ಪುಟ:ಶ್ರೀಮತಿ ಪರಿಣಯಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣ್ಯಂ ಕಂ|| ಕಲುಷಾತ್ಮರ ಹೃದಯಮನೇ ಕಲಗಿದೆ! ನೀಂ ಸತಪುಲಿಯನಿರಿವಂತಿಕೆ ಕೇ ಳೆಲೆಮದನ! ಯೋಗಬಲನಿ ಶೈಲಹೃದಯರ ಮುಂದೆ ನಿನ್ನ ಬಲಮೇಗೆಯ್ಯುಂ || ಮನ್ಮಥಂ-ದೇವರ್ಷಿ ! ಈ ಸಿನ್ನ ದೋಷಾರೋಪಣವೂ ಸಮಂಜಸವಲ್ಲ! ಯೋಗಬಲದಲ್ಲಿಯೂ, ಇಂದ್ರಿಯಜಯದಲ್ಲಿಯೂ, ತಪಸ್ಸಿನ ಕ್ಲಿಯೂ ವಿಶ್ವಾಮಿತ್ರ ಮಹರ್ಷಿಯು ನಿಮ್ಮೆಲ್ಲರನ್ನೂ ಮೀರಿಸಿ ದವನಲ್ಲವೆ ? ಅವನೂಕೂಡ ಮೇನಕೆಯಲ್ಲಿ ಮೋಹಪರಶನಾ ಗುವಂತೆ ಮಾಡಿದವನು ನಾನಲ್ಲವೆ ? ಮಹಾತಪಸ್ವಿಯೆನಿಸಿಕೊಂ ಡ ಆ ವಿಶ್ವಾಮಿತ್ರನ ತಪೋಜ್ವಾಲೆಯಿಂದ ಲೋಕವೆಲ್ಲವೂ ದಗ್ಧ ವಾಗುತಿದ್ದಾಗ, ಈ ಇಂದ್ರನ ಪ್ರೇರಣೆಯಿಂದ ನಾನು ಹೋ ಗಿ, ಅವನ ಮನಸ್ಸನ್ನು ಕದಲಿಸಿದುದರಿಂದಲ್ಲವೇ, ಇದುವರೆಗೆ ಇಂ ದ್ರಾದಿಲೋಕಗಳೆಲ್ಲವೂ ಕ್ಷೇಮದಿಂದಿರುವಂತಾಯಿತು! ಆ ವಿ ಶ್ವಾಮಿತ್ರನ ಸಂಗತಿಯೂ ಹಾಗಿರಲಿ ! ಕೇಳು. ಕಂ: ಪರಮತಪೋನಿಧಿಯೆನಿಸಿದ ಹರಂಗೆ ನಾ > ಗಿರಿಜೆಯಲ್ಲಿ ಮೊಹಾಂಕರಮಂ ನೆರಸದಿರಲ ತಾರಕಸಂ ಹರಣಕ್ಕವಕಾಶವಿನ್ನದೆತ್ತಣಿನಕ್ಕು೦?!! ಆ ಪರಮಶಿವನು ಪಾಶ್ವತಿಯನ್ನು ಮೋಹಿಸಿ, ಅವಳಲ್ಲಿ ತನ್ನ ತೇಜಸ್ಸಿನಿಂದ ಷಣ್ಮುಖನನ್ನು ಪಡೆದುದರಿಂದಲ್ಲವೇ, ಲೋಕ ಕಂಟಕನಾದ ಆ ತಾರಕಾಸುರನ ಬಾಧೆಯು ತಪ್ಪಿ,ತೈಲೋಕ್ಯ ಕ್ಕೂ ಕ್ಷೇಮವುಂಟಾಯಿತು. ಆ ರುದ್ರನಿಗಿಂತಲೂ ಲೋಕದಲ್ಲಿ ಜಿತೇಂದ್ರಿಯರು ಬೇರೊಬ್ಬರುಂಟೆ? ಆ ರುದ್ರನೇ ಕಾಲವಶದಿಂ ದ ನನ್ನ ಕಾಮಪಾಶಕ್ಕೆ ಸಿಕ್ಕಿಬಿದ್ದಿರುವಾಗ ಇತರರ ಮಾತೇನು? ನಾರದಮುನೀಂದ್ರಾ ! ಹೆಚ್ಚು ಮಾತಿನಿಂದೇನು ? ಕಾಲ ವು ಅನುಕೂಲಿಸಿಬಂದರೆ, ನೀನೂ ಎಂದಾದರೂ ಒಮ್ಮೆ ನನ್ನ