ಪುಟ:ಶ್ರೀಮತಿ ಪರಿಣಯಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣ್ಯಂ ಕ್ಯಾಗಿ ನದಿಗೆ ಹೋದುದೇ ತಪ್ಪಾಯಿತು, ಮಾಧ್ಯಾಕ್ಷಿ ಕವನ್ನು ನಂಬಿ ನಾನು ಮೋಸಹೋದೆನು, ಆ ಮಾಧ್ಯಾಕ್ಷಿ ಕವೇ ನನ್ನನ್ನು ಕೆಡಿಸಿತು! ಆ ವೈದಿಕಮಾರ್ಗಕ್ಕೂ, ಈ ಕಾಮಮಾರ್ಗಕ್ಕೂ ಸಂ ಬಂಧವೆಲ್ಲಿ! ಯೋಗಿಗಳ ಮಾರ್ಗವೇ ಬೇರೆ! ಭೋಗಿಗಳ ಮಾರ್ಗ ವೇಬೇರೆ ! ಅದಕ್ಕೂ ಇದಕ್ಕೂ ಗಂಟುಹಾಕಿದರೆ ಸರಿಬೀಳುವುದೆ? ಇದರಿಂದ ನಾನು ಆಶಾಭಂಗಕ್ಕೂ ಅಪಹಾಸ್ಯಕ್ಕೂ ಗುರಿಯಾಗು ವಂತಾಯಿತಲ್ಲಾ ! ಇದಕ್ಕೇನು ಮಾಡಲಿ ಅಥವಾ ಇರಲಿ ! ಈಗ ನಾನು ಕೈಹಿಡಿದ ಕಾಠ್ಯಕ್ಕೆ ಇವೆಲ್ಲವೂ ಸಹಜವಾದ ಲಕ್ಷ ಣಗಳೇ ಆಗಿರುವುವು. ಇದಕ್ಕಾಗಿ ಚಿಂತೆಯೇಕೆ ? ಕಾಮಿಗಳ ಆವ ಸೈಯೇ ಈ ವಿಧವಾದುದು ! ಕಂ, ಅವಮಾನಕ್ಕೀಡಾಗದೆ | ಯವಿರತಚಿಂತಾಗ್ನಿಯಿಂದ ಬೇಯದೆ ನಿಮ್ಮ ! € ವ್ಯವಧಿಯೊಳಳಲದೆ ಕಾಮುಕ ! ನಿವಹಕ್ಕೆ ನಿಚೇಷ್ಟಸಿದ್ಧಿ ಸುಖದಿಂದಹುದೇ ? ಆದುದರಿಂದ ಈಗ ನಾನು ಹಿಡಿದ ಕಾರದಲ್ಲಿ ಎಷ್ಟೇ ಅವಮಾನ ವಾದರೂ ಆಗಲಿ ! ಎಷ್ಮೆ ವಿಷ್ಣು ಗಳು ಬಂದರೂ ಬರಲಿ! ಎಷ್ಟೇ ವಿಧದಲ್ಲಿ ಆಶಾಭಂಗವಾದರೂ ಆಗಲಿ ! ಹಿಂತೆಗೆಯಬಾರದು! ರಾಜನು ನಮಗೆ ಮಾಡಬೇಕಾದ ಆತಿಥ್ಯವನ್ನು ಮುಗಿಸಿ, ಸ್ವಯಂ ವರಪ್ರಸ್ತಾವನ್ನು ಹೇಳಿದಕೂಡಲೆ, ಪರೈತನು, ಅಲ್ಲಿ ನಿಮಿಷಮಾ ತ್ರವೂ ನಿಲ್ಲದೆ ಹೊರಟುಹೋದನು. ಅವನಿಗೂ ನನ್ನಂತೆ ಆಶಾ ಭಂಗವುಂಟಾದುದಕ್ಕಾಗಿ ನಾಚಿಕೆಯಿಂದ ನನಗೆ ಮುಖವನ್ನು ತೋರಿಸಲಾರದೆ ಹೊರಟುಹೋದನೋ, ಇಲ್ಲವೇ ಬೇರೆ ಯಾವು ದಾದರೂ ಕಾರೋದ್ದೇಶದಿಂದ ಹೋದನೋ ತಿಳಿಯುವುದಕ್ಕಿಲ್ಲ. ಹೇಗಾದರೂ ಇರಲಿ ! ನಾನೂ ಅದನ್ನೇ ಬಯಸುತಿದ್ದೆನು, ಈ ಗನಾನು ನಾಳೇ ಸ್ವಯಂವರಕಾಲದಲ್ಲಿ ಶ್ರೀಮತಿಯು ಅವನನ್ನು ವರಿಸದಹಾಗೆ ಮಾಡಬೇಕು, ಇದಕ್ಕೇನುಪಾಯವನ್ನು ಮಾಡಲಿ!