ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ಶಿವಪ್ರಭುವಿನಪುಣ್ಯ, ಅdf ಸುತಾಜಿ ಘೋರಪಡೆ ಮೊದಲಾದವರು ಒಲೆಹೂಡಿ ಪಾತ್ರಗಳನ್ನೂ, ಅಡಿಗೆಯ ಸಾಹಿತ್ಯ ಗಳನ್ನೂ ಸಿದ್ಧ ಮಾಡಿ ಇಟ್ಟರು. ಪ್ರಹ್ಲಾದನಂತರು ಎಲ್ಲರ ಸಲುವಾಗಿ ಅಡಿಗೆಯನ್ನು ಸಿದ್ಧ ಮಾಡಿ, 'ಮಹಾರಾಜರೊಡನೆ ಮಹಾಬಲೇಶ್ವರನ ದರ್ಶನಕ್ಕೆ ಹೊರಟರು. ಉಳಿದ ಪರಿವಾರವೂ ಅವರನ್ನು ಹಿಂಬಾಲಿಸಿತು, ಪ್ರಹ್ಲಾದಪಂತರು ರುದ್ರಾಭಿಷೇಕದಿಂದ ಮಹಾಬಲೇಶ್ವರನನ್ನು ಪೂಜಿಸಿ, ಉಳಿದ ವರ ಕೈಯಿಂದಲೂ ಆ ಕೈಲಾಸನಾಥನ ಪೂಜೆಯನ್ನು ಮಾಡಿಸಿದರು. ಗೋಕರ್ಣವು ಮಹಾಕ್ಷೇತ್ರವ. ಅದು ಗಯಾ, ಪುಷ್ಕರ, ಕಾಶೀ, ತ್ರಂಬಕ ಕ್ಷೇತ್ರಗಳಿಗಿಂತ ಪವಿತ್ರ ತರವಾದದ್ದು. ಈ ಕ್ಷೇತ್ರದಲ್ಲಿ ಮಹಾಬಲೇಶ್ವರನ ದರ್ಶನಕ್ಕಾಗಿ ಬ್ರಹ್ಮ, ವಿಷ್ಣು, ರಾಮಚಂದ್ರ, ರಾವಣ, ಆಗಸ್ಟ್, ಬೇರೆ ಋಷಿಗಳು, ಮುನಿಗಳು, ಯಾವತ್ತೂ ದೇವತೆ ಗಳು ನಿತ್ಯ ಬರುತ್ತಿರುವರು, ಕೈಲಾಸನಾಥನ ಆ ಆತ್ಮಲಿಂಗದ ಪೂಜೆಯಿಂದ ರಾವಣನ ತಾಯಿಗೆ ಕೋಟಿಲಿಂಗಾರ್ಚನದ ಫಲವು ಪ್ರಾಪ್ತವಾಗತಕ್ಕದ್ದಿತ್ತು. ಇಂಥ ಆ ಭೂಕೈಲಾ ಸವನ್ನು ಪ್ರವೇಶಿಸಿದ ಕೂಡಲೆ ಪ್ರಹ್ಲಾದನಂತನೇ ಮೊದಲಾದವರ ಮನೋವೃತ್ತಿಗಳು ತಲ್ಲೀನವಾದದ್ದರಲ್ಲಿ ಆಶ್ಚರ್ಯವಿಲ್ಲ. ಅವರೆಲ್ಲರು “ ಓಂ ನಮಃ ಶಿವಾಯ ” ಎಂಬ ಪಂಚಾಕ್ಷರೀ ಮಂತ್ರಜಪಪೂರ್ವಕವಾಗಿ ಮಹಾಬಲೇಶ್ವರನನ್ನು ಪ್ರಾರ್ಥಿಸಿದರು. ಬಳಿಕ ಅವರು ತಾವು ಇಳಿದುಕೊಂಡಲ್ಲಿಗೆ ಬಂದು ಊಟಡಿಗೆಗಳನ್ನು ತೀರಿಸಿಕೊಂಡು ಸ್ವಲ ವಿಶ್ರಮಿಸಿ ಈ ವೆಂಕಟರಮಣರಾಮಯ್ಯ” ಎಂದು ನಾಮಘೋಷ ಮಾಡುತ್ತ ಸೊಂಡೂರ ಹಾದಿಯನ್ನು ಹಿಡಿದರು, ಅವರು ಪುರಾಣಪ್ರಸಿದ್ದವಾದ ಹಲವು ನದಿಗಳನ್ನೂ, ಕ್ಷೇತ್ರ ಗಳನ್ನೂ ದಾಟುತ ಶಿವಪರಿಯೆಂಬ ಹೆಸರು ಪಡೆದಿದ್ದ ಆ ಸೊಂಡೂರಿಗೆ ಹೋದರು. ಸೊಂಡೂರ ಸಂಸ್ಥಾನದ ಒಡೆಯನು ಸಂತಾಜಿ ಘೋರಪಡೆಯು ತನ್ನ ಸಂಸ್ಥಾನಕ್ಕೆ ತನ್ನ ಸ್ವಾಮಿಯಾದ ರಾಜಾರಾಮಮಹಾರಾಜರು ಪರಿವಾರಸಹಿತವಾಗಿ, ಬಂದದ್ದೊಂದು ಅಪೂರ್ವಯೋಗವೆಂದು ಆ ಸ್ವಾಮಿನಿಷ್ಠ ಸಂತಾಜಿಯು ಭಾವಿಸಿದನು, ತನ್ನ ಸಂಸ್ಥಾನ ದಲ್ಲಿ ಬಂದಕೂಡಲೆ ಆತನು ತನ್ನ ಜಂಗಮವೇಷವನ್ನು ಬಿಸುಟ, ಎಲ್ಲ ರಾಜಪರಿವಾರ ವನ್ನು ವೈಭವದಿಂದ ಕರಕೊಂಡು ಹೋಗಲು ನಿಶ್ಚಯಿಸಿದನು. ಹೀಗೆ ಮಾಡುವದು ಹಿತವಲ್ಲ, ಬಾದಶಹನ ಗೂಢಚಾರರು ನಮ್ಮ ಬೆನ್ನ ಮೇಲೆ ಇರಬಹುದು, ಎಂದು ಪ್ರಹ್ಲಾದಪಂತನು ಹೇಳಲು, ಸಂತಾಜಿಯು ನನ್ನ ಮನೆಗೆ ದೇವರು ನಡೆದು ಬಂದಿ ರುವಾಗ ನಾನು ದೈವೀವೈಭವದಿಂದ ಅದನ್ನು ಪೂಜಿಸದೆ ಹ್ಯಾಗಿರಲಿ?” ಎಂದು ಸ್ಪಷ್ಟ ವಾಗಿ ಉತ್ತರವನ್ನು ಹೇಳಿದ್ದರಿಂದ, ಪ್ರಹ್ಲಾದಪಂತನು ಸರದಾರರಿಗೆ ಒಪ್ಪಬಹುದಾದ ಸಾಧಾರಣ ತರದ ಉಡಿಗೆ ತೊಡಿಗೆಗಳನ್ನು ಎಲ್ಲರಿಗೂ ಕೊಟ್ಟನು. ಸಂತಾಜಿಯು ರಾಜವೈಭವದಿಂದ ತನ್ನ ಸ್ವಾಮಿಯನ್ನು ರಾಜಧಾನಿಯಲ್ಲಿ ಕರೆದು ಕೊಂಡು ಹೋದನು. ಆಗ ಅನಾಯಾಸವಾಗಿ ಕೃತ್ತಿಕಾಯೋಗವೂ ಒದಗಿತ್ತು. ಎಲ್ಲ ರಾಜಪರಿವಾರವು ಶ್ರೀಕುಮಾರಸ್ವಾಮಿಯ ದರ್ಶನಕ್ಕಾಗಿ ಪರ್ವತವನ್ನು ಏರಿಹೋಯಿತು