ಪುಟ:ಶ್ರೀಮತಿ ಪರಿಣಯಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪ ಶ್ರೀಮತೀಪರಿಣಯಂ ನಾರದಂ-ಏನು ! ನಾನು ನಾರದನೆಂಬುದರಲ್ಲಿಯೇ ನಿನಗೆ ಸಂದೇಹ ವೇನು ? ಮುಖವನ್ನು ನೋಡಿದರೆ ತಿಳಿಯುವುದಿಲ್ಲವೆ ? ಈತನ ವಿಷಯದಲ್ಲಿಯೂ ನೀನು ಸಂದೇಹಿಸಬೇಡ! ಇವಸೇ ಪರ್ವತನು. ಪರ್ವತಂ-ರಾಜಾ ! ಸಂದೇಹಿಸಬೇಡ ! ಈತನೇ ನಾರದನು, ನನ್ನ ಮಾತ ನ್ನು ನಂಬು! ನಿನ್ನ ಮಗಳನ್ನು ಕರೆ ! ರಾಜಂ- ಪೂಜ್ಯರೆ ! ಹಾಗೆಯೇ ಮಾಡುವೆನು. (ಶ್ರೀಮತಿಯ ಕೈಯನ್ನು ಹಿಡಿದು ಮುಂದೆ ನಿಲ್ಲಿಸಿಕೊಂಡು ಜನಾಂತಿಕ॰) ಕುಮಾರೀ ! ಎಷ್ಟೆಷ್ಟು ಯೋಚಿಸಿದರೂ ಇವರ ನಿಜಸ್ಥಿತಿಯೇನೆಂದು ತಿಳಿಯ ಲಿಲ್ಲ. ನಾನು ನಿರ್ಣಯಿಸಿದಂತೆ ನಾರದಪರ್ವತರಿಬ್ಬರೂ, ಇಲ್ಲಿಗೆ ಬರಬೇಕಾದ ಕಾಲಕ್ಕೆ ಸರಿಯಾಗಿ, ಈ ವ್ಯಕ್ತಿಗಳೆರಡೂ ಇಲ್ಲಿಗೆ ಬಂದು ಕುಳಿತಿರುವುವು, ಕಂಠಸ್ವರವೂ ಅವರಂತೆಯೇ ಇರುವುದು, ಇದರಿಂದ ಆ ನಾರದಪರೈತರೇ ನಮ್ಮ ಮನೋ ದಾರ್ಡ್ಯವನ್ನೂ , ನಮ್ಮ ಸತ್ಯವನ್ನೂ ಪರೀಕ್ಷಿಸುವುದಕ್ಕಾಗಿ, ಹೀಗೆ ವೇಷಧಾರಿಗಳಾಗಿ ಬಂದಿರಬಹುದೆಂದು ಊಹಿಸಬೇಕಾಗಿದೆ. ನಿಜಸ್ಥಿತಿಯನ್ನು ತಿಳಿಯದೆ ನಾವು ಇವರನ್ನು ತಿರಸ್ಕರಿಸಿದ ಮೇಲೆ, ಇವರೇ ನಾರದಪರೈತರಾಗಿದ್ದ ಪಕ್ಷದಲ್ಲಿ ನಾವು ಬ್ರಾ ಹ್ಮಣಕೋಪಕ್ಕೆ ಪಾತ್ರರಾಗುವೆವು. ಆಡಿದ ಭಾಷೆಗೆ ತಪ್ಪಿದ ಮಹಾದೋಷಕ್ಕೂ ನಾನು ಗುರಿಯಾಗುವೆನು. ಹಾಗಿಲ್ಲದೆ ಈ ಸ್ಥಿತಿಯಲ್ಲಿ ಇವರ ಕೊರಳಿಗೆ ಸ್ವಯಂವರಮಾಲಿಕೆಯನ್ನು ಹಾಕ ಬೇಕೆಂದು ನಿನ್ನನ್ನು ನಿರ್ಬಂಧಿಸುವುದಕ್ಕೂ ನನ್ನ ನಾಲಗೆಯು ಹೊರಡದಿರುವುದು, ಇದಕ್ಕೆ ನಾನೇನು ಮಾಡಲಿ ! ಈ ಉಭಯ ಸಂಕಟದಿಂದ ನನ್ನನ್ನು ತಪ್ಪಿಸತಕ್ಕ ಭಾರವು ನಿನ್ನದಾಗಿದೆ. ಶ್ರೀಮತಿ-ಜನಕಾ ! ಭಗವನ್ನಾಯೆಯು ವಿಚಿತ್ರವಾಗಿರುವುದು, ಜನರು ಆ ಮಾಯೆಯಿಂದ ವಂಚಿತರಾಗಿ, ತಮ್ಮ ತಮ್ಮ ಕಲ್ಮಾನುಸಾರವಾ ದ ಫಲವನ್ನು ಅನುಭವಿಸದೆ ತೀರದು! ಈ ವಿಷಯದಲ್ಲಿ ಯಾರೇ ನು ಮಾಡಬಲ್ಲರು? ನನ್ನ ಕ್ಷೇಮವನ್ನುದ್ದೇಶಿಸಿ ನೀನು ಸತ್ಯ