ಪುಟ:ಶ್ರೀಮತಿ ಪರಿಣಯಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಶ್ರೀಮತೀಪರಿಣಯಂ ಅದನ್ನೇ ಬಯಸುತಿದ್ದೆನು. ಈಗ ನಾನು ಬೇರೊಬ್ಬರ ಕಣ್ಣಿಗೆ ಮರೆಯಾಗಿರುವುದೇ ಮೇಲೆಂದು ತೋರುವುದು, ಇಲ್ಲ ದಿದ್ದರೆ ನನ್ನ ಸ್ಥಿತಿಯು ಕೇವಲಹಾಸ್ಯಾಸ್ಪದವಾಗುವುದು, ಅದರ ಕ್ಲಿಯೂ ನಾರದನಿಗೆ ನನ್ನ ಸ್ಥಿತಿಯು ತಿಳಿದರೆ,ನನ್ನನ್ನು ಸುಮ್ಮನೆ ಬಿಡುವನೆ ? ಆಹಾ! ಜಿತೇಂದ್ರಿಯನೆಂದರೆ ಆ ನಾರದನಿಗೇ ಸಲ್ಲು ವುದು, ಅವನೂ ಆ ಕನ್ಯಾರತ್ನ ವನ್ನು ಕಣ್ಣಿಂದ ನೋಡಿದವ ನಾದರೂ, ನನ್ನಂತೆ ಮೋಹಪಾಶಕ್ಕೆ ಸಿಕ್ಕಿಬಿಳದೆ ಧೈಯ್ಯದಿಂದಿರು ದನ್ನು ನೋಡಿ ನನಗೇ ಆಶ್ಚರವಾಗುವುದು! ಯಾವಯಾವ ವಿಧ ದಿಂದಲೂ ಈ ನನ್ನ ಚಪಲಬುದ್ಧಿಯನ್ನು ತಪ್ಪಿಸುವುದಕ್ಕೆ ನನಗೆ ಸಾಧ್ಯವಲ್ಲ ! ಇದಕ್ಕೇನು ಮಾಡಲಿ ! ಆಹಾ ! ಲೋಕದಲ್ಲಿ ಎಷ್ಟೆ ಕ್ರೂರವ್ಯಾಧಿಗಳನ್ನಾ ದರೂ ತಕ್ಕ ಚಿಕಿತ್ಸೆಗಳಿಂದ ಪರಿಹರಿಸ ಬಹುದು ! ಎಷ್ಟೆ ಕ್ರೂರಗ್ರಹಗಳನ್ನಾ ದರೂ, ಮಂತ್ರಬಲ ದಿಂದ ನೀಗಿಸಬಹುದು ! ಈ ಮನ್ಮಥಪಿಶಾಚವು ಹಿಡಿದಮೇಲೆ, ಅದನ್ನು ಬಿಡಿಸುವುದಕ್ಕೆ ಯಾವ ಉಪಾಯವೂ ಸಾಧ್ಯವೆಂದು ತೋರಲಿಲ್ಲ. ಕoll ಮಣಿಮಂತಷಧಮಂ ಕಡೆ ಗಣಿವುದು !'ಜಪಹೋಮದಾನದೇವಾರ್ಚನೆಯಂ | ಗಣನೆಗೆ ತಾರದು! ಸುಮಹೋ ಮೀ ಮನ್ಮಥಪಿಶಾಚಜನಿತಾವೇಶಂ || ನಿಜವಾಗಿಯೂ ಆಮನ್ಮಥನ ಮಹಿಮೆಯೇ ಮಹಿಮೆ: ತೈಲೋ ಕ್ಯವಿಜಯಿಯೆಂದರೆ ಅವನೊಬ್ಬನಿಗೇ ಸಲ್ಲುವುದು! ಏಕೆಂದರೆ; ಕಂ|| ಹರನಾತ್ಮಫಾಲನೇತ್ರದಿ ನುರುಪಿದೊಡೇಂ ಸ್ಮರನ ದೇಹಮಂ ! ತದ್ವಿರ | ಸುರಕಮನಿಸುಂ ನಂದಿಸ ಲರಿದನೆ? ದುರ್ದಮನೆ ! ಮದನರ್ನಾ೦ ಧರೆಯೋಲೆ || ತ್ರಿಲೋಕಸಂಹಾರಿಯಾದ ರುದ್ರನಿಗೇ ಅಶಕ್ಯವಾಗಿರುವಾಗ, ಆ ಮನ್ಮಥನ ಪ್ರಾಬಲ್ಯವನ್ನು ಮುರಿಯಬೇಕೆಂದರೆ ನನ್ನಿಂ