ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣಿ • ಭ ಹೊಡತದ ಸ್ಥಳಗಳನ್ನೂ , ತೊಡಕಿನ ಹಾದಿಗಳನ್ನೂ ತನ್ನ ಬಳಿಯ ಧನಾಜಿ, ಸಂತಾಜಿ ಯೇ ಮೊದಲಾದ ಶೂರರಿಗೆ ಅತ್ಯಾಸಕ್ತಿಯಿಂದ ತೋರಿಸುತ್ತಲಿದ್ದನು ಅವರಲ್ಲಿ ಸಂ ತಾಜಿಯು ಅತ್ಯುತ್ಸುಕತೆಯಿಂದ ಎಲ್ಲವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಿದ್ದನು , ಹೀಗೆ ರುವಾಗ ರಾಜಾರಾಮಮಹಾರಾಜರು ಸಂತಾಜಿಯನ್ನು ಕರೆಯಲು, ಆ ಸ್ವಾಮಿ ಕಾರ್ಯನಿಷ್ಠನು ಅತ್ತಕಡೆಗೆ ಲಕ್ಷ ಕೊಡಲಿಲ್ಲ; ಮತ್ತೊಮ್ಮೆ ಕರೆಯಲು, ಆಗ ಲಕ್ಷ ಕೊಡಲಿಲ್ಲ. ಕಡೆಗೆ ಮೂರನೇ ಸಾರೆ ಕರೆಯಲು, ಆ ಜಾಜ್ವಲ್ಯ ಸ್ವಭಾವದ್ದ ಸಂತಾ ಜಿಯು ಕೆವಕ ನೆ ಮಹಾರಾಜರ ಮೈ ಮೇಲೆ ಹೋದನು. ಅದನ್ನು ನೋಡಿ ರಾವ ಚಂದ್ರಪಂತನು ಗಾಬರಿಯಾದನು. ಆಗ ಸಂತಾಜಿಯು ಮಹಾರಾಜನು ಕುರಿತು ಮಹಾರಾಜ , ಏನಿದು ? ದೊಡ್ಡ ಮಹಾರಾಜರು ಹೀಗೆ ಕಾರ್ಯಾಸಕ್ಕರ ಅವ ಧಾನವನ್ನು ಕೆಡಿಸುತ್ತಿದ್ದಿಲ್ಲ. ಒಮ್ಮೆ ತಾನಾಜೆಯು ಅವರಿಗೆ-“ಮಹಾರಾಜ, ದುರ್ಗವನ್ನು ಕೈವಶ ಮಾಡಿಕೊಳ್ಳುವವನು ನಾನು, ತಾವು ಇಲ್ಲಿಂದ ಉಲುಕಲಾಗದು,” ಎಂದು ಹೇಳಲು, ವೃಹಾರಾಜರು ಹಾಗೆಯೇ ಮಾಡಿದರು . ನಾನು ಇತ್ಯ ಪಂತರ ಬಳಿಯಲ್ಲಿ ಮುಂದಿನ ಪಾಠಗಳನ್ನು ಕಲಿಯತೊಡಗಿರುವಾಗ, ನೀವು ನನ್ನನ್ನು ಒಂದೇ ಸವನೇ ಕರೆಯತೊಡಗಿರುತ್ತೀರಿ. ಬೇರೆ ಯಾರಾದರೂ ಹೀಗೆ ಮಾಡಿದ್ದರೆ ದೊಡ ಮಹಾರಾಜರು ತಡೆಯುತ್ತಿದ್ದರೆ ? ಎಂದನು . ಸಂತಾಜಿಯ ಈ ಮಾತಿಗೆ ಮಹಾರಾಜರು ನಕ್ಕು , ಮನಸ್ಸಿನಲ್ಲಿ ಸಮಾಧಾನ ಪಡುತ್ತ ಪರಿವಾರದೊಡನೆ ಮಾರ್ಗವನ್ನು ಕ್ರಮಿಸುತ್ತಲಿದ್ದರು. ಅವರು ಈ ಬಗೆಯ ಹಲವು ಸ್ವಾಭಿಮಾನದ ಸಂಭಾಷಣಗಳಿಂದ ಸಂತೋಷಪಡುತ್ತ ಕನ್ಯಾ, ವೇಣ್ಯಾ , ಕೋಯನಾ ನದಿಗಳ ನೀರಿನಿಂದ ತೋಯುತ್ತಿರುವ ಸೃಷ್ಟಿ ಸುಂದರಪ್ರದೇಶದೊಳಗಿಂದ ಸಾಗುತ್ತ ಸಾಗುತ್ತ ಕೇಲವಲಿ, ಸೋನಾಪುರಗಳ ಮಗ್ಗಲಿನಿಂದ ಸಜ್ಜನಗಡದ ಕಡೆಗೆ ಹೊರಟರು. ಸಜ್ಜನಗಡವು ಶ್ರೀ ಸಮರ್ಥ ರಾ ಮ ದಾ ಸ ಸಾ ಮಿ ಗ ಳ ನಿವಾಸನ್ಮಾನವೂ , ಸಮಾಧಿಸ್ಕಾನವೂ ಆಗಿರುವದೆಂಬದನ್ನು ವಾಚಕರು ಅರಿತಿರ ಬಹುದು . ಸಮರ್ಥರು ಅಲ್ಲಿ ಇದ್ದುಕೊಂಡು ಶಿವಪ್ರಭುವಿನ ಕೈಯಿಂದ ಧರ್ಮ ಸ್ಮಾಪನ-ರಾ ಜ್ಯ ಸ್ನಾ ಪ ನ ಗ ೮ ರ ಡ ನ್ಯೂ ಮಾಡಿಸಿದ್ದರಿಂದ , ಆ ಸಣ್ಮನಗಡದ ಪರಮ ಪಾವಿತ್ರ್ಯವನ್ನೂ, ಪರಮೋದಾತ್ತತೆಯನ್ನೂ, ಪರಮ ವೈಭವಶಾಲಿವ ನ್ಯೂ ಪಾಮರರಾದ ನಾವು ಏನೆಂದು ವರ್ಣಿಸೋಣ? ಇದೇ ಗಡದಿಂದ ಸಮರ್ಥರು ತಮ್ಮ ಸುಂದರ ಉಪದೇಶ ರೂಪ ಕೊಳಲನ್ನು ಊದಿ, ಅನೇಕ ಕೃತಿಯ ವೀರ ರನು ತನು ಸುತ್ತು ಮುತ್ತು, ನೆರಿಸಿಕೊಂಡರು; ಇದೇ ಗಡದಿಂದಲೇ ಸಮರ್ಥರು