ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ, ವೃದ್ದರಿಂದಲೂ, ಆತನ ತಾಯಿಯಾದ ಸೋಯಿರಾಬಾಯಿಯನ್ನು ಕೂರತನ ದಿಂದ ಕೊಲ್ಲಿಸಿದ್ದರಿಂದಲೂ ರಾಜಾರಾಮನಸಿಟ್ಟು, ಸಂಭಾಜಿಯ ಮೇಲೆ ವಿಶೇಷ ವಾಗಿ ಇತ್ತು; ಒಮ್ಮೊಮ್ಮೆ ಸಂತಾಪದಿಂದ ಅಣ್ಣನ ಸೇಡು ತೀರಿಸಿಕೊಳ್ಳುವ ಇಚ್ಚೆಯ ಆತನಲ್ಲಿ ಉತ್ಪನ್ನವಾಗುತ್ತಿತ್ತು; ಆದರೆ, ಸಾತ್ವಿಕನಾದ ಆ ರಾಜಾ ರಾಮನು ಕೂಡಲೆ ಪಶ್ಚಾತ್ತಾಪಬಟ್ಟು ತನ್ನನ್ನು ಹಳಿದುಕೊಳ್ಳುತ್ತಿದ್ದನು. ಅಗ್ನಿ ಗೆಯಾದ ಏಸೂಬಾಯಿಯ ಮೇಲೆ ಅತನ ವಿಶ್ವಾಸ ಬಹಳ; ಅಂಣನ ಮಗನಾದ ಶಿವಾಜಿಯ ಮೇಲೆ ಆತನ ವಾತ್ಸಲ್ಯವು ಹೆಚ್ಚು; ಏಸಬಾಯಿಯದರೂ ಮೈದುನ ನಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ಆತನ ಸಂಗಡ ದೊಡ್ಡ ಮನಸ್ಸಿನಿಂದ ನಡೆದು ಳ್ಳುತ್ತಿದ್ದಳು. ತನ್ನ ಪತಿಯ ನಡತೆಯು ಆಕೆಯ ಮನಸ್ಸಿಗೆ ಎಳ್ಳಷ್ಟೂ ಬರುದ್ದಿಲ್ಲ ಪತಿಯನ್ನು ಹಾದಿಗೆ ತರುವದಕ್ಕಾಗಿಯೂ, ಮಹಾರಾಷ್ಟ್ರರ ರಾಜ್ಯಕ್ಕೆ ಆತನಿಂದಾ ಗಬಹುದಾಗಿದ್ದ ಉಪಹತಿಯು ತಪ್ಪುವದಕ್ಕಾಗಿಯ, ಆ ವೀರಸ್ತು ಷೆಯು ತನ್ನಿಂದಾ ದಷ್ಟು ಯತ್ನಿಸಿದಳು. ಒಮ್ಮೊಮ್ಮೆ ತನ್ನ ಪತಿಯ ಸಂಬಂಧದಿಂದ ಅತ್ಯಂತ ನಿಷ್ಟು ರತೆಯಿಂದ ನಡೆದುಕೊಳ್ಳುವ ಪ್ರಸಂಗವು ಆಕೆಗೆ ಬರುತ್ತಿತ್ತು. ಅದರೂ ಸಂಭಾಜಿ ಯು ಮರಣಹೊಂದಿದ ದಿವಸ ಎಲ್ಲರಿಗೂ ಅಸಮಾಧಾನವಾಗಿ, ಅವರೆಲ್ಲರ ಮನಸ್ಸು ಉದಾಸೀನವಾಗಿತ್ತು. ಇಲ್ಲದ ಕುಕಲ್ಪನೆಗಳು ಅವರ ಮನಸ್ಸಿನಲ್ಲಿ ಬರತೊಡಗಿದವು. ಹೀಗಿರುವಾಗ ಖಂಡೋಜಿಯು ಸಂಭಾಜಿಯ ತಲೆಯನ್ನು ಪ್ರಹ್ಲಾದಪಂತನ ಕಡೆಗೆ ಕಳಿಸಿ ಕೊಟ್ಟು, ತಾನು ರಾಜಕುವರಳಿಗೆ ಸಂಭಾಜಿಯ ಸುದ್ದಿ ಯನ್ನು ತಿಳಿಸಲಿಕ್ಕೂ, ಸಂಭಾಜಿಯುಕ್ರಿಯಾಕರ್ಮದ ವ್ಯವಸ್ಥೆಯನ್ನು ಮಾಡಲಿಕ್ಕೂ ಹೊರಟು ಹೋದನು. ಜೋತಾಜಿಯು ರಾಜಾರಾಮ ಮಹಾರಾಜರಿಗೆ ಸಂಭಾಜಿಯ ವರಣದ ಸುದ್ದಿಯನ್ನು ಹೇಳಲಿಕ್ಕೆ ಹೋದನು. ಹಾಹಾ ಅನ್ನುವದರೊಳಗಾಗಿ ಸಂಭಾಜಿಯ ಮರಣ ವಾ ರ್ತಯು ರಾಯಗಡದ ತುಂಬಹಚ್ಚಿ, ಎಲ್ಲರೂ ಶೋಕಗ್ರಸ್ತರಾದರು. ಬಾದಶಹನ ಕ್ರೂರತನವನ್ನು ಕೇಳಿ ಎಲ್ಲರ ಮನಸ್ಸಿನಲ್ಲಿ ದುಃಖಕಿಂತ ಸಂತಾನವು ಹೆಚ್ಚಿತು ಬಾದಶಹನ ಮೇಲಿನ ಸಿಟ್ಟಿನ ಭರದಲ್ಲಿ ಸಂಭಾಜಿಯ ಕ್ರೂರತನವನ್ನೂ, ದುರ್ಗು ಣಗಳನ ಮರೆತುಬಿಟ್ಟು, ಆತನು ತಮ್ಮ ಶಿವಪ್ರಭುವಿನ ಪುತ್ರನೆಂಬದನ್ನೊಂದು ತಮ್ಮ ಮನಸಿನಲ್ಲಿ ತಂದು, ಬಾದಶಹನ ವಿಷಯವಾಗಿ ಎಲ್ಲರೂ ಸಂತಾಪದಿಂದ ಉರಿಯಹು ದರು. ಧೀರಳಾದ ಏಸಬಾಯಿಯು ತನ್ನ ಅಪಾರವಾದದುಃಖವನ್ನು ಆತ್ಮಸಂಯ ಮನದಿಂದ ನುಂಗಿಕೊಂಡು ತನ್ನ ಮೈದುನನಿಗೆ ಸಮಾಧಾನ ಹೇಳಹತ್ತಿದಳು;ಆದರೆ ಕೋಮಲಾಂತಃಕರಣದ ರಾಜಾರಾಮನಿಗೆ ಅಂಣನ ಮರಣದಿಂದ ವಿಶೇಷವಾಗಿ ಆಳ