ಪುಟ:ಶ್ರೀಮತಿ ಪರಿಣಯಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Se ಶಿವಲೀಪರಿಣಯಂ ನಾರದಂ-ಮಿತ್ರನೆ ! ಕಾಮೋದ್ದೀಪಕಗಳಾದ ಈ ಸನ್ನಿವೇಶಗಳನ್ನು ನೋ ಡುತಿದ್ದಷ್ಟೂ ಮನಸ್ಸು ಕೆಟ್ಟು ಹೋಗುವುದು, ಇವೆಲ್ಲವೂ ನಮ್ಮ ವಿರಕ್ತಿಮಾರ್ಗಕ್ಕೆ ಪ್ರತಿಬಂಧಕಗಳು, ಇವುಗಳನ್ನು ನೋಡು ತಿರಬಾರದು. ಬಾ ! ಮುಂದಿನ ಕಾಠ್ಯವನ್ನು ನೋಡುವೆವು. (ಸ್ವಲ್ಪ ಮುಂದೆ ಹೋಗಿ) ಆಹಾ ! ಈ ಕಮಲಸರೋವರದಲ್ಲಿ ಚಕ್ರವಾಕಪಕ್ಷಿಯು, ಆಗಾಗ ತನ್ನ ಪ್ರಿಯೆಯನ್ನು ಮುದ್ದಿಸು ತ್ಯ, ಎಷ್ಟು ಸಂತೋಷದಿಂದಿರುವುದು ನೋಡು ! ಪರ್ವತ-ನಾನೂ ಅದನ್ನೇ ನೋಡುತ್ತಿರುವೆನು. ಛೇ ! ವಿರಕ್ತರಾದ ನ ಮಗ ಇವುಗಳಿಂದೇನು! ಮುಂದೆ ಬಾ ! (ಮುಂದೆ ಹೋಗಿ) ಮಿ ತ್ರನೆ ! ಈ ಲತಾಗೃಹವನ್ನು ನೋಡಿದೆಯಾ! ಇಲ್ಲಿ ಸ್ತ್ರೀಸಮೇ ತರಾಗಿ ವಿಹರಿಸತಕ್ಕವರು ಎಷ್ಟು ಧನ್ಯರೋ ! ನಾರದಂ-ಅಂತವರು ಪರಮಭಾಗ್ಯಶಾಲಿಗಳೆಂಬುದನ್ನು ಕೇಳಬೇಕೆ ? (ಹಿಂದಿನಿಂದ ರಾಜನು ಪ್ರವೇಶಿಸುವನು.) ರಾಜಂ-ಪೂಜ್ಯರೆ ! ಇತ್ತ ದಯಮಾಡಿಸಿ ಈ ಪೀಠವನ್ನಲಂಕರಿಸಬೇಕು. (ನಾರದಪರ್ವತರಿಬ್ಬರೂ ಕುಳ್ಳಿರುವರು. ರಾಜಂ-(ಶ್ರೀಮತಿಯನ್ನು ಕರೆದು, ಕುಮಾರೀ ! ಇದೋ ! ಲೋಕಪೂ ಜ್ಯರಾದ ನಾರದಪರ್ವತರಿಬ್ಬರೂ ನಮ್ಮ ಭಾದ್ರೋದಯದಿಂದ ನಿನ್ನ ಪ್ರತಸಮಾಪ್ತಿ ಕಾಲಕ್ಕೆ ಸರಿಯಾಗಿ ಅತಿಥಿಗಳಾಗಿ ಬಂದಿ ರುವರು. ಇವರ ಪಾದಾಭಿವಂದನವನ್ನು ಮಾಡಿ, ಅವರ ಅಮೋ ಫುವಾದ ಆಶೀರ್ವಾದಕ್ಕೆ ಪಾತ್ರಳಾಗು ! ರಾಜಂ-ಪೂಜ್ಯರೆ ! ಈಕೆಯೇ ನನ್ನ ಮಗಳು ! ಅನುಗ್ರಹಿಸಬೇಕು. ನಾರದಂ-ಕುಮಾರೀ ! ಉತ್ತಮಪತಿಯನ್ನು ಹೊಂದುವಳಾಗು. ಪರ್ವತಂ-ದೀರ್ಘಸುಮಂಗಲೀ ಭವ ! (ಕೈಯೆತ್ತಿ ಆಶೀರ್ವದಿಸುವರು.) (ಶ್ರೀಮತಿಯು ಎದ್ದು ನಿಂತಮೇಲೆ, ನಾರದಪರ್ವತರಿಬ್ಬರೂ ಅವಳ - ರೂಪಾತಿಶಯವನ್ನು ನೋಡಿ ಬೆರಗಾಗುವರು ) ಪರ್ವತಂ-(ಸ್ವಗತಂ) ಆಹಾ ! ಏನೀ ಅದ್ಭುತಸೌಂದಠ್ಯವು !