿದು ಶಿವಾಜಿಯು ಕೂಡಿಸಿಟ್ಟಿದ್ದ ದುಡ್ಡನ್ನು ನಾವು ಇಂದು ತಿರುಗಿ ತಕೊಂಡೆವು, ಎಂದು ಹೇಳಿ ದನು. ಇದನ್ನು ಕೇಳಿ ಏಸೂಬಾಯಿಯು ಮೂರ್ಛಿತಳಾದಳು. ಎಚ್ಮೇಲೆ ಆಕೆಯು ಅತ್ಯಂತ ದುಃಖದಿಂದ ಅಂಬಾಭವಾನೀ, ಕಡೆಗೆ ಮರಾಟರ ಸಿಂಹಾಸನ ವನು, ಒಡೆಯರಲ್ಲವೆ? ಭರತಖಂಡದ ಕೀರ್ತಿಧ್ವಜವನ್ನು ಮುರಿದು ಚಲಿದರಲ್ಲವೆ? ಎಲಎಲಾ! ಮಂಟರ ಮೊರೆಗೆ ಕಪ್ಪಹತ್ತಿತು. ಈ ಕಪ್ಪ ಸಿರವಾಗಿ ಉಳಿ ಯುವದೋ ಏನು? ಮರಾಟರು, ಬ್ರಾಹ್ಮಣರು, ಪ್ರಭುಗಳು, ಹೊಲಿಯರು ಮುಂ ತಾದವರಲ್ಲಿಯೂ ಯಾರಾದರೂ ಈ ಕಪ್ಪನ್ನು ಅಳಿಸಬಹುದೋ? ಇವರಲ್ಲಿ ಯಲ್ಲಾ ದರೂ ದಿಲ್ಲಿಯ ಸಿಂಹಾಸನವನ್ನು ಒಡೆದ ದಿವಸ ಈ ಕಪ್ಪ ಅಳಿಸುವದು? ಛೇ! ಛೇ! ಛೇ!!! ಈ ಕಪ್ಪ ಅಳಿಸುವ ಬಗೆಯೇನು? ನಮ್ಮ ಶಿವಪ್ರಭುವಿನ ಸಮಿತ, ಸಿಂಹಾಸನವು ಒಡೆಯಿತೇ? ಇನ್ನು ಇದಕ್ಕೂ ಹೆಚ್ಚಿನ ಅನರ್ಥವೇನಾಗಬೇಕು?