ಪುಟ:ಶ್ರೀಮತಿ ಪರಿಣಯಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕ೦. (ರಾಜನು ಪ್ರವೇಶಿಸುವನು.) ರಾಜಂ ಪೂಜ್ಯರೆ ! ವಂದಿಸುವೆನು, ವಸಿಷ್ಟಾಜ್ಞೆಯಂತೆ ಶ್ರೀಮತೀಕುಮಾ ರಿಯನ್ನು ದೇವತಾಸಾನ್ನಿಧ್ಯದಲ್ಲಿ ಬಿಟ್ಟು ಬಂದೆನು, ಅಲ್ಲಿ ನಡೆಯ ಬೇಕಾದ ಅಭ್ಯುದಯಕಾರಗಳೆಲ್ಲವೂ ನಡೆದುವು. ಇನ್ನು ತಾವು ಅರಮನೆಗೆ ಬಂದು ಆತಿಥ್ಯವನ್ನು ಸ್ವೀಕರಿಸಬಹುದಷ್ಟೆ ! ನಾರದಂ-(ಸ್ವಗತಂ) ರಾಜನಿಗೆ ನನ್ನ ಉದ್ದೇಶವನ್ನು ರಹಸ್ಯವಾಗಿ ತಿಳಿ ಸುವುದಕ್ಕೆ ತಕ್ಕ ಅವಕಾಶವು ಸಿಕ್ಕಿರುವುದು ಕೇಳಿ ಬಿಡುವೆನು. (ಪ್ರಕಾಶಂ) ರಾಜೇಂದ್ರಾ! ರಾಜಂ-ಪೂಜ್ಯರೆ ! ಅನುಗ್ರಹಿಸಬೇಕು. ನಾರದಂ-(ಸ್ವಗತಂ) ಅಯ್ಯೋ! ಲಜ್ಜೆಯು ಬಾಧಿಸುತ್ತಿರುವುದು, ಏನು ಮಾಡಲಿ ! (ಎಂದು ಯೋಚಿಸುತ್ತ ಸುಮ್ಮನೆ ನಿಲ್ಲುವನು.) ರಾಜಂ-ಮುನೀಂದ್ರಾ: ತಮ್ಮ ಮನಸ್ಸು ಏನೋ ಚಿಂತಾಕುಲವಾಗಿರುವ ಹಾಗಿದೆ ! ದೇಹಕ್ಕೇನೂ ಆಯಾಸವಿಲ್ಲವಷ್ಟೆ ? ನಾರದಂ- ಸ್ವಗತಂ) ಇನ್ನು ಸುಮ್ಮನಿರುವುದಕ್ಕಿಲ್ಲ! ಏನಾದರೂ ಉಪಾ ಯಾಂತರದಿಂದ ನನ್ನ ಉದ್ದೇಶವನ್ನು ತಿಳಿಸಿಬಿಡುವೆನು, (ಪ್ರಕಾ ಶಂ)ರಾಚಾ ! ನನಗೆ ಬೇರೆ ಚಿಂತೆಯೇಸಿರುವುದು? ನಿನ್ನ ಚಿಂತೆಯೇ ನನ್ನ ಚಿಂತೆ! ನಿನ್ನ ಸ್ಥಿತಿಗಾಗಿಯೇ ನನ್ನ ಮನಸ್ಸು ಪರಿತಪಿಸುತ್ತಿ ರುವುದು, ರಾಜಂ-ಪೂಜ್ಯರೆ ! ಅದೇನು? ನನಗಾಗಿ ತಾವು ಪರಿತಪಿಸಬೇಕಾದ ಕಾರಣ ವೇನು ? ನಾರದಂ-ಬೇರೇನಿದೆ ? ನೀನು ನಿನ್ನ ಕುಮಾರಿಯ ವಿವಾಹಪ್ರಯತ್ನ ಕ್ಲಾ ಗಿ ಈಗ ವಹಿಸುತ್ತಿರುವ ಶ್ರಮವನ್ನು ನೋಡಿ, ನನಗೆ ಬಹಳ ಪರಿತಾಪವಾಗುವುದು. ಮೊದಲು ನಾನೇ ನಿನಗೆ ನೃತ್ಯವನ್ನು ಹೇಳಿ ಸಮಾಧಾನಪಡಿಸಿದವನಾದರೂ, ಈಗೀಗ ನಿನ್ನ ಮಗಳ ವಿವಾಹವಿಷಯವಾರ ಚಿಂತೆಯು ನಿನಗಿಂತಲೂ ನನಗೆ ಹೆಜ್ಜೆ 0 ದು ತಿಳಿ ! 4