ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಹಣ್ಯ ತಿದ್ದಳು. ಆಕೆಯ ಕಣ್ಣುಗಳೊಳಗಿಂದ ನೀರುಗಳು ಒಂದೇಸಮನೆ ಸುರಿಯಹತ್ತಿದ್ದವು. ಆಗ ಸಂತಾಜಿಯು ನರಳುತ್ತ ಕ್ಷೀಣ ಸ್ವರದಿಂದ ಕಲೆಯನ್ನು ಕುರಿತು-ಯಾರು? ಕಮ ಲೆಯೇನು? ಪ್ರಾಣಪ್ರಿಯೇ ಕಮಲೇ, ಇನ್ನು ನಮ್ಮಿಬ್ಬರ ಭೆಟ್ಟಯು ಸ್ವಸ್ಟಚಿತ್ತದಿಂದ ಸ್ವರ್ಗದಲ್ಲಾಗುವದೇ ಸರಿ, ನಿಲ್ಲು ಹುಚ್ಚಿ ಅಳಬೇಡ ನಿಲ್ಲು! ನೀನು ವೀರಪತ್ನಿಯಲ್ಲವೆ? ಅಂದಬಳಿಕ ಪತಿಯ ಮರಣಕ್ಕಾಗಿ ಅಳುವದೇಕೆ? ಮರಣವು ಯಾರಿಗೆ ಬಿಟ್ಟಿದೆ? ನನ್ನ ದೈವದಲ್ಲಿದ್ದಂತೆ ಈಗ ನನಗೆ ಮರಣವು ಪ್ರಾಪ್ತವಾಗಿದೆ. ಇದಕ್ಕಾಗಿ ನೀನು ಸರ್ವಥಾ ದುಃಖಿಸಬೇಡ, ನಾನಾದರೂ ಈಗ ಮರಣಕ್ಕೆ ಹೆದರಿ ಶೋಕಿಸುವದಿಲ್ಲ. ನಾನು ಇಲ್ಲಿ ಯವರೆಗೆ ಸ್ವಾಮಿಕಾರ್ಯವನ್ನು ಏಕನಿಷ್ಠೆಯಿಂದಲೂ, ಶುದ್ಧಾಂತಃಕರಣದಿಂದಲೂ ಮಾಡಿದ್ದಕ್ಕೆ ಪರಮೇಶ್ವರನು ಸಾಕ್ಷಿಯಾಗಿದ್ದಾನೆ ಶಿವಪ್ರಭುವಿನ ಪುಣ್ಯವು ಬಲವತ್ತ ರವಾಗಿರುವದರಿಂದ ಆತನ ಕಾರ್ಯವು ಯಾವಮುಖದಿಂದಾದರೂ ಆಗೇಆಗುವದೆಂಬ ನಂಬಿಗೆಯು ನನಗಿರುವದರಿಂದ, ಆ ವಿಷಯದಲ್ಲಿಯೂ ನಾನು ನಿಶ್ಚಿಂತನಾಗಿರುವೆನು ನೀನು ವೀರಪತ್ನಿಯಿರುವೆಯೆಂದು ನಾನು ಆಗಲೆ ಹೇಳಿರುವೆನಲ್ಲವೆ? ಅಂದಬಳಿಕ ನಿನ್ನ ಚಿಂತೆಯೂ ನನಗಿಲ್ಲ; ಆದರೆ ನೀನು ರಾಜಾರಾಮ ಮಹಾರಾಜರ ಬಳಿಗೆ ಹೋಗಿ ಅವರಿಗೆ ಹೇಳಬೇಕೇನಂದರೆ - ಸಂತಾಜಿಯು ನಿರಪರಾಧಿಯು, ದುಷ್ಟರತಂತ್ರದಿಂದ ಮರಣಹೊಂದಿದನು. ಆತನ ಸಂಗಡ ಮರಾಟರೊಳಗಿನ ಒಡಕಿನ ನಾಶವಾಗಿ ಹೋದರೆ, ಆತನಿಗೆ ಬಹಳಸಂತೋಷವಾಗುವದು, ಹೋಗು, ನೀನು ಮಹಾರಾಜರಿಗೆ ಇದರಂತೆ ಹೇಳು, ವೀರಕನೋ, ನಿನಗೆ ಪತಿಯ ಆಜ್ಞೆಯು ಪವಿತ್ರವಾಗಿರುವದಲ್ಲವೆ? ಅದನ್ನು ನೀನು ಮನ್ನಿಸುವೆಯಲ್ಲವೆ? ಹೋಗು ಹಾಗಾದರೆ ಮಹಾರಾಜರು ನನ್ನ ಸಲು ವಾಗಿ ದುಃಖಪಟ್ಟಾರು, ಅವರ ದುಃಖವನ್ನು ನೀನು ದೂರಮಾಡು ಹೋಗು ಕಮಲೆ ನಿಲ್ಲು! ಪ್ರಾಣಸಖಾ ಸ್ವಲ್ಪ ನಿಲ್ಲ! ಕಡೆಯ ಸಾರೆ ನಿನ್ನ ಮುಖವನ್ನು ಚುಂಬಿಸುವೆನು! ನನ್ನ ಈ ತೋಡೆಗಳಮೇಲೆ ಕ್ಷಣಹೊತ್ತು ತಲೆಯನ್ನಿಟ್ಟು ನೀವು ಸ್ವಲ್ಪ ನಗಬಾರದಿರ! ಇಲ್ಲಿ ನೋಡಲಿಕ್ಕೆ ಹೊರಗಿನವರು ಯಾರಿರುವರು? ಎಲೈ ಅಣ್ಣಗಳಿರಾ, ನನ್ನ ಸಲುವಾಗಿ ಚಿತೆಯನ್ನು ನಿರ್ಮಾಣಮಾಡಿರಿ, ಚಂದನ-ತುಲಸೀ-ಬಿಲ್ವ ಕಾಷ್ಟಗ ಳನ್ನು ಸಂಪಾದಿಸಿರಿ. ಪತಿಯ ಸಮ್ಮುಖದಲ್ಲಿ ಆ ಶಯ್ಕೆಯಮೇಲೆ ನಾನು ಸುಖದಿಂದ ಶಯನಮಾಡುವೆನು, ಸಂತಾಜಿ-ಕಮಲೇ, ಇದು ನಿನಗೆ ಸರ್ವಥಾ ಉಚಿತವಾದದ್ದಲ್ಲ. ಮೊದಲು ನೀನು ರಾಜಾರಾಮ ಪ್ರಭುಗಳನ್ನು ಕಾಣಬೇಕೆಂದು ನಿನ್ನ ಪತಿಯ ಅಪ್ಪಣೆಯಾಗಿದುವ ದಲ್ಲವೆ? ನೀನು ನನ್ನ ಮಣ್ಣಿನ ಮೂರುವರೆ ಮೊಳದ ದೇಹದ ನಾಶಕ್ಕಾಗಿ ಚಿಂತೆಮಾಡ ಬೇಡ, ನನ್ನ ಪ್ರಾಣಪ್ರಿಯವಾದ ದೇಶದ ನಾಶಕ್ಕಾಗಿ ಚಿಂತೆಯನ್ನು ಮಾಡು, ಹೋಗು ಹೋಗು, ಮೊದಲು ನನ್ನ ಪ್ರಭುವನ್ನು ಸಮಾಧಾನಗೊಳಿಸು ಹೋಗು, ಆತನಿಗೆ