ಪುಟ:ಶ್ರೀಮತಿ ಪರಿಣಯಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕಂ 林 ದ ಸಾಧ್ಯವೆ ? ಎಂದಿಗೂ ಇಲ್ಲ ! ಈ ನನ್ನ ಬುದ್ಧಿಮೋಹ ವನ್ನು ತಗ್ಗಿಸಬೇಕೆಂದರೆ, ಆ ಕಳ್ಳಿಯನ್ನು ಕೈಸೇರಿಸಿಕೊಳ್ಳಬೇ ಕಾದುದೊಂದಲ್ಲದೆ ಬೇರೆ ಉಪಾಯವಿಲ್ಲ ! ಇದಕ್ಕೇನು ಮಾ ಡಲಿ ! ನನ್ನ ಮನೋಗತವನ್ನು ನಾನಾಗಿಯೇ ಹೋಗಿ ರಾಜನಿಗೆ ತಿಳಿಸಿಬಿಡಲೆ ? ಹೇಗೆ ತಿಳಿಸಲಿ ! ಲಜ್ಜೆಯು ಬಾಧಿಸುತ್ತಿರು ವುದಲ್ಲಾ! ಇದಲ್ಲದೆ ನನ್ನ ಮಿತ್ರನಾದ ನಾರದನೂ ಈಗ ರಾಜನ ಸಂಗಡಲೇ ಇರುವನು, ಈ ವಿಚಾರವು ಅವನಿಗೆ ತಿಳಿದರೆ, ನನ್ನನ್ನು ಎಷ್ಟು ಹಾಸ್ಯಮಾಡುವನು ! (ಆಲೋಚಿಸಿ) ಇರಲಿ ! ಇದಕ್ಕೆ ಬೇರೊಂದುಪಾಯವನ್ನು ಮಾಡುವೆನು. ಈಗ ನಾನು ನೆಟ್ಟಗೆ ರಾಜಪತ್ನಿ ಯಬಳಿಗೆ ಹೋಗಿ, !ನಾರದನಿಗೆ ತಿಳಿಯದಂತೆ ಅವಳಿಗೆ ನನ್ನ ಮನೋಗತವನ್ನು ತಿಳಿಸುವೆನು, ನಯಭಯಗಳಿಂದ ಅವಳ ನ್ಯೂ ಪ್ಪಿಸಿ, ಮೊದಲು ಅವಳಿಂದ ವಾಗ್ದಾನವನ್ನು ಮಾಡಿಸಿ ಕೊಂಡರೆ, ನನ್ನ ಉದ್ದೇಶವು ಕೈಗೂಡುವುದರಲ್ಲಿ ಸಂದೇಹವಿಲ್ಲ ! ಅವಳು ಬಹಳ ಸಾಧುಸ್ವಭಾವವುಳ್ಳವಳಾದುದರಿಂದ, ಆಡಿದ ಮಾ ತಿಗೆ ತಪ್ಪಲಾರದೆ ರಾಜನನ್ನು ನಿರ್ಬಂಧಿಸುವಳು ! ಆಮೇಲೆ ಈ ವಿಷಯವು ನಾರದನಿಗೆ ತಿಳಿದರೂ ಭಯವಿಲ್ಲ ! ಈಗ ಇದೇ ಕಾಲೋಚಿತವಾದ ಉಪಾಯವು. ಇನ್ನು ಹೋಗುವೆನು. (ಹೋಗುವನು) -ಅಂತಃಪುರ. (ರಾಜಪತ್ನಿ ಯು ಸಖೀಸಮೇತಳಾಗಿ ಕುಳಿತಿರುವಳು) ರಾಜಪತ್ತಿ -ಸಖಿ ! ನಮ್ಮ ಶ್ರೀಮತೀಕುಮಾರಿಯಿಂದ ಇದುವರೆಗೆ ಎಷ್ಟೊವ್ರತೋಪವಾಸಗಳನ್ನು ನಡೆಸಿದುದಾಯಿತು: ಇನ್ನೂ ಅದಕ್ಕಾಗಿ ನಡೆಸಬೇಕಾದ ಅಭ್ಯುದಯಕಾಠ್ಯಗಳೆಲ್ಲವನ್ನೂ ನಡೆ ಸಿದುದಾಯಿತು. ಇಷ್ಟಾದರೂ ಮನಸ್ಸಿಗೆ ನೆಮ್ಮದಿಯಿಲ್ಲದೆ, ಅದೇ ಚಿಂತೆಯು ನನ್ನನ್ನು ಬಾಧಿಸುತ್ತಿರುವುದು.