ಪುಟ:ಶ್ರೀಮತಿ ಪರಿಣಯಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಶ್ರೀಮತೀಪರಿಣಯಂ ಕಾಂಭೋಜಿ ರಾಗ, ರೂಪಕ ತಾಳ. ಕೇಳು ಕೇಳೆಲೆ | ಬಾಲಿಕಾಮಣಿ 1 ಕೇಳು ಗುಣಮಣಿ11 ನೀಲಸೀರದ | ವೇಣಿ ಪಂಕಜ ಪಾಣೀ | ಕೋಮಲ 1 ವಾಣಿರಮಣಿ! ಮನಿಗಳೀರರು/ಮಾನಿತಶೀಲರುನಿನ್ನನು ಮೋಹಿಸಿ ಬಂದಿಹರು | ಮಾನಿನೀಮಣಿ | ಯಿವರೊಳೊರ್ವನ / ಸಾನು! ರಾಗದಿಂದುವರಿಸು|| ಮುನ್ನ ಚ್ಯವನ | ಮುನಿಯನೊಲಿದ | ಕನ್ಯ ಸುಕನ್ಯಯತೆರದಿ | ಸನ್ನು ತಾಂಗಿ ! ಸಕಲಭಾಗ್ಯಸಂ 1 ಪನ್ನೆ | ಯಾಗಿ ಬಾಳು ನೀನು || ಕುಮಾರೀ ! ಇದೋ ! ಈ ಪಷಮಾಲಿಕೆಯನ್ನು ಕೈಗೆ ತೆಗೆದು ಕೊಂಡು, ಆ ಇಬ್ಬರುಮುನಿಕುಮಾರರಲ್ಲಿ, ಯಾರ ಸೌಂದಠ್ಯವು ನಿನ್ನ ಮನಸ್ಸಿಗೊಪ್ಪುವುದೋ, ಅವರ ಕೊರಳಿಗೆ ಈ ಮಾಲೆ ಯನ್ನಿ ! ಇಬ್ಬರೂ ಸಮಾನಮಹಿಮೆಯುಳ್ಳವರು ! ಇಬ್ಬ ರೂ ಪರಮಭಾಗವತೋತ್ತಮರು. ಶ್ರೀಮತಿ-ಜನಕಾ ! ನಿನ್ನ ಆಜ್ಞಾಧೀನಳಾಗಿ ನಡೆಯುವುದಕ್ಕೆ ಸಿದ್ಧಳಾಗಿ ರುವೆನು, ಮಕ್ಕಳಿಗೆ ತಂದೆತಾಯಿಗಳ ಮಾತನ್ನು ನಡೆಸುವುದ ಕ್ಕಿಂತಲೂ ಉತ್ತಮಧರ್ಮವಾವುದುಂಟು? ಯುಕ್ತಾಯುಕ್ತ ವಿವೇಚನಪರನಾದ ನೀನು, ನನ್ನ ಕ್ಷೇಮಚಿಂತೆಯಿಂದ ನಿರ್ಣಯಿ ಸಿದ ಕಾರಕ್ಕೆ ನಾನು ಹಿಂತೆಗೆಯುವೆನೆ ? ಇದರಮೇಲೆ ಹರಿಭ ಕೊತ್ತಮನಾದ ನಿನ್ನ ಗರ್ಭದಲ್ಲಿ ಜನಿಸಿದ ನನಗೆ, ಆಂತಹಪರ ಮಭಾಗವತೋತ್ತಮರ ಪಾದಾಶ್ರಯವು ಲಭಿಸುವುದಾದರೆ ? ದು ನನ್ನ ಭಾಗ್ಯವಿಶೇಷವಲ್ಲವೇ ? ಎಲ್ಲಿ ಮಾಲೆಯನ್ನು ಕೊಡು? (ಎಂದು ಮಾಲೆಯನ್ನು ಹಿಡಿದು ಮುಂದೆ ಹೋಗಿ ನಾರದಪ ರ್ವತರನ್ನು ನೋಡಿ ಭಯದಿಂದ ತಟ್ಟನೆ ಹಿಂತಿರುಗಿ ಶ್ರೀಮತಿ-ಜನಕಾ ! ರಕ್ಷಿಸು ! ರಕ್ಷಿಸು ! (ಎಂದು ತಂದೆಯ ಮರೆಯಲ್ಲಿ ನಿಲ್ಲುವಳು.) ತ್ರಿ