ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೭೬ ಸುರಸಗ್ರಂಥಮಾಲಾ,

•••• ಕಡತ ಎರಡು ತುಂಡು ” ಎಂಬ ವರ್ಗದವನಾದ ಸಂತಾಜಿಸೋರ್ಸಡೆಯಂಥ ಮಹಾ ತೇಜಸ್ಸಿಗೆ ಸಹನವಾಗಲಿಲ್ಲ ಆತನು ಎದ್ದು ನಿಂತು ಸ್ವಲ್ಪ ಸಂತಾಪದಿಂದ-ಮಣ ಕಾಲನಟ ಗಾದಿಯ ಮೇಲೆ , ಕಿನಕಾಫಿನ ಲೋಡಿಗೆ ಆತು ಕುಳಿತು ಆಲೋಚಿಸುತ್ತ ಧೋರಣ ನೋಡಿ ತೋರಣ ಕಟ್ಟಲಿಕ್ಕೆ ಇದು ಸಮಯವೇ? ಅವ್ವನವರೇ, ಕೂಡಲೆ ಮೊಗಲರಿಗೆ ತೋರಿಸುವದಕ್ಕಾಗಿ ನಮ್ಮನ್ನು ಆಜಿ.ಪಿಸಬೇಕು , ತಾವು ಕೆಚ್ಚು ಗದ ಎದೆಯವರೇ ಇರುತ್ತೀರಿ. ಅಂತೇ ಮಹಾ ಧೈರ್ಯದಿಂದ ಪ್ರತ್ಯಕ್ಷ ಪತಿ ಯನ್ನು ಹ ದಿಗೆ ತರುವದಕ್ಕಾಗಿ ಬಂಧುಗಳ ಸಹಾಯದಿಂದ ಸತಿಗೆ ಪೆಟ್ಟು ಹಾಕಿದಿರಿ! ಇದರಿಂದಲೇ ಶಿರಕೇ ಕುಲದ ವಿದ್ವಂಸವಾಗಿ, ನಿಮ್ಮ ತವರ ಮನೆಯಲ್ಲಿ ನಾಲ್ವರು ಐವರಿಗೆ ರಂಡೆತನವು ಬಂದಿತು ? ಆಗ ಆಂತಃಕರಣವು ಸುಟ್ಟು ಕರಕಾದರೂ ಮಹಾ ಧೈರ್ಯದಿಂದ ವಿಧವೆಯರಿಗೆ ಅನ್ಯಗಳಿರಾ, ಮಹಾರಾಷದ ಸಂಸಾರವನ್ನು ಉಳಿಸುವದಕ್ಕಾಗಿ ನಿಮ್ಮ ಸಂಸಾರಗೀಡಾಯಿತು' ಎಂದು ಸಮಾಧಾನ ಹೇಳಿದ ರ ಏಸೂಬಯಿಯವರು ನೀವೇಯಲ್ಲವೇ ? ಅವ್ವನವರೇ, ನಮ್ಮ ಈ ಸಿಂಹಾ ಸನದ ಬಾದಶಹನೂ, ಮಹಾರಾಷ್ಟ್ರದ ಅಭಿಮಾನ ಜೊತಿಯ ಆದ ಸಂಭಾಜಿ ಮಹಾರಾಜರನ್ನು ದುಷ್ಕೃ ಅಲಮಗೀರನು ಅವಮಾನಗೊಳಿಸಿ, ಕ್ರೂರತನದಿಂದ ಕೊಲ್ಲಿಸಿದನಲ್ಲವೇ? ಇದನ್ನು ನೆನಿಸಿ ನಮ್ಮ ಅಂತಃಕರಣಗಳು ದಗ್ನವಾಗದೆ ಯಾಕೆ ಬಿಟ್ಟಾವು ? ವಿ:ತ್ರರೇ , ಏಳಿರಿ, “ಹರಹರ ಮಹಾದೇವ ” ಎಂದೆ. ಗರ್ಜಿಸೋಣ, ಏಳಿರಿ! ಅವರೇ, ಹುಕುಂ ! ಸರಕಾರದ ಹುಮು ಏನಾಗುವದು ? ಹಿಗೆ ಸಂತಾಜಿರ್ಸತೆಯು ಸಭೆ ಗಲ್ಲಿ ಗುರ್ತಿಸಿ ಮಾತಾಡಿದ್ದು , ಕೆಲವರು ಮನಸ್ಸಿಗೆ ಬಂದಿತು , ಕೆಲವರ ಮನಸ್ಸಿಗೆ ಬರಲಿಲ್ಲ. ಮನುಷ್ಯ ಸ್ವಭಾವದಂತೆ ಆಗಿನ ಮಹಾರಾಷ್ಟ್ರ, ಸರದಾರರಲ್ಲಿ ಯ ಪಕ್ಷಭೇದಗಳಿದ್ದವು. ಕೆಲವರು ಧನಾಜೆಜಾಧವನ ಪಕ್ಷದವರಿದ್ದರು , ಕೆಲವರು ಸಂತಾಜೆ ಘೋರ್ಪಡೆಯ ಪಕ್ಷದವರಿದ್ದರು, ಘೋರ್ಪ ಡೆಯ ಮಾತುಗಳನ್ನು ನಿ ಫೆ ಧಿ ಸು ವ ದ ಕಾ ಗಿ ಮನೆಯು ಎದ್ದು ನಿಂತು - ಸಂತಾಜಿರಾವ, ಹೀಗೆ ಆತುರಪಡಬಾರದು . ಇಲ್ಲಿ ಉಳಿದವರೇನು ಬಳೆಯಿಟ್ಟಿರುವ ದಿಲ್ಲ; ಆದರೆ ಶಕ್ತ ಕ್ಯಗಳನ್ನು ಕುರಿತು ವಿಚಾರಿಸಿ ಕಾರ್ಯಮಾಡಬೇಕಾಗಿದೆ . ವೈರಿಯು ಬಲಿಷ್ಠನಾಗಿರಲು, ಹಾಗೆ ವಿಚಾರಮಾಡಲಿಕ್ಕೆ ಇದು ತಕ್ಕ ಸಮಯವಾಗಿ ರುವದು , ನಿಮ್ಮಂಥ ತರುಣರ ಏರಿಕೆಯ ರಕ್ತವು ವಿಶೇಷ ವೇಗದಿಂದ ಹರಿಯುತ್ತಿ ದ್ದರೂ, ಹೊತ್ತು ನೋಡಿ ಕೊಡೆಹಿಡಿಯಬೇಕಾಗುತ್ತದೆ. ವಿಚಾರ ಮಾಡಿರಿ, ಪ್ರಸಂ ಗಕ್ಕನುಸರಿಸಿ ನಡೆಯುವದು ಜಾಣತನವೊ ? ಒಮ್ಮೆಲೆ ಧಡಮ್ಮನೆ ಧುಮುಕಿ