ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨9L ಸುರಸಗ್ರಂಥಮಾಲಾ, ಸಂತಾಜಿಯು ದೇಹವ್ಯಾಪಾರದಲ್ಲಿ ಚಪಲನಾಗಿದ್ದಂತೆ, ಮನೋವ್ಯಾಪಾರದಲ್ಲಿಯೂ ಚ ಪಲನಾಗಿದ್ದನು, ಅಪಮಾನವು ಆತನಿಗೆ ಎಷ್ಟು ಮಾತ್ರವೂ ಸಹನವಾಗುತ್ತಿದ್ದಿಲ್ಲ. ಆತನ ಹೃ ದಯವು ಬಹುಸರಳ; ಅದರಲ್ಲಿ ಕೊಂಕುಕೊರತೆಗಳಿದ್ದಿಲ್ಲ. ತನ್ನ ಜನರು ಧನಾಜಿಯ ಪಕ್ಷವ ಹಿಸಿದ್ದನ್ನು ನೋಡಿ ಆತನು ತಟ್ಟನೆ ಅಲ್ಲಿಂದ ಹೊರಟನು. ಕಮಲೆಯೂ, ಕೆಲವು ಜನ ನಂ ಬಗೆಯ ದಂಡಾಳುಗಳೂಆತನನ್ನು ಹಿಂಬಾಲಿಸಿದರು. ಧನಾಜಿಯು ಸಂತಾಜಿಯನ್ನು ಸೆರೆಹಿ ಡಿಯಲು ಯತ್ನಿಸಿದನು; ಆದರೆ ಬದುಕಿರುವವರೆಗೆ ಸಂತಾಜಿಯು ಎರಡನೆಯವರ ಕೈಯಲ್ಲಿ ಸಿಗುವದು ಅಶಕ್ಯವೆಂಬ ಮಾತು ಎಲ್ಲರಂತೆ ಧನಾಜಿಗೂ ಗೊತ್ತಿತ್ತು; ಅದ್ದರಿಂದ ಆತನು ದೀರ್ಘ ಪ್ರಯತ್ನ ಮಾಡಿ ನಿರಾಶೆ ಪಡುವ ಉಸಾಬರಿಗೆ ಹೋಗದೆ, ಆತನು ಯಾವತ್ತು ಸೈನ್ಯವನ್ನು ಕಟ್ಟಿಕೊಂಡು ಮಹಾರಾಜರ ಬಳಿಗೆ ಬಂದನು. ಸಂತಾಜಿಯ ಸ್ವಾಮಿನಿಷ್ಠೆ ಯನ್ನು ಮಹಾರಾಜರು ಪೂರಾಬಲ್ಲವರಾಗಿದ್ದರು. ಹೇಳಿಕೆಯ ಹೇಳಿಕೆಯ ಮಾತು ಗಳಿಂದ ಸಂತಾಜಿಯ ವಿಷಯವಾಗಿ ಅಂಥ ದುರ್ಭಾವನೆಯು ಅವರಲ್ಲಿ ಉಂಟಾಗಿದ್ದಿಲ್ಲ. ಹೀಗಿರುವಾಗ ಸಂತಾಜಿಯು ಅವಮಾನಿತನಾಗಿ ಸಂತಾಪದಿಂದ ಕೈಮೀರಿ ಹೋದದ್ದನ್ನು ಕೇಳಿ ಅವರಿಗೆ ಬಹಳ ವ್ಯಸನವಾಯಿತು; ಆದರೂ ಹೊರಗೆ ಆಡಿತೋರಿಸಿ ಅವರು ಧನಾ ಜೆಯ ಮನಸ್ಸನ್ನು ನೋಯಿಸಲಿಲ್ಲ. ಇತ್ತ ಸಂತಾಜಿಯು ಅಡ್ಡ ದಾರಿಯಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಿರಲು, ಅಪಶಕುನರೂಪವಾಗಿ ಬಕುಲಾಬಾಯಿಯು ಆತನಿಗೆ ವಿದು ರಾದಳು. ಬಕುಳೆಯ ಮುಖದಲ್ಲಿ ಮುಗುಳು ನಗೆಯು ಒಪ್ಪುತ್ತಿತ್ತು. ಆಕೆಯು ಮಂಜುಲಸ್ವರದಿಂದ ಸಂತಾಜಿಯನ್ನು ಕುರಿತು ಸಂತಾಜೀರಾವ, ನಿಮ್ಮ ಎಲ್ಲ ಪರಿವಾರವನ್ನು ಸ್ವಲ್ಪ ಹೊತ್ತು ಒತ್ತಟ್ಟಿಗೆ ಕಳಿಸಿರಿ. ನಿಮ್ಮ ಸ್ವಾಮಿಯ ಮಹತ್ವದ ಕಾರ್ಯವನ್ನು ನಾನು ಸಾಧಿಸಿದ್ದೇನೆ; ಆದರೆ ಅದನ್ನು ಏಕಾಂತದಲ್ಲಿ ಹೇಳಬೇಕಾಗಿದೆ, ಎಂದು ನುಡಿಯಲು, ಅಂಥ ವಿಪನ್ನ ಸ್ಥಿತಿಯಲ್ಲಿಯೂ ಸ್ವಾಮಿಭಕ್ತನಾದ ಸಂತಾಜಿಯು ತನ್ನ ಪರಿವಾರವನ್ನೆಲ್ಲ ಒತ್ತಟ್ಟಿಗೆ ಕಳಿಸಿದನು. ಆಗ ಬಕುಲೆಯು ಬಕುಲೆ-ಕೂಾಕೆ ಸುತಾಜಿರಾವ, ಎತ್ತ ಹೊರಟರಿ? ನಾನು ನಿಮ್ಮನ್ನು ಕಾಣ ಬೇಕೆಂದು ಬಹು ದಿವಸಗಳಿಂದ ಹೊಂಚುಹಾಕಿದ್ದನು; ಇಂದು ಅನಾಯಾಸವಾಗಿ ನಿಮ್ಮ ದರ್ಶನವಾಯಿತು. ನನ್ನ ಪತಿಯನ್ನು ನಿಮ್ಮ ಪಕ್ಷಕ್ಕೆ ಒಲಿಸಿದ್ದೇನೆ. ನೀವು ನನ್ನನ್ನು ನಿರಾಕರಿಸಬಾರದು. ಸಂತಾಜಿ-- ಬಕುಲಾಬಾಯಿ, ನೀನು ಬಹಳ ಒಳ್ಳೆಯ ಕೆಲಸಮಾಡಿದೆಯೆಂದು ಹಿಂದಕ್ಕೆ ನಾನು ನಿನಗೆ ಹೇಳಿರುವೆನಲ್ಲವೆ? ಈಗ ಮತ್ತೆ ಯಾಕೆ ನನ್ನ ಮುಂದೆ 'ಆ ಮ ತನ್ನು ಹೇಳಬಂದೆ? ಹೋಗು, ಇನ್ನು ಯಾವರಾಜಕಾರ್ಯದಲ್ಲಿಯೂ ನಾನು ಮನಸ್ಸು ಹಾಕುವ ಹಾಗಿಲ್ಲ. ಸಂತಾಜಿಯು ಈಗ ಬಡವನಾಗಿರುವನು; ಸಹಾಯಹೀನನಾಗಿರು ವನು; ಇಷ್ಟೇ ಅಲ್ಲ, ಆತನು ಪರಾಕ್ರಮಹೀನನೂ, ತೇಜೋಹೀನನೂ ಆಗಿರುವನು