ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲ. dಚಂದದಿಂದ ಶಿವಪ್ರಭುವಿನ ಹತಭಾಗ್ಯ, ಪುತ್ರನ ಮರವಣಿಗೆಯು ಹೊರಟು, ಬೀದಿಬೀದಿಗಳಲ್ಲಿ ಮೆರೆಯುತ್ತ ದರ್ಬಾರದ ಕಡೆಗೆ ಸಾಗಿತ್ತು. ಆಗ ಪ್ರೇಕ್ಷಕರ ಸಮೂಹವು ನರಿಯಿತು, ಪ್ರತ್ಯೇಕ ಚಾವತಾರವೆನಿಸುವ ಶಿವಪ್ರಭುವಿನ ಮಗನ ಈ ದುರವಸ್ಥೆಯನ್ನು ನೋಡಿ, ಬರಿಯ ಹಿಂದು ಜನರಷ್ಟೇ ಅಲ್ಲ, ಬಹು ಜನ ಮುಸ ಲಾನರೂ ಮರುಗಿದರು . ಸ್ವಾಭಿಮಾನಿಗಳಾದ ಮರಾಟರಂತು ಔರಂಗಜೇಬನ ಮೇಲೆ ಹಲ್ಲು ಕಡಿಯುತ್ತ, ಸಂತಾಪದಿಂದ ಕೈ ಉಬೈದರು , ಹೀಗಿರುವಾಗ ಸು ಭಾಜಿಯು ದರ್ಬಾರಕ್ಕೆ ಬಂದು ಬಾದಶಹನ ಎದುರಿಗೆ ನಿಂತುಕೊಂಡನು . ಆಗ ಸಿಂಹಾಸನದ ಸುತ್ತುಮುತ್ತು ಸುವರ್ಣದ ಕಟಾಂಜನದೊಳಗೆ ನಿಂತುಕೊಂಡಿದ್ದ ಎಲ್ಲ ಅಂಗರಕ್ಷಕರು, ತಮ್ಮ ಖಡ್ಗಗಳನ್ನು ಓರೆಗಳಿಂದ ಹಿಡಿದು ಸಜ್ಜಾಗಿ ನಿಂತುಕೊಂಡ ರು, ಆಗ ಸಂಭಾಜಿಯು_“ಹಾಯ್ ಹಾಯ್ , ದುರ್ದೈವವೇ ! ಮಾಡು , ಕುರ ನೀಶ ಮಾಡು ! ಹಿಂದಕ್ಕೆ ಆಬಾಸಾಹೇಬರು ಮುಸಲ್ಮಾನ ಬಾದಶಹರಿಗೆ ಕುರ್ನಿಸಾರ ವನ್ನು ಮಾಡಲಿಲ್ಲ. ಈ ಐಟಂಬನೆಯ ಶೂಲವು ಅವರ ಕಣ್ಣೆದುರಿಗೆ ಲಕಲಕಿಸುತ್ತ ದ್ವಿಲ್ಲೆಂಬಂತೆ ತೋರುತ್ತದೆ .” ಎಂದು ಏನೋ ತುಟಿಯಲ್ಲಿ ಒಟಗುಟ್ಟುತ್ತ, ಧೀರನಾದ ಸಂಭಾಜಿಯು ಬಾದಶಹನಿಗೆ ಕುರ್ನಿಸಾರ ಮಾಡದೆ (ವಂದನವಿಧಿಯನ್ನು ಮಾಡದೆ) ಸ್ವಸಿಕಾಕಾರವಾಗಿ ಎದೆಯ ಮೇಲೆ ತನ್ನ ಬಾಹುಗಳ ಮಡಿಕೆಯನ್ನು ಹಾಕಿಕೊಂಡು ಔರಂಗಜೇಬನ ದೃಷ್ಟಿಗೆ ತನ್ನ ಕ್ರುದ್ಧದಗಳನ್ನು ಎದುರು ಮಾಡಿ ನಿಶ್ಚಲವಾಗಿ ನಿಂತುಕೊಂಡನು ! ಔರಂಗಜೇಬನ ಆಕ್ಷವು ಈ ಕಾಲದಲ್ಲಿ ಸಂಭಾಜಿಯ ಕಡೆಗೆ ಇತ್ತೋ ಇಲ್ಲವೋ ಯಾರಿಗೆ ಗೊತ್ತು ? ಈತನಿಗೆ ಏನು ಮಾಡಬೇಕೆಂಬ ಬಗ್ಗೆ ಬಾದಶಹನು ತನ್ನ ಮುತ್ಸದ್ದಿಗಳೊಡನೆ ಆಲೋಚಿಸುತ್ತಲಿದ್ದನು , ಸಂಭಾಜಿಯನ್ನು ಕೊಲ್ಲಬಾರದೆಂದು ಸರ್ವಾನುಮತದಿಂದ ಗೊತ್ತಾಯಿತು . ಅಸದಖಾನನೆಂಬ ವಿಶ್ವಾಸದ ಸರದಾರನು ಈ ಸಂಬಂಧದಿಂದ ಬಾದಶಹನನ್ನು ಕುರಿತು-ಖಾವಿಂದ, ಈತನು ಮಹಾರಾಷ್ಟ್ರದ ರಾಜನಿರುತ್ತಾನೆ. ಈತನ ಬಂಧುಗಳ ಕೈಯಲ್ಲಿ ಇನ್ನೂ ಹಲವು ದುರ್ಗಗಳೂ, ಕೋಟಿ ಗಳೂ ಇರುತ್ತವೆ. ಅವನ್ನೆಲ್ಲ ಯುದ್ಧ ಮಾಡಿ ತಕೊಳ್ಳುವಾಗ ಸುಮ್ಮನೆ ಮನುಷ್ಯ ಹಾನಿ, ಪ್ರವ ಹಾನಿಗಳನ್ನು ಸೋಸಬೇಕಾಗುವದಲ್ಲದೆ , ಬಿಸಿಲು-ಚಳಿ-ಮಳೆಗಳ ಕಷ್ಟವನು ಭೋಗಿಸಬೇಕಾಗುವದು , ಇದಲ್ಲದೆ ಉತ್ತರದ ಕಡೆಗೆ ಶೀಖರು, ಜಾಟ ರು, ರಜಪೂತರು ಇವರ ಉಪದ್ರವವು ಹೆಚ್ಚಲಿದೆ. ಮತ್ತು ವಿಜಾಪುರ- ಗೋವಳ ಕಂಡಗಳ ಬಾದಶಾಹಿಗಳನ್ನು ನಾವು' ಇದೇ ಈಗ ಸ್ವಾಧೀನ ಪಡಿಸಿಕೊಂಡಿರುವದ