ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಸುರಸಗ್ರಂಥಮ ನನ್ನ ನಮಸ್ಕಾರವನ್ನು ಹೇಳು, ಪ್ರಿಯೇ ಕಮಲೇ, ನಾನು ಹೋದೆನೆಂದು ನೀನು ಸನ್ಯಾ ಸಿಯಾಗಿ ವೈರಾಗ್ಯಾಚರಣೆಯನ್ನು ಅಂಗೀಕರಿಸಬೇಡ? ದೇಶಕಲ್ಯಾಣವನ್ನಿಚ್ಛಿಸುವ ನನ್ನ ಹೃದಯದ ಚಿಂತೆ , ನಿನ್ನ ದೇಹವನ್ನು ಸುತ್ತಿ ತಿರುಗುತ್ತಿರುವದು. “ಹೋಗು, ಸೌಭಾಗ್ಯವತಿಯೇ, ನನ್ನ ಇಚ್ಛೆಯನ್ನು ಅಂತರಂಗದಲ್ಲಿ ಧರಿಸಿ ಅಖಂಡ ಸೌಭಾಗ್ಯ ವತಿಯಾಗಿ ಇರುಹೋಗು, ಕಮಲೇ, ಕಮಲೇ, ಬಾಲೆ, ಬರುತ್ತೇನೆ. ನಿನಗೆ ಸಂಸಾ ರಸುಖವು ಪ್ರಾಪ್ತವಾಗಲಿಲ್ಲೆಂದು ಮರುಗಬೇಡ. ಸತ್ವಶಾಲಿಯಾಗಿ ಅಖಂಡವಾದ ಶಾಂ ತಿಯಿಂದ ವಾಸಿಸು? ಇದೇ ನಿನಗೆ ನನ್ನ ಕಡೆಯ ಆಶೀರ್ವಾದವು, ಜಯಛತ್ರಪತಿ ಜಯಸಮರ್ಥ! ರಾಮ! ಶ್ರೀರಾಮ! ರಾಮರಾಮ!! ಆಯಿತು, ಜ್ಯೋತಿಯಲ್ಲಿ ಜ್ಯೋತಿಯು ಮಿಶ್ರವಾಗಿ ಹೋಯಿತು. ವಾಯುವಿನಲ್ಲಿ ವಾಯುವು ಕೂಡಿಹೋಯಿತು. ಸಂತಾಜಿಯ ಸಂಗಡಿಗರು ಸಂತಾಜಿಯ ದೇಹವನ್ನು ಚಿತೆಯಮೇಲಿಟ್ಟರು. ಅದನ್ನೆಲ್ಲ ಕಮಲಾಬಾಯಿಯು ನೋಡುತ್ತಲಿದ್ಧಳು. ಆಕೆಯ ಕಣ್ಣುಗಳಲ್ಲಿ ತಟ್ಟೆಂದು ನೀರಹನಿಗಳು ಉದುರಲಿಲ್ಲ. ಆಕೆಯ ಮುಖದಲ್ಲಿ ದಿವ್ಯವಾದ ತೇಜಸ್ಸು ಒಪ್ಪುತ್ತಿತ್ತು. ಆಕೆಯು ಚಿತೆಯಮೇಲೆ ಮಲಗಿರುವ ಪತಿಯ ಕೊರಳಲ್ಲಿ ಪುಷ್ಪ ಹಾರವನ್ನು ಹಾಕಿ- ಪತಿದೇವಾ, ಪುಣ್ಯವಂತಾ, ನಿನ್ನ ಪುಣ್ಯಕರ್ಮವನ್ನು ಪೂರ್ಣವಾ ಡುವದಕ್ಕಾಗಿ ನಿನ್ನ ಅಪ್ಪಣೆಯಂತೆ ಮಹಾರಾಜರ ಬಳಿಗೆ ಹೋಗಿ ಬರುತ್ತೇನೆ. ಅಲ್ಲಿಯ ವರೆಗೆ ನೀನು ಸುಖದಿಂದ ಶಯನಮಾಡಿರಬೇಕು ಕಂಡೆಯಾ? ಆ ಮೇಲೆ ನಾನೂ ನಿನ್ನ ಬಳಿಯಲ್ಲಿ ಶಯನಮಾಡುವೆನು. ಕೃಪಾವಂತಾ, ನಿಮ್ಮ ಏಕವಚನದೊಳಗಿನ ತೇಜಸ್ಸು ನನಗೆ ಮಾರ್ಗವನ್ನು ತೋರಿಸುವದು, ಔದಾರ್ಯದ ನಿಮ್ಮ ಏಕಪತ್ನಿವ್ರತದ ತೇಜ ಸ್ಟು ನನ್ನ ಪಾತಿವ್ರತ್ಯವನ್ನು ರಕ್ಷಿಸುವದು, ಕರುಣಾಮೂರ್ತಿಯೇ, ನಿನ್ನ ಆಚರಣೆಯೊ ಳಗಿನ ಪಾವಿತ್ರವು ನನ್ನ ಸಾತ್ವಿಕ ಭಾವವನ್ನು ಜಾಗ್ರತವಾಗಿ ಇಡುವದು, ಪತಿದೇವಾ, ಸ್ವಸ್ಥವಾಗಿ ಮಲಗಿಕೊಳ್ಳಿರಿ ಕಂಡಿರಾ!

  • ಈ ಮೇರೆಗೆ ನುಡಿದ, ಕಮಲಾಬಾಯಿಯು ಸುತಾಜಿಯ ತೆರವಾದ ಕುದುರೆ ಯನ್ನು ಹತ್ತಿಕೊಂಡು ಜಿಂಜಿಯ ಕಡೆಗೆ ನಡೆದಳು.

೨೫ ನೆಯ ಪ್ರಕರಣ- ಆನಂದ. -ಅಜಿ. ಪ್ರಿಯವಾಚಕರೇ, ಸಂತಾಜಿಯು ಸಿಟ್ಟಿನಿಂದ ಹೊರಟುಹೋದಬಳಿಕ ಜಿಂಜಿಯ ಸ್ಥಿತಿಯು ಏನಾಯಿತೆಂಬದನ್ನು ಕುರಿತು ನಾವು ಈಗ ಹೇಳಬೇಕಾಗಿದೆ. ರಾಜಕಾರ್ಯ ಧುರಂಧರನೂ, ಪರಮಧೆರ್ಯಶಾಲಿಯೂ, ಶ್ರೇಷ್ಠ ಮುತ್ಸದ್ದಿಯೂ ಆದ ಪ್ರಹ್ಲಾದರಾವ ನೀರಾಜಿಯು ಮರಣಹೊಂದಿದ್ದರಿಂದ ಮಹಾರಾಷ್ಟದೊಂದು ಕಣ್ಣೀ ಹೋದಂತಾ