ಪುಟ:ಶ್ರೀಮತಿ ಪರಿಣಯಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃ ತಿ ಯಾ ೦ ಕ ೦ww ಆಸ್ಥಾನ:-ಆರಮನೆಯ ಉದ್ಯಾನದ ಮುಂದಿನ ಬಯಲು. (ಮನ್ಮಥನು, ಕಬ್ಬಿನ ಬಿಲ್ಲನ್ನೂ , ಪುಷ್ಪಬಾಣಗಳನ್ನೂ ಹಿಡಿದು, ಆತುರದಿಂದ ಪ್ರವೇಶಿಸುವನು.) ಮನ್ಮಥಂ-ಆಹಾ! ಆ ನಾರದನ ಮನಸ್ಸನ್ನು ಕದಲಿಸಬೇಕೆಂದು ಬಹಳ ಹೊತ್ತಿನಿಂದ ನಿರೀಕ್ಷಿಸುತ್ತಿದ್ದ ನನಗೆ, ಈಗ ತಕ್ಕ ಅವಕಾಶವು ಸಿಕ್ಕಿರುವುದು!ಈಗ ನಾರದನು ಈ ಉದ್ಯಾನವನವನ್ನು ಪ್ರವೇಶಿ ಸುವನು.ಸಹಜವಾಗಿಯೇ ಇಲ್ಲಿನ ಸನ್ನಿವೇಶಗಳು ಎಂತಹ ಜಿತೇಂ ಬ್ರಿಯರಿಗಾದರೂ ಕಾಮೋದ್ದೀಪನವನ್ನು ಂಟುಮಾಡುವಂತಿರು ವುವು.ಇದರಮೇಲೆ ನಾನು, ನನ್ನ ಪ್ರಿಯಮಿತ್ರನಾದ ವಸಂತ ನನ್ನು ಮುಂದಾಗಿಯೇ ಅಲ್ಲಿಗೆ ಕಳುಹಿಸಿ, ನಾರದನು ಅಲ್ಲಿಗೆ ಬರು ವಷ್ಟರಲ್ಲಿ,ಪುಷ್ಪ ಪಲ್ಲವಾದಿಸಮೃದ್ಧಿಗಳಿಂದ ಅದಕ್ಕೆ ಮತ್ತಷ್ಟು ಕಳೆಯೇರಿಸುವಂತೆ ಮಾಡುವೆನು. ಆ ಸನ್ನಿವೇಶವನ್ನು ಕಣ್ಣಿಂದ ನೋಡುವಾಗಲೇ, ನಾರದನಿಗೆ ಸಂದ್ರಿಯಗಳೂ ಕದಲುವು ವು. ಆದೇಸಮಯದಲ್ಲಿ ನಾನೂ ಕಣ್ಮರೆಯಾಗಿದ್ದು, ಈ ನನ್ನ ಪುಷ್ಪಬಾಣಗಳನ್ನು ಪ್ರಯೋಗಿಸುವೆನು. ಅವನ ಮನಸ್ಸು ಹೇಗೆ ಮೊಹಾಕುಲವಾಗದಿರುವುದೋ ನೋಡುವೆನು! ವೃ! ಲಲಿತೋದ್ಯಾನದ ಲಕ್ಷ್ಮಿ ಯಿಂ ಶುಕ ಪಿಕಪ್ರಧ್ಯಾನದಿಂ ಶೀತಲಾ ನಿಲಸುಸ್ಪರ್ಶನದಿಂ ಪ್ರಕೃಷ್ಣಸುಮನಸೌಗಂದ್ಯದಿಂ ಸತ್ಸಲಾ || ವಳಿಯಿಂದಾಮುನಿಯಂ ಮರುಳೊಳಿಸತಂ ಪಂಚೇಂದ್ರಿಯಕ್ಷೆಭದಿಂ | ಸಲೆ ವೈರಾಗ್ಯದ ಬೀಡೆನಿಪ್ಪ ಮನದೊಳಿ ಸೀಮೋಹಮಂ ಬಿತ್ತುವೆಂ || ಆಹಾ ! ದೇವೇಂದ್ರನು ನನಗೆ ಮಾಡಿದ ಗೌರವವನ್ನು ಸಹಿಸ ಲಾರದೆ, ದೇವಸಭೆಯಲ್ಲಿ ನನ್ನನ್ನು ನಿಂದಿಸಿ ಅವಮಾನಪಡಿ