ಪುಟ:ಶ್ರೀಮತಿ ಪರಿಣಯಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕ೦. ನಾರದಂ-(ಪರೈತನ ಕೈಯನ್ನು ಹಿಡಿದು) ಮಿತ್ರನೆ ! ಈ ವನಸನ್ನಿವೇಶ, ವನ್ನು ನೋಡಿದೆಯಾ ? ಇದು ಎಂತಹ ವಿರಕ್ತರಿಗೂ ವಿಷಯಾ ಭಿಲಾಷೆಯನ್ನು ಹುಟ್ಟಿಸುವಂತಿರುವುದು ನೋಡು ! ಪಕ್ವತಂ-ಹೌದು ! ಇಲ್ಲಿಗೆ ಕಾಲಿಡುವಾಗಲೇ ನನ್ನ ಮನಸ್ಸಿಗೂ ಏನೋ ಒಂದುವಿಧವಾದ ವಿಕಾರವು ತೋರುತ್ತಿರುವುದು. ನಾರದಂ-ಇದುವರೆಗೆ ನನ್ನ ಮನಸ್ಸಿಗೆ ಕೇವಲ ಅಸಹ್ಯವಾಗಿ ತೋರುತಿದ್ದ ಈ ಭೋಗಸಾಮಗ್ರಿಗಳೆಲ್ಲವೂ, ಇಲ್ಲಿ ಪ್ರಿಯವಾಗಿ ತೋರುತ್ತಿರು ವುವಲ್ಲಾ ! ಇದೇನಾಶ್ಚರೈವು! ಪಕ್ವತಂ-ಈ ಕಾರಣದಿಂದಲ್ಲವೇ ವಿರಕ್ತರಾದ ಯೋಗಿಗಳು, ಇಂತಹ ಭೋಗಸ್ಥಾನಗಳನ್ನು ಕಣ್ಣೆತ್ತಿಯೂ ನೋಡದೆ, ನಿರ್ಜನವಾದ ಕಾಡಿನಲ್ಲಿದ್ದು ಕಾಲವನ್ನು ಕಳೆಯುತ್ತಿರುವರು. ನಾರದಂ-ಹೌದು ! ನಿಜವೆ! ಈ ಉದ್ಯಾನದ ಒಂದೊಂದು ಸನ್ನಿವೇಶವೂ, ಮನಸ್ಸನ್ನಾಕರ್ಷಿಸುತ್ತಿರುವುದು. - ರಾಗ - ಕೇದಾರ - ರೂಪಕತಾಳ. ಅಂದಮಾಗಿ ತೋರ್ಪ್ಪದೀವನವು 1 ನೆರೆ ನೋಡು ನೋಡು ನೀ || ನಂದ || ಅಂದಮಾದಳಿ | ವೃಂದುಝೇಂಕೃತಿ | ಯಿಂದ ಮೊಪ್ಪುನದೀ | ವರ | ಸುಂದರೀವದ | ನೇಂದು ಬಿಂಬದೊ | ಲಂದ ಮಾದರ | ವಿಂದಬೃಂದದಿ || ನಂದ ||೧|| ಶೀತಲಾಂಬುಸ | ಮೇತ ಮಾಗಿಹ | ವಾತ (ವೀಜನದಿಂ| ಪರಿ! ತಮಾಗಿಹ | ಕೇತಕೀಸುತ | ವಾತದಿಂದತಿ! ರಮ್ಯಮಾದುದು||೨|| ಪಾರಿಜಾತದ | ಸೌರಭಂಗಳ | ಸಾರಮೀ ವನದೊಳ61 ಮಿತಿ | ಮೀರಿ|ಸೌಖ್ಯವ | ನೀರ (ರೆದೆಗೆ | ಬೀರುವಂತಿರೆ | ತೋರುತಿಪ್ಪುದು || ಅಂದ || 41) ಪರ್ವತಂ-ಮಿತ್ರನೆ ! ನೀನು ಹೇಳಿದುದು ನಿಜ ! ಇಂತಹ ದಿವ್ಯೂಬ್ಯಾ ನಗಳಲ್ಲಿ ವಿಹರಿಸತಕ್ಕ ಸಂಸಾರಿಗಳೇ ಭಾಗ್ಯಶಾಲಿಗಳೆಂದು ತೋ ರುತ್ತಿರುವುದು.