ಪುಟ:ಶ್ರೀಮತಿ ಪರಿಣಯಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕಂ. (ತೆರೆಯಲ್ಲಿ ನಾವ್ಯಧ್ವನಿಯಾಗುವುದು.) ಸೂತ್ರ-ಕಿವಿಗೊಟ್ಟು ಕೇಳಿ) ಆಹಾ ! ಏನಿದು ? ಎಲ್ಲಿಯೋ ಗೀತವಾದ್ಯ ಗಳೊಡಗೂಡಿದ ನಾಟ್ಯಧ್ವನಿಯು ಕೇಳಿಸುತ್ತಿರುವುದು! (ಪಾರಿಪಾರ್ಶ್ವಕನು ಸಂಭ್ರಮದಿಂದ ಬಂದು) ಪಾರಿ-ಭಾವಾ ! ತ್ವರೆಮಾಡು ! ತ್ವರೆಮಾಡು ! ದೇವರಾಜನಾದ ಮ ಹೇಂದ್ರನು, ಈಗಿನ ಶರನ್ಮಹೋತ್ಸವವನ್ನು ಅತಿವೈಭವದಿಂದ ನಡೆಸಬೇಕೆಂದುದ್ದೇಶಿಸಿ, ಆ ಉತ್ಸವಕಾರನಿದ್ವಾಹಕ್ಕಾಗಿ ಮನ್ಮ ಥನನ್ನೇ ನಿಯಮಿಸಿರುವನು. ಇದರಿಂದ ಕಾಮದೇವನು, ಆ ಉ ತೃವಕಾಲದಲ್ಲಿ ನಡೆಸಬೇಕಾದ ಗಾನನರ್ತನಾದಿ ಸಕಲಸನಾ ಹಗಳನ್ನು ಬಹಳಶ್ರದ್ಧೆಯಿಂದ ಸಿದ್ಧಗೊಳಿಸಿರುವನು. ಈ ಮ ಹೋತ್ಸವಾನಂದವನ್ನನುಭವಿಸುವುದಕ್ಕಾಗಿ ಸಮಸ್ತದೇವ ದಂಪತಿಗಳೂ ಸಾಭರಣಭೂಷಿತರಾಗಿ ಬಂದು ನೆರೆಯುತ್ತಿ ರುವರು. ಈ ಉತ್ಸವಾವಲೋಕನಕ್ಕಾಗಿ ನಾರದಾದಿಮಹ ರ್ಷಿಗಳೂ ಬರುತ್ತಿರುವರು. ಬಾ ! ನಾವೂ ಹೋಗುವೆವು! --ಸಂತೋಷದಿಂದ) ಓಹೋ ! ನಮ್ಮ ನಾಟಕಾರಂಭವೇ ಇದು! ಭದ್ರಕಾ ! ನೀನು ನನ್ನ ಪತ್ನಿ ಯನ್ನು ಕರೆದುಕೊಂಡು ಈಗಲೇ ಅಲ್ಲಿಗೆ ಹೊರಡು! ಇದೋ! ನಿಮ್ಮ ಹಿಂದೆಯೇ ನಾನೂ ಬಂದು ಸೇರುವೆನು. ಪಾರಿಅಪ್ಪಣೆ ! (ಪಾರಿಪಾರ್ಶ್ಚಕನು ಹೋಗುವನು.) ಸೂತ್ರ-ಮಿತ್ರನೆ : ಬಾ ! ನಾವೂ ಅಲ್ಲಿಗೆ ಹೋಗುವೆವು! ವಿದೂ- ಹಿಮ್ಮೊಗನಾಗಿ ತಿರುಗಿ, ಭರತಾಚಾರಾ ! ನೀನು ಹೋಗು! ನಾನೊಲ್ಲೆನು! ಊಟಮಾಡಿ ಸುಖವಾಗಿ ಮಲಗುವೆನು. ಸೂತ್ರ-7 ವಿದೂಷಕನ ಕೈಹಿಡಿದು ) ಏತ್ರನೆ ! ಏನಿದು ! ಆ ಮ ಹೋತ್ಸವಾನಂದವನ್ನನುಭವಿಸುವುದರಲ್ಲಿ ಒಬ್ಬೊಬ್ಬರೂ ಅ ಷ್ಟೊಂದು ಕುತೂಹಲವನ್ನು ತೋರಿಸುತ್ತಿರುವಾಗ, ನಿನಗೆ ಮಾತ್ರ ಬೇಸರವೇಕೆ ? ಸೂತ್ರ-ಸಂತಿ