ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಶಿವಪ್ರಭುವಿನವುಣ್ಯ, 944 ಒಳಗೆ ಗಣೋಜಿರಾವ ಶಿರ್ಕೆಯವರ ಬಳಿಗೆ ಹೋಗಿ ನಿಮ್ಮ ಖಂಡೋಜಿ ಚಿಟನೀಸನು ನಿಮ್ಮ ಕುಟುಂಬವನ್ನು ಕರಕೊಂಡು ಬಂದಿರುತ್ತಾನೆಂತಲೂ, ನಿಮ್ಮನ್ನು ಹೊರಗೆ ಕರೆ ಯುತ್ತಾನೆಂತಲೂ ಹೇಳಿರಿ, ” ಖಂಡೋಜಿ ಚೀಟನೀಸನೆಂಬ ಹೆಸರನ್ನೂ, ಆತನು ದುರ್ಗದಿಂದ ಇಳಿದು ಬಂದಿ ರುತ್ತಾನೆಂಬದನ್ನೂ ಕೇಳಿ ಕಾವಲುಗಾರರ ಎದೆಗಳು ದಸಕ್ಕೆಂದವು. ಕೆಲವರಂತು ಅವ ಸರದಿಂದ ಒಳಗೆ ಹೋಗಿ ಗಣೋಜಿರಾವ ಶಿರ್ಕೆಗೆ ಈ ಸುದ್ದಿಯನ್ನು ಹೇಳಿದರು. ಗಣೋಜಿರಾಯನು ಅದೇ ಬಂದು ಪಲಂಗದ ಮೇಲೆ ಅಡ್ಡಾಗಿದ್ದನು. ಆತನು "ಖಂಡೋ ಜಿಯು ಬಾಸಾಹೇಬರನ್ನು ಕರಕೊಂಡು ಬಂದಿರುತ್ತಾನೆಂ”ಬರು ಸೇವಕರು ಹೇಳಿ ದ್ದನ್ನು ಕೇಳಿದ ಕೂಡಲೆ ಚಟ್ಟನೆ ಸಲಂಗದಿಂದ ಎದ್ದು, ಹಾಗೆಯೇ ಬರಿ ಬಕ್ಕನೆ ಯಿಂದ ಹೊರಗೆ ಬಂದನು. ಖಂಡೋಬನು ನಿರ್ಭಯದಿಂದ ನಿಂತದ್ದನ್ನು ನೋಡಿ ಗಣೋಜಿಯು ಮೆಚ್ಚಿ ಬಿದ್ದು ಅವನನ್ನು ಕುರಿತು - - ಗಣೋಜಿ- ಯಾರು ಖಂಡೋಜಿರಾವ, ದುರ್ಗವನ್ನಿಳಿದು ಬಂದಿರೋ? ಅಥ ವಾ ಏನಾದರೂ ಮೋಸ ಮಾಡಿ ನನ್ನ ಡೇರೆಯ ಬಾಗಿಲಿಗೆ ಬಂದಿರೋ? | ಖಂಡೋಜಿ- ಛೇ ಛೇ! ಗಣೋಜಿರಾವ, ಮರೆ ಮೋಸವೇನೂ ಇಲ್ಲ. ನಾನು ದುರ್ಗವನ್ನು ಇಳಿದು ಬಂದು, ಹಿಂದಕ್ಕೆ ಆ ಅರಣ್ಯದೊಳಗಿನ ಗುಡಿಯಲ್ಲಿ ನಿಮ್ಮ ಮುಂದೆ ನಿಶ್ಯಸ್ತನಾಗಿ ನಿಂತಂತೆ ಈಗಲಾದರೂ ನಿಂತುಕೊಂಡಿರುತ್ತೇನೆ. ಈಗ ನೀವು ನನ್ನ ಮಾತ ನಾದರೂ ನಡಿಸಿರಿ; ಇಲ್ಲವೆ ಒಂದೇ ಹೊಡತಕ್ಕೆ ನನ್ನ ರುಂಡವನ್ನು ತುಂಡರಿಸಿ, ನಿಮ್ಮ ಸಿಟ್ಟನ್ನಾದರೂ ತೀರಿಸಿಕೊಳ್ಳಿರಿ. ಗಣೋಜಿ- ಇಂದು ಹೀಗೆ ಜೀವದ ಹಂಗು ದೊರೆಯಲಿಕ್ಕೆ ಕಾರಣವೇನು? ಖಂಡೋಜಿ-- ಅದಕ್ಕೆ ಕಾರಣಗಳು ಎರಡು ಇರುವವು. ನನ್ನ ಒಡೆಯನ ಪ್ರಾಣರಕ್ಷಣವಾಗಬೇಕೆಂಬದು ಒಂದನೆಯ ಕಾರಣವು; ಹಿಂದಕ್ಕೆ ಆ ದೇವಸ್ಥಾನದಲ್ಲಿ ನೀವು ನನ್ನನ್ನು ಕೊಲ್ಲಲು ಪ್ರತಿಜ್ಞೆ ಮಾಡಿದಂತೆ, ಆ ಪ್ರತಿಜ್ಞೆಯನ್ನು ಪೂರ್ಣ ಮಾಡ ಲಿಕ್ಕೆ ನಿಮಗೆ ಆಸ್ಪದವು ದೊರೆಯಬೇಕೆಂಬದು ೨ನೆಯ ಕಾರಣವು ! - ಗಣೋಜಿ--ನನ್ನಿಂದ ನಿನ್ನ ಒಡೆಯನ ಪ್ರಾಣರಕ್ಷಣವಾಗುವದಂತು ಅಸಂಭವವೇ ಸರಿ; ಆದರೆ ಎರಡನೆಯವರ ಸಂಸಾರಗೇಡು ಮಾಡುವ ನಿನ್ನಂಥ ನೀಚರಿಗೆ ದೇಹಾಂತ ಪ್ರಾಯಶ್ಚಿತ್ತವೇ ಯೋಗ್ಯವಾದದ್ದು. ಖಂಡೋಜೀ, ಸ್ವಾಮಿಭಕ್ತನೆನಿಸಿಕೊಳ್ಳುವ ನಿನಗೆ ಪ್ರತ್ಯಕ್ಷ ಶಿವಾಜಿಯ ಮಗಳನ್ನು, ಈ ದುಷ್ಟ 'ರಾಜಕುವರಳನ್ನು ದುರ್ಭಾವನೆಯಿಂದ ನೋಡಿ, ಆಕೆಯ ಪತಿಯಾದ ನನ್ನನ್ನು ಸಂತಾಪಾಗ್ನಿಯಿಂದ ದಹಿಸುವದು ಯೋಗ್ಯವೇ ನೀನು ರಾಜಕುವರಳನ್ನು ನಿಜವಾಗಿ ಒಡಹುಟ್ಟಿದವಳೆಂದು ಭಾವಿಸುವೆಯಾ? ನನ