ಪುಟ:ಶ್ರೀಮತಿ ಪರಿಣಯಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಸಖಿ ದೇವಿ ! ನಿನ್ನನ್ನು ಪರೀಕ್ಷಿಸಿ ಆಮಹರ್ಷಿಗಾಗಬೇಕಾದುದೇನು ? ನಿಜವಾಗಿಯೇ ಅವನು ನಿನ್ನ ಮಗಳನ್ನು ಮೋಹಿಸಿರಬಹುದು. ನಿನ್ನ ಮಗಳ ರೂಪಲಾವಣ್ಯಗಳು ಯಾರನ್ನು ತಾನೇ ಮೋಹ ಗೊಳಿಸುವುದಿಲ್ಲ ! ರಾಣಿ-ಸಖಿ ! ಹಾಗಲ್ಲ ! ವಿಶ್ವಾಮಿತ್ರಮಹರ್ಷಿಯು ಹಣದಾಸೆ ಉಂದ ಹರಿಶ್ಚಂದ್ರನಲ್ಲಿ ದಕ್ಷಿಣೆಯನ್ನು ಬೇಡಿದನೆ ? ಅದರಂತೆಯೇ ಈಗ ಲೂ ಈ ಪಕ್ವತಮುನಿಯು, ಯಾವ ಉದ್ದೇಶದಿಂದ ಕೇಳಿರುವ ನೋ ಯಾರು ಬಲ್ಲರು! ಅವನಂತೂ ನನ್ನನ್ನು ನಿರ್ಬಂಧಿಸಿ, ನನ್ನಿ೦ ದ ವಾಗ್ದಾನವನ್ನು ಮಾಡಿಸಿಕೊಂಡಿರುವನು. ಸಖಿ! ಆದುದಾ ಯಿತು! ಮೊದಲು ನಾನು ಈ ವಿಚಾರವನ್ನು ಆರಪುತ್ರನಲ್ಲಿ ತಿಳಿಸಿ ದಹೊರತು ಮನಸ್ಸಿಗೆ ಸಮಾಧಾನವಿಲ್ಲ ! ನೀನು ಹೋಗಿ ಅಲ್ಲಿನ ಸಮಯವನ್ನು ತಿಳಿದು ಬಾ ! ಸಖಿಯು ಹೋಗಿ ಆತುರದಿಂದ ಹಿಂತಿರುಗಿ ಬಂದು) ದೇವಿ ! ಇದೆ ! ಮಹಾರಾಜನೇ ನಿನ್ನಲ್ಲಿಗೆ ಬರುತ್ತಿರುವನು. (ಮಹಾರಾಜನು ಪ್ರವೇಶಿಸುವನು, ರಾಣಿಯು ಸಂಭ್ರಮದಿಂದೆದ್ದು ಬಂದು) ರಾಣಿ-ನಾ ಥಾ ! ಅತ್ಯವಶ್ಯವಾದ ಒಂದು ವಿಷಯವನ್ನು ಕುರಿತು ಮಾ ತಾಡುವುದಕ್ಕಾಗಿ, ಈಗಲೇ ನಾನು ನಿನ್ನ ಸಮಯವನ್ನು ತಿಳಿದು ಬರುವಂತೆ ಈ ನನ್ನ ಸಖಿಯನ್ನು ಕಳುಹಿಸಿದನು. ಇಷ್ಟರಲ್ಲಿ ನೀನಾಗಿ ಇಲ್ಲಿಗೆ ಬಂದುದು ಬಹಳ ಅನುಕೂಲವಾಯಿತು! ರಾಜಂ-ನಿನ್ನ ಕಾರಕ್ಕಿಂತಲೂ ಈಗ ನಾನು ಬಂದ 'ಕಾರವು ಇನ್ನೂ ಅತ್ಯವಶ್ಯವಾದುದು! ಅದು ಹಾಗಿರಲಿ ! ಮೊದಲು ನಿನ್ನ ಕಾಲ್ಯ ವೇನೆಂಬುದನ್ನು ತಿಳಿಸಿಬಿಡು ! ಆಮೇಲೆ ನನ್ನ ಸಂಗತಿಯನ್ನು ವಿವರವಾಗಿ ತಿಳಿಸುವೆನು. ಇದು ಬಹಳರಹಸ್ಯವಾದ ಸಂ ಗತಿ ! (ಸಖಿಯನ್ನು ನೋಡಿ) ಮದನಿಕೆ ! ಅತಿಥಿಗಳಾಗಿ ಬಂದ ನಾರದಪರೈತರಿಬ್ಬರೂ, ಮಾಧ್ಯಾ ಕಾ ನಾರವಾಗಿ ನದಿಗೆ ಹೋಗಿರುವರು : ನೀನು ಹೋಮಶಾಲೆಯ ಬಾಗಿಲಲ್ಲಿ ನಿರೀಕ್ಷಿಸು ತಿದ್ದು, ಅವರು ಬಂದೊಡನೆ ಇಲ್ಲಿ ಬಂದು ನನಗೆ ತಿಳಿಸು !