ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ . ಸೂರ್ಯಾಜಿಯ ನಾಳವು ಸಮೂಲವಾಗಿ ಆಗುವದೆಂಬದರಲ್ಲಿ ಸಂಶಯವಿಲ್ಲ ! ಆದರೆ ನೀನು ಇಲ್ಲಿಂದ ಪಾರಾಗಿ ಹೋಗುವ ಸಂಭವವೇ ಇಲ್ಲ. ನಾವಾಗಿ ಅನ್ನವನ್ನು ಕೊಟ್ಟರೆ, ನೀನು ಬದುಕಿ ಇರು; ಇಲ್ಲದಿದ್ದರೆ ಇಲಿಯ ಹಾಗೆ ಬೆಳ್ಳಗಾಗಿ ಸತ್ತು ಹಿಣಗಿಹೋಗುತ್ತಿ: ಹೋಗಿರಿ, ಸೂರ್ಯಾಜೀ, ನೀವು ರಾಯಗಡದ ಬಾಗಿಲನ್ನು ಬಂದು ಮಾಡಿಕೊಂಡು ಒಳಗಿಂದಲೆ ರಾಯಗಡಕ್ಕೆ ಹೋಗಿರಿ , ರಾಜಿ, ನೀನು ಬೆಲಾನಾಥನನ್ನು ಕರಕೊಂಡು ಮಹಾದ್ವಾರದ ದಿಡ್ಡಿಯೊಳಗಿಂದ ಹಾದು ಹೊರಗೆ ನಡೆ, ನಾನು ಅಲ್ಲಿಯ ವರೆಗೆ ಈತನ ಬೆನ್ನಮೇಲಿರುತ್ತೇನೆ. ನೀವೆಲ್ಲರೂ ಹಾದಿ ಹದ ಬಳಿಕ ನಾನು ಬಾಗಿಲು ಬಂದು ಮಾಡಿಕೊಂಡು, ಕೀಲಿಹಾಕಿಕೊಂಡು ಬರುವೆನು. ಏ, ನರಪಶುವೆ, ನನ್ನ ಮಾತನ್ನು ಚೆನ್ನಾಗಿ ಕೇಳು , ಅಗೋ, ಅತ್ತಕಡೆಯ ಆ ಕೋಣೆ ಯಲ್ಲಿ ಯಥೇಚ್ಛ ಧಾನ್ಯ ಸಂಗ್ರಹವಿರುತ್ತದೆ , ಈ ಕುಂಡದಲ್ಲಿ ಸ್ನಾನಮಾಡಿ ಶಂಕರ. ನನ್ನು ಪೂಜಿಸಿ ಯಥೇಚ್ಛ ಭೋಜನಮಾಡುತ್ತ ಕಾಲಹರಣ ಮಾಡು , ನಿನ್ನ ಪೂರ್ವ ಪುಣವಿರುವದರಿಂದಲೇ ಶ್ರೀ ಶಂಕರನ ಪೂಜೆಯು ಯೋಗವು ಒದಗಿರುತ್ತದೆಂದು ತಿಳಿ ನನ್ನ ಮನಸ್ಸಿಗೆ ಬರುವವರೆಗೆ ನೀನು ಬದುಕಿರಲೇ ಬೇಕಾಗಿರುವದು , ನೀನು ಶರನೆನಿ.೩ ಕೊಳ್ಳುವದರಿಂದ ಆತ್ಮಹತ್ಯವು ನಿನಗೆ ಸಮ್ಮತವಾಗಲಿಕ್ಕಿಲ್ಲ. ಇನ್ನು ನಾನು ತರ್ಕಿಸಿ ರುವಂತ ವ್ಯಭಿಚಾರದ ಮಹಾಪಾತಕಕ್ಕೆ ನೀನು ಗುರಿಯಾಗಿದ್ದ ಪಕ್ಷದಲ್ಲಿ ಆತ್ಮಹತ್ಯ. ಮಾಡಿಕೊಳ್ಳಬಹುದಾಗಿದೆ. ಆದರೆ, ಇದು ನಿನಗೆ ಭೂಷಣವಲ್ಲೆಂಬದನ್ನು ಚೆನ್ನಾಗಿ ನೆನಪಿನಲ್ಲಿಡು, ಎಂದು ಹೇಳಿ, ಗಣೋಜಿಯು ತನ್ನವರನ್ನು ಹಿಂಬಾಲಿಸಿ ತಾನೂ ಗುಡಿ, ಯಿಂದ ಹೊರಟ ಹೋದನು . ೮ನೆಯ ಪ್ರಕರಣ-ಮರಾಟರ ದರ್ಬಾರವು. -[0]- , ಸಂಭಾಜಿಯ ಉತ್ತರಕ್ರಿಯೆಯ ಸಲುವಾಗಿ ಮುಖ್ಯ ಮುಖ್ಯ ಮಹಾರಾಷ್ಟ್ರ ಸರದಾರರೆಲ್ಲ ರಾಯಗಡಕ್ಕೆ ಬಂದಿದ್ದರು , ಅತ್ಯಂತ ಬಲಾಡ್ಯನಾದ ಔರಂಗಜೇಬನ ಸಂಗಡ ಇನ್ನು ಹಾಗೆ ನಡೆದುಕೊಳ್ಳಬೇಕು, ಆತನಿಂದ ಮರಾಟರ ರಾಜ್ಯವನ್ನು ಯಾವ ಮಾರ್ಗದಿಂದ ಉಳಿಸಿಕೊಳ್ಳಬೇಕು. ಸಂಭಾಜಿಮಹಾರಾಜರ ಕೊಲೆಯ ಸೇಡನ್ನು ಹಾಗೆ ತೀರಿಸಿ ಕೊ ಆ ಬೇಕು, ಇ ವೇ ಮೊದಲಾದ ಮಹತ್ವದ ಸಂಗತಿಗಳ ವಿಚಾರಕ್ಕಾಗಿ ದರ್ಬಾರವು ಕೂಡಬೇಕಾಗಿತ್ತು . ಒಂದು ದಿನ ಬಕ್ಷಿಯು ಯುವತ್ತು ದುರ್ಗಾಧಿಪತಿಗಳಿಗೂ, ಮುತ್ಸದ್ಧಿಗಳಿಗೂ, ಸರದಾರರಿಗೂ, ಕಾರಕೂನೆ