ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ, ೨೮ ವಿಶಾಲಗಡವೆಂಬಲ್ಲಿ ಮಹಾರಾಜರ ಕುಟುಂಬದವರನ್ನು ಇಟ್ಟನ್ನು, ತಾರಾಬಾಯಿಯವರು ಪೂರ್ಣಗರ್ಭವತಿಯರಾಗಿರುವದರಿಂದ, ಅವರನ್ನು ಸ್ಥಳಬಿಟ್ಟು ಕದಲಿಸುವ ಹಾಗಿದ್ದಿಲ್ಲ. ಮಹಾರಾಜರನ್ನೂ, ಅವರ ಖಾಸಪರಿವಾರವನ್ನೂ ಮಾತ್ರ ಆತನು ಮೆಲ್ಲನೆ ದಕ್ಷಿ ಣದಿಂದ ಹೊರಡಿಸಿ, ಕರ್ನಾಟಕದ ಕಡೆಗೆ ಸಾಗಿಸಿಕೊಂಡು ನಡೆದನು, ಶೂರ ಸರದಾರರಾದ ಶಂಕರಾಜಿ ಮಲ್ಲಾರ, ಖಂಡೇರಾವ ದಾಬಡೆ, ಧನಾಜಿ ಜಾಧವ, ಸುತಾಜಿ ಘೋರಪಡೆಯವರೂ, ಶ್ರೇಷ್ಠ ಮುತ್ಸದ್ಧಿಗಳಾದ ಆಬಾಜಿ ಸೋನ ದೇವ ಪ್ರಹ್ಲಾದರಾವ ನಿರಾಜಿ, ಖಂಡೋ ಬಲ್ಲಾಳರವರೂ ಜ೦ಗಮರ, ಹಾಗು ಅರಿವೆ ಮಾರುವವರ ಸೋಗುಹಾಕಿಕೊಂಡು ವಿಶಾಲಗಡದಿಂದ ಗುಪ್ತವಾಗಿ ಹೊರಟರು. ರಾಜ ಪತ್ನಿಯರು ಕೊತ್ತಳಗಳ ಮೇಲೆ ನಿಂತು ಕಣ್ಣೀರು ಸುರಿಸುತ್ತ ಮಹಾರಾಜರ ಪ್ರವಾಸವು ಯಶಸ್ಸು ಕೊಡುವದಾಗಲೆಂದು ಅಂಬಾಭವಾನಿಯನ್ನು ಪ್ರಾರ್ಥಿಸುತ್ತಲಿದ್ದರು. ಈಮೇರೆಗೆ ರಾಜಪರಿವಾರವು ಒಂದರಹಿಂದೊಂದು ಘಟ್ಟಗಳನ್ನು ಇಳಿದು ರತ್ನಾಗಿರಿ ಜಿಲ್ಲೆ ಹೊಳಗಿನ ಅಂಗ್ರೆಯ ವಿಜಯದುರ್ಗವೆಂಬ ಹಡಗುಪಡೆಯ ರಾಜಧಾನಿಯ ಮಾರ್ಗವಾಗಿ ದೇವ ಗಡಕ್ಕೆ ಬಂದಿತು. ಅಲ್ಲಿಂದ ಜಲಮಾರ್ಗವಾಗಿ ಸಪ್ಪಳಿಲ್ಲದೆ ಪ್ರವಾಸಮಾಡುತ್ತ ಅವರೆ ಲ್ಲರು ಗೋಕರ್ಣ ಕ್ಷೇತ್ರಕ್ಕೆ ಬಂದರು. ಅವರು ಚಂಡಿಕೆಗಳನ್ನು ಬೋಳಿಸಿ, ಕೊರಳಲ್ಲಿ ಲಿಂಗಗಳನ್ನು ಕಟ್ಟಿಕೊಂಡಿದ್ದರು. ಕೇವಿಯ ಉಡಿಗೆ ತೊಡಿಗೆಗಳಿಂದ ಅವರು ನೋಡ ವವರಿಗೆ ಅಯ್ಯನವರ ಹಿಂಡಿನಂತೆ ಕಾಣುತ್ತಿದ್ದರು; ಆದರೆ ಅಯ್ಯನವರ ವ್ಯವಹಾರ ಗಳನ್ನು ಮಾತ್ರ ಅವರು ಅರಿಯದವರಾದ್ದರಿಂದ ಜನರು ತಮ್ಮ ಗುರುತು ಎಲ್ಲಿ ಹಿಡಿಯು ವರೋ ಎಂದು ಯಾವಾಗಲೂ ಅವರು ಭಯಗ್ರಸ್ತರಾಗಿರುತ್ತಿದ್ದರು. ಈ ರಾಜಪರಿವಾರವು ವಿಶಾಲಗಡದಿಂದ ಹೊರಬಿದ್ದು ಹೋದದ್ದನ್ನು ಭೋಲಾ ನಾಥನು ಔರಂಗಜೇಬನಿಗೆ ತಿಳಿಸಿದ್ದನ್ನು, ಆಗ ಬಾದಶಹನು ಪಲ್ಲಾಳಗಡವನ್ನು ಬಿಗಿಯಾಗಿ ಮುತ್ತಿ, ಪಲ್ಲಾಳಪ್ರಾಂತವನ್ನು ಗೆದ್ದಿದ್ದಾಗ್ಯೂ ರಾಜಪರಿವಾರವು ಅಲ್ಲಿ ಇಲ್ಲದ್ದರಿಂದ ಆ ದುರ್ಗವನ್ನು ವಶಮಾಡಿಕೊಳ್ಳಲಿಕ್ಕೆ ಆತನಿಗೆ ಅಷ್ಟು ಉತ್ಸಾಹವಿದ್ದಿಲ್ಲ; ಆದರೆ ದುರ್ಗ ದೊಳಗಿನ ಮರಾಟರು ಬಹಳ ಶೌರ್ಯದಿಂದ ಕಾದಿ ಸರ್ಜಿಖಾನನ ಆಟವನ್ನು ನಡೆಯ ಗೊಡದ್ದರಿಂದ, ಆ ಅಭಿಮಾನಿಯಾದ ಬಾದಶಹನು ಹಟಕ್ಕೆ ಬಿದ್ದಿದ್ದನು; ಆದರೆ ಆತನ ಲಕ್ಷವೆಲ್ಲ ರಾಜಪರಿವಾರದ ಕಡೆಗೆ ಇತ್ತು. ಅದನ್ನು ಹಿಡತರುವದಕ್ಕಾಗಿ ಆತನು ಅಸದ ಖಾನನನ್ನು ಕಳುಹಿದ್ದನು, ಮತ್ತು ಊರೂರ ಚಾವಡಿಗಳಲ್ಲಿ ನೋಟೀಸುಗಳನ್ನು ಹಚ್ಚಿಸಿ ಜನರಿಗೆ ದೊಡ್ಡ ದೊಡ್ಡ ಉಚಿತಗಳ ಆಶೆಯನ್ನು ತೋರಿಸಿದ್ದು, ಇದರಿಂದ ವೇಷಾಂ ತರಿಸಿಕೊಂಡಿದ್ದ ರಾಜಪರಿವಾರವ್ರ ಗೋಕರ್ಣದಿಂದ ಮುಂದಕ್ಕೆ ಸಾಗಲಿಕ್ಕೆ ಆತಂಕಪಡ ಹತ್ತಿತು. ಅಂದು ಅವರು ಶಿವಾಲಯದ ಚಂದ್ರಶಾಲೆಯಲ್ಲಿ ಇಳಿದುಕೊಂಡು, ಕೆಲಹೊತ್ತು ವಿಶ್ರಾಂತಿಯನ್ನು ಹೊಂದಿದರು. ಬಳಿಕ ಪ್ರಹ್ಲಾದನಂತರು ಸ್ನಾನಕ್ಕೆ ಹೋಗಲು